ಪುಟ:ಅರಮನೆ.pdf/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೮

ಅರಮನೆ


ಕಯ್ಯನ ಮುಗುದು ಬೇಡಿಕೋತಿದ್ದರು ಯಂಬಲ್ಲಿಗೆ ಸಿವಸಂಕರ ಮಾದೇವಾss....
ಅತ್ತ ಹರಪನಹಳ್ಳಿ ಸೀಮೆಯೊಳಗ ಸಿರುಬಿಯ ಸಿಮ್ಮಾಸನವನ್ನು
ಕೊಳದಯ್ಯಸ್ವಾಮಿ, ಅಲಬೂರಿನ ಸಿಲಾ ಸಿಮ್ಮಾಸನವನ್ನು
ಕಣುವಯ್ಯಸ್ವಾಮಿಯೂ, ಬತ್ತನಳ್ಳಿಯೊಳಗ ವಂದು ಜಡೀಮಳಗೆ
ಬಿದ್ದು ಹೋಗುವಂತಿದ್ದ ಅರಮನೆಯನ್ನು ಗಡ್ಡಯ್ಯ ಸ್ವಾಮಿಯೂ ತಮ್ಮ ತಮ್ಮ
ಕಮಂಡಲುಧಾರಿ ಶಿಷ್ಯರುಂದದವರಿಂದ ಕಬ್ಬಾ ಮಾಡಿಕೊಂಡು ಆಳ್ವಿಕೆ ನಡೆಸಿದ್ದರೆ,
ಯಿತರೇ ಹಲವು ಮಾರುಗಳ ಪ್ರಜೆಗಳು ತಲಾ ಯಿಷ್ಟಿಷ್ಟು ವಂತಿಗೆ ಹಾಕಿ
ತಮ್ಮ ಪಯ್ಕಿ ಕೆಲ ಮುಖಂಡರನ್ನು ಸಿಪಾಯಿಗಳನ್ನು ಸಾಯಮಾಡುವಂತೆ
ಕೋರಲು ಕುಂಪಣಿ ಅಧಿಕಾರಿಗಳಿದ್ದಲ್ಲಿಗೆ ಕಳುವಿದ್ದರಷ್ಟೆ. ಮುಖಂಡರ ಪಯ್ಕಿ
ಕೆಲವರು ಅರ್ಧದಾರಿ ಮಟ ಹೊಗಿ 'ಯಿದು ಪಾಡಲ್ಲ' ಯಂಬ
ಗ್ನಾನೋದಯಗೊಂಡು ವಾಪಾಸು ಬಂದರೆ, ಕೆಲವರು ವಂತಿಗೆ ಸಮೇತ
ಅಲ್ಲಿಗೂ ಹೋಗದೆ, ಯಿಲ್ಲಿಗೂ ಬಾರದೆ ಮಂಗಮಾಯವಾಗಿಬಿಟ್ಟಿದ್ದರು.. ಮತ್ತೆ
ಕೆಲವರು ಪ್ರಾಮಾಣಿಕವಾಗಿ ಗುರಿ ತಲುಪಿ ಅರಕೆ ಮಾಡಿಕೊಂಡಿದ್ದಕ್ಕೆ ಕುಂಪಣಿ
ಅಧಿಕಾರಿಗಳು ನಿಮ್ಮೂರೊಳಗಿರುವುದು ವಂದು ಅರಮನೆಯೇನು? ವಂದು
ದುಗ್ಗಾಣಿ ಸಹಯಿಲ್ಲದ ಬೊಕ್ಕಸ ವಂದು ಬೊಕ್ಕಸವಾ ನಿಮಗs ತಿಂಬಲಕ
ಯಿಲ್ಲ ಅಂಬುತೀರಿ, ನಮ್ಮ ಸಿಪಾಯಿಗಳಿಗೆ ಯೇನು ತಿಂಬಲಕ ಕೊಡುತೀರಿ?
ಯೇನು ಕುಡಿಯಲಕ ಕೊಡುತೀರಿ ನೀವು ಕೇಳೋದು ಸಜ್ಜಲ್ಲ.. ನಾವು
ಕಳುವೋದು ಸಜ್ಜಲ್ಲ.. ನಿಮದು ನೀವ ನೋಡಿಕೊಳ್ಳಿರಿ ಯಂದು
ಯವಹಾರಿಕವಾಗಿ ಆಡಿಕೊಳ್ಳಲಕ, ಕೆಲವು ಮರಗಳ ಅರಮನೆಗಳಂತೂ
ಹರೇದವರು ತುಡುಗು ಕೆಲಸ ಕಾರೇವುಗಳ ಕಾರಾಸ್ಥಾನವಾಗಿಬಿಟ್ಟಿದ್ದವು. ಕೆಲವು
ಮೂರುಗಳಂತೂ ತಮ್ಮನ್ನಾಳುವ ರಾಜರಿಲ್ಲದೆ ಯಿಧವೆಯ ಮುಖದಂತೆ ಬಿಕೋ
ಅನ್ನಲಾರಂಭಿಸಿದ್ದವು.
ಅತ್ತ ಕೂಡ್ಲಿಗಿ ಪಟ್ಟಣದೊಳಗ ಆದರ್ಸ ದಾಂಪತ್ಯ ಯೋಜನೆಯ ರೂವಾರಿ
ರಾಯನು ಮುಖ ತಗ್ಗಿಸಿಕೊಂಡು ಪಲಾಯನ ಮಾಡಿದ ಲಾಗಾಯ್ತು ನೂರಾರು
ದಂಪತಿಗಳು ಆದರ್ಸ ಮಟ್ಟಕ್ಕೆ ತೋರಲಾರದೇ, ತೂರುವ ಸ್ಥಿತಿಗೆ
ಯಿಳಿಯಲಾರದೆ ತ್ರಿಸಂಕು ಸ್ಥಿತಿಯಲ್ಲೇ ವುಳಿದುಬಿಟ್ಟಿದ್ದವು. ಅವುಗಳ ನಡುವೆ
ಯಿರುಸು, ಮುರುಸು, ಬಿರುಕು ಕಾಣಿಸಿಕೊಳ್ಳಲಕ ಆರಂಭಗೊಂಡಿತ್ತು.. ಸದರಿ
ಪಟ್ಟಣದೊಳಗ ಯಿಪ್ಪತ್ತಿಪ್ಪತ್ತಯ್ದಕ್ಕೇ ಸನ್ಯಾಸಿ ಪದವಿಯನ್ನಲಂಕರಿಸಿದ್ದ