ಪುಟ:ಅರಮನೆ.pdf/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅರಮನೆ

೨೫೭

ಮಗ್ನಾಗಿದ್ದನು. ನಡುನಡುವೆ ತನ್ನ ಹೆಂಡತಿ ಕ್ಯಾಥರೀನಳು ಗೇಟ್ ಬ್ರಿಟನ್ನಿಗೆ.
ಯಷ್ಟು ದೂರದಲ್ಲಿ ಪಯಣಿಸುತ್ತಿರ ಬೌದೆಂದೂ ಯೋಚಿಸುತ್ತಲಿದ್ದನು. ಯಿನ್ನು
ಮುಂದೆ ಯಾವತ್ತೂ ಆಕೆಯನ್ನು ತಾನಾಗಲೀ, ತನ್ನನ್ನು ಆಕೆಯಾಗಲೀ ಭೆಟ್ಟಿ
ಮಾಡುವುದು ಅಸಂಭವ. ತಾನ್ಯಾಕೆ ಭೂತಕಾಲವನ್ನು ಮೆಲುಕುಹಾಕುತ್ತ
ವರ್ತಮಾನವನ್ನು ಯಿರೂಪಗೊಳಿಸಿಕೊಳ್ಳುವುದು ಛೇ.. ಛೇ.. ಥರವಲ್ಲ ತಗಿ
ನಿನ್ನ.. ಯಂದು ತಾನು ಮುಂದೆ ಯೇನು ಮಾಡಬೇಕಿದೆ? ಯೇನು
ಮಾಡಬಾರದಿದೆ? ಮಿಷನರಿ ಪೂರಣಗೊಂಡ ಬಳಿಕ ವುದ್ಘಾಟನಾ ಕಾರ್ಯಕ್ಕೆ
ಸರ್ ಥಾಮಸ್ ಮನ್ರೋನನ್ನು ಆಮಂತ್ರಿಸುವುದೋ? ಜನಾನುರಾಗಿ ಬೊಬ್ಬಿಲಿ
ನಾಗಿರೆಡ್ಡಿಯನ್ನು ಆಮಂತ್ರಿಸುವುದೋ? ಅಥವಾ ಸ್ರೀರಂಗಪಟ್ಟಣದ ಕಡೇಲಿಂದ
ಫಾದರಿ ದುಬಾಯಿಸು ಸ್ವಾಮಿಯನ್ನು ಆಮಂತ್ರಿಸುವುದೋ ಯಂದು
ಯೋಚಿಸುತಲಿದ್ದನೆಂಬಲ್ಲಿಗೆ.. .
ಅದೇ ಗುಂತಕಲ್ಲು ಸೀಮೆಯ ಸರುವನ್ನೊಂದು ಗ್ರಾಮಗಳಲ್ಲಿ
ಮುಂದೊಂದಿನ ಬೊಬ್ಬಿಲಿ ನಾಗಿರೆಡ್ಡಿಯೂ, ಕಲೆಟ್ಟರು ಸಾಹೇಬನೂ
ಅಣ್ಣತಮ್ಮಂದಿರಂಗೆ ಯದುರು ಬದುರು ಕೂಕೊಂಡು ವುಂಬುತಾರಂತಲ್ಲಾ
ಯಂಬ ಸುದ್ದಿಯನ್ನು ಕಿವಿಯಿಂದ ಬಾಯಿಗೆ, ಬಾಯಿಯಿಂದ ಕಿವಿಗೆ
ವುರುಳಿಸಾಡುತ ಜಮಡಲಾರಂಭಿಸಿದ್ದರು. ತರನೇಕಲ್ಲಿನ ಮುತುಕೂರು
ಗವುಡಪ್ಪನನ್ನೇ ಬಿಡದ ಪರಂಗಿ ಮಂದಿಗೆ ತಮ್ಮ ನಾಗಿರೆಡ್ಡಣ್ಣ ಯಾವ ಲೆಕ್ಕ?
ಪರಂಗಿ ಮಂದಿ ಮೊದಲೇ ಮನುಷ್ಯರ ಪಯ್ಲಿ ಅಲ್ಲ.. ಪರಪಂಚದಿಂದ
ಪರಪಂಚಕ್ಕೆ ಹೊಟ್ಟೆ ಹೊರೆಯುವ ಸಲುವಾಗಿ ಬಂದಿರುವಂಥಾ ಅವರು
ಕೂದಲು ಸೀಳುವ ಯಿದ್ದೆಯಲ್ಲಿ ನಿಷ್ಣಾತರು.. ಅವರಿಗೆ ಅಣ್ಣ ತಮ್ಮ, ಅಕ್ಕ
ತಂಗಿ ಅಂದರೇನು ಗೊತ್ತು? ಆ ಬೆರಕೀ ಮಂದಿಗೆ ನನ್ನೋರು ತನ್ನೋರು
ಯಂಬುವವರು ಇದ್ದರ ತಾನೆ? ಅಂಥ ಅವರ ಬಣ್ಣದ ಮಾತುಗಳಿಗೆ ತಮ್ಮ
ನಾಗಿರೆಡ್ಡೆಣ್ಣ ಮರುಳಾಗಧಂಗದಾನ.. ಮಯ್ಯನ ಮರತಂಗ ಅದಾನ.. ಯಿದು
ತರವಲ್ಲ.. ಆತನ್ನ ಕಂಡು ಪರಂಗಿ ಮಂದಿಯ ಹಕೀಕತ್ತನ್ನು ಯಿವರಿಸಬೇಕು...
ಯಿಲ್ಲದಾನ. ಅಲ್ಲದಾನ.. ಯಲ್ಲದಾನ.. ಅಯ್ಯೋ ಸಿವನ. ಅವಯ್ಯ ಯಲ್ಲಲ್ಲೋ
ಯಿದ್ದಾಂಗ ಅದಾನಲ್ಲ.. ಹಗ್ಗಕೊಟ್ಟು ಕಯ್ನ ಕಟ್ಟಿಸಿದಂಗಾತಾನಲ್ಲ... ಅಯ್ಯೋ
ಪರಮಾತುಮ.. ನೀನೇ ಅವಯ್ಯನ ಕಾಪಾಡಬೇಕು... ಯಂದನಕಂತ ಯಲ್ಲೆಲ್ಲೋ
ಯಿದ್ದ ಮಂದಿ ಅಲ್ಲಲ್ಲೇ ಗಡೇಕಲ್ಲ ತವನಿಧಿ ಭೀಮಲಿಂಗೇಶ್ವರ ಸ್ವಾಮಿಯನ್ನು