ಪುಟ:ಅರಮನೆ.pdf/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ

೨೫೯

ತರುಣರನೇಕರು ತಾಯವ್ವನ ಮನೆ ಆಜುಬಾಜುಕ ಆಸ್ರಮಗಳನ್ನು ಕಟ್ಟಿಕೊಂಡು ಭಗ್ನಪ್ರೇಮ ಕುರಿತ ಕಾವ್ಯರಚನೆಗೆ ತೊಡಗಿದ್ದರಷ್ಟೆ.. ಬಂಗಲೆಗೆ ಹೋಗುವಾಗಲಾದರೂ, ಬಂಗಲೆಯಿಂದ ಬರುವಾಗಲಾದರೂ ಲಾವಣ್ಯವತಿ ಡೋಲಿಯ ಪರದೆ ಸರಿಸಿ ತಮ್ಮತ್ತ ವಂದೇ ವಂದು ಸಲವಾದರೂ ಕ್ರುಪಾ ದ್ರುಸ್ಟಿ ಹರಿಸ್ಯಾಳು ಯಂದವರು ತುದಿಗಾಲಲ್ಲಿ ಕಾಯುತ 'ಪ್ರತಿಸಲ ನಿರಾಸರಾಗುತ್ತಿದ್ದರಷ್ಟೆ.. ಆ ಅಚಾನಕ ಕವಿಗಳು ತಮ್ಮ ಕಾವ್ಯಕ ಪರಿಕರಗಳನ್ನು ಸಂಗ್ರಹಿಸ ಲೋಸುಗ ತಿಲ್ಲಾನ ತಾಯಕ್ಕನ ನಡವಳಿಕೆಗಳನ್ನು ಅಭ್ಯಾಸ ಮಾಡುತ್ತಿರುವಂತೆಯೇ ಬಂಗಲೆ ಬಳಿ ಸುಳಿದಾಡುತ ಜೆನ್ನಿಫರಮ್ಮ ಮತ್ತು ಚಿನ್ನಾಸಾಮಿಯರೀರ್ವರ ಗಾಢ ಸಂಬಂಧವನ್ನು ತಮ್ಮದೇ ಆದ ರೀತಿಯಲ್ಲಿ ಪರಸ್ಪರ ಚರ್ಚೆಯ ದ್ವಾರ ಯಾಖ್ಯಾನಿಸಿಕೊಳ್ಳುತಲಿದ್ದರು. ಜೆನ್ನಿಫರಮ್ಮ ಪೂರುವ ಜಲುಮದಲ್ಲಿ ಚಿನ್ನಾಸಾನಿಯ ಗಂಡನಾಗಿದ್ದಿರಬೇಕೆಂದು ವಬ್ಬರು, ಚಿನ್ನಾಸಾನಿಯೇ ಪೂರುವ ಜಲುಮದಲ್ಲಿ ಜೆನ್ನಿಫರಮ್ಮಗೆ ಗಂಡನಾಗಿದ್ದಿರಬೇಕೆಂದು ಯಿನ್ನೊಬ್ಬರು. ಯೀ ನಿರುಪದ್ರವಿ ಚರ್ಚೆ ಬಗ್ಗೆ ತಾಯಕ್ಕೆ ತಲೆ ಕೆಡಿಸಿಕೊಳ್ಳದೆಯಿರಲಿಲ್ಲ.. ಆ ನತದ್ರುಷ್ಟರು ಬರೆದಿರಬಹುದಾದ ಬರೆಯುತ್ತಿರ ಬಹುದಾದ, ಕಾವ್ಯ ಭಾಗಗಳನ್ನು ಅಪಹರಿಸುವ ಪ್ರಯತ್ನದಲ್ಲಿ ತಾನಿಲ್ಲದೆಯಿರಲಿಲ್ಲ.. ಅವರ ಅಪ್ರಕಟಿತ ಕಾವ್ಯ ಭಾಗಗಳಲ್ಲಿ ತನ್ನನ್ನು ರಾಯನು ಸಂಭೋಗಿಸಿದ್ದನೆಂದು ವುತ್ಪ್ರೇಕ್ಷೆ ಮಾಡಿ ಬರೆದಿದ್ದರೆ ಯಂಬ ಅನುಮಾನ ಬಂದು ಆಕೆ ಯಿಂಥ ದುಷ್ಕ್ರುತ್ಯಗಳಲ್ಲಿ ತೊಡಗಿದ್ದಳು.. ಅಪಹರಣದ ಮೂಲಕ ತರಿಸಿಕೊಂಡ ಕಾವ್ಯಭಾಗಗಳನ್ನು ಹರಳೆಣ್ಣೆ ದೀಪದ ಬೆಳಕಲ್ಲಿ ಮೋದುವ ಪ್ರಯತ್ನ ಮಾಡುತಲಿದ್ದಳು ಯಂಬಲ್ಲಿಗೆ ಸಿವ ಸಂಕರ ಮಾದೇವss ಅತ್ತ ಕುದುರೆಡವ ಪಟ್ಟಣದೊಳಗಿನ ಸಂಭರವ ಯೇನು ಹೇಳುವುದು? ಮುನವ ಯೇನು ಹೇಳುವುದು? ಅಲ್ಲಿನ ಪ್ರತಿವಬ್ಬರ ರುದಯ ಬಡಿತದ ಮೇರಿಳಿತವ ಯೇನು ಹೇಳುವುದು? ತಮಗಂಗಾದಂಗಾತಯ್ದೆಂಬುವ, ಹಿಂಗಾದಂಗಾ ತಯ್ದೆಂಬುವ ವರಮಾನವ ಯೇನು ಹೇಳುವುದು? ಬರಡೆಂಬುವ ಸಬುಧದೊಡಲಿಂದ ಹಯನ ಯಂಬುವ ಸಬುಧ ವಡಮೂಡಿತು ಯಂಬುದರ ಕುರಿತು ಯೇನು ಹೇಳುವುದು? ದಯವ ಸಂಬಂಧೀ ಕ್ರಿಯೆಯ ಸಾಯಿರ ರೂಪ ಪಡೆಯಿತೆಂಬುದರ ಕುರಿತು ಯೇನು ಹೇಳುವುದು? ಸಚರಾಚರ ಪಂಚೇಂದ್ರಿಯಗಳು ನೆರೆ ಬಂದ ನದಿಯೋಪಾದಿ ಯಲ್ಲಿ ಸಿಡೇಗಲ್ಲಗಸೆ ಬಾಕಲ