ಪುಟ:ಅರಮನೆ.pdf/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೬೦

ಅರಮನೆ


ಕಡೆ ನಿತ್ಯ ಪ್ರವಹಿಸುತ್ತಲೇ ಯಿದ್ದುದರ ಕುರಿತು ಯೇನು ಹೇಳುವುದು? ಸದರಿ
ಗ್ರಾಮದ ಅಲವುಕಿಕ ಸಂಗತಿಗಳನ್ನು ತಮ ತಮ್ಮ ಗಂಟಲುಗಳಲ್ಲಿ ತುಂಬಿಕೊಂಡು
ಸುತಮುತ್ತಲ ಗ್ರಾಮಗಳಿಗೆ ತುತ್ತುಣ್ಣಿಸುವ ಸಲುವಾಗಿ ಬಟಾಬಯಲಿಗೆ ಹೊಸ
ಯಾಖ್ಯೆ ಬರೆಯುತಲಿದ್ದ ತರಾವರಿ ಪಕ್ಷಿಗಳ ವಯ್ಯಾರದ ಬಗ್ಗೆ ಯೇನು
ಹೇಳೋದು ? ಹ್ಹಾ... ಹ್ಹಾ... ಹ್ಹೋ... ಹ್ಹೋ.. ಯಂಬ ಅನುಭಾವಿ ವುದ್ಗಾರಗಳ
ಬಗ್ಗೆ ಯೇನು ಹೇಳೋದು?
ದ್ವಾಪರದ ನಾಕನೇ ಪಾದದಲ್ಲಿ ಹುಟ್ಟಿರುವಂಥಾತನೂ, ನೆಲದ ವಳಗಿನ,
ಹೊರಗಿನ ಹೊಳೆ ಹಳ್ಳಗಳ ನೀರು ಕುಡಿದಂಥಾತನೂ, ಗವುರಸಂದರ
ಮಾರೆಮ್ಮನೊಂದಿಗೆ ಪತ್ತೀಸು ಕಾಯಾಟವ ಆಡುತ್ತಿದ್ದಂಥಾತನೂ ತನ್ನ ಸರೀರದ
ಮ್ಯಾಲೆಲ್ಲ ಸಂಜೀವಿಣಿ ಪರುವತವನ್ನು ಮುಡುಕೊಂಡಿರುವಂಥಾತನೂ
ಆಗಿರುವಂಥ ಮುರುಡಿ ಹಂಪಜ್ಜನು ಬಂದಲಾಗಾಯ್ತು ಯಿದೆಲ್ಲ
ಜರುಗುತಲಿರುವುದು, ಅದೆಲ್ಲ ಜರುಗುತಲಿರುವುದು.. ಬಡೇಲಡಕು,
ಗುಂಡುಮುಳುಗು, ಕುಮತಿ, ಹೊಡೇಮೇ ಮೊದಲಾದ ದೇಸ
ಯಿದೇಸಗಳನ್ನೊಳಗೊಂಡಂತೆ ಸದರೀ ಪಟ್ಟಣದ ಯಾವತ್ತೂ ಮಂದಿಯ
ಕುತೂಹಲದ ಕೇಂದ್ರವಾಗಿರ್ಪ...
..ಆ ಪೂರುವಿಕನು ರೊತಾರೂಢನಾಗಿ ಯೇಸು ದಿವಸಗಳಾದವು ತ್ರಿಕಾಲ
ಪೂಜೆ ಪುನಸ್ಕಾರ ಮಾಡಲಕ ಹತ್ತಿ ಯೇಸು ದಿವಸಗಳಾದವು? ಬಾಯಿಯ
ಸಾಯವಿಲ್ಲದೆ ಹೇಳೋದು, ಕಿವಿಯ ಹಂಗಿಲ್ಲದ ಕೇಳೋದು ಮಾಡಲಕ ಹತ್ತಿ
ಯೇಸು ದಿವಸಗಳಾದವು? ಸದರಿ ಪಟ್ಟಣವು ಹೇಳಲಕ ವಂದು ಬಾಯನ,
ಕೇಳಲಕ ವಂದು ಕಿವೀನ ಮುಡಕೊಂಡು ಯೇಸು ದಿವಸಗಳಾದವು? ಸಿವ..
ಸಿವಾ.. ಬರೀ ವಗಟು, ಕಾರಣಿಕಗಳೇ ಕಣ್ಣಾಮುಚ್ಚಾಲೆ ಆಟವ ಆಡುತ್ತಿರುವವಲ್ಲ..
ಸಿವ.. ಸಿವಾ.. ನಿರಕ್ಕಸರ ಕುಕ್ಕಚಿಗಳಾದ ತಾವು ಯೆವನ್ನೆಂಗ ವಡಬಡದು
ಅರ್ಥಮಾಡಿಕೊಳ್ಳೋದು ಹ್ಯಾಂಗ ಸಿವ.. ಸಿವಾ...
ಆದರೂ ಮಂದಿ ಹಿಂಗಂದಕಂತ ಸುಮ್ಮಕ ಕೂಕಂಡಿರಲಿಲ್ಲ...
ವಬ್ಬೊಬ್ಬರೊಳಗೆ ಮೂರು ನಾಕು ಮಂದಿಯಂತೆ ಯಿದ್ದ ಸೊಯಂ
ಕಾರ್ಯೇವುಕರ್ತರು ಗೊಂಜಾಡಲರಡವಯ್ಯನ ಕಡೆಗೆ ನೋಡತಲಿದ್ದರೆ, ಆರು ಬೊಳ್ಳ
ಮುದೇತನು ಲಚುಮವ್ವ ತೋಪಿನ ಸಮುಸ್ಥಾಪನಾಚಾರ್ಯ ಜಡೆತಾತನ ಕಡೇಕ
ನೋಡುತಲಿದ್ದನು. ರಸಾಸಿದ್ದರ ವಮುಸದ ಮೊದಲ ಮತ್ತ ಅಖರ ಕುಡಿಯೂ