ಪುಟ:ಅರಮನೆ.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೨ ಅರಮನೆ ಧರಿಸುವ ಸೂತಕ, ಬಸುರಿಳಿಯುವ ಸೂತಕ, ಕೆಮ್ಮುವ ಸೂತಕ, ಕ್ಯಾಕರಿಸುವ ಸೂತಕ ಯಂಥಪ್ಪ ಛತ್ತೀಸು ಸೂತಕಗಳು ಸಂಭವಿಸಬಾರದಾಗಿತ್ತಲ್ಲಾ.. ಹಸುದೋರ ಯದರು ಡೇಗಬಾರದಾಗಿತ್ತಲ್ಲಾ.. ವುಪ್ಪರಿಗೆಗಳೊಳಗ ಯಿರಬಾರದಾಗಿತ್ತಲ್ಲಾ.. ಮಂಚ ವರಸುಗಳ ಮ್ಯಾಲ ವರಗಬಾರದಾಗಿತ್ತಲ್ಲಾ. ಹಾಸಿಗೆ ಪತೈವು ಮಾಡಬೇಕಾಗಿತ್ತಲ್ಲಾ.. ಕೂಳು ಹೆಚ್ಚಾಗಿ ಕುವ್ವಾಡ ಮಾಡಬಾರದಾಗಿತ್ತಲ್ಲಾ, ಸಿವಾ ಸಿವಾ.. ಯೇನೇನು ಮಾಡಬಾರದಾಗಿತ್ತೋ ಅದನ್ನೆಲ್ಲ ಮಾಡಿಬಿಟ್ಟೆವು.. ಕಲಿಯುಗ ಕವಕೊಂಡು ಬಿದ್ದಿರೋ ಸದರಿ ಪಟ್ಟಣದ ಮಂದಿ ಜೀವತ್ತು ಸುಧಾರಿಸಿಯಾರು.. ನಾಳೆ ಸುಧಾರಿಸಿಯಾರು ಯಂದು ಸಮ್ರಣೆ ಯಿಂದ ಕಾದದ್ದು ತಾಯಿಯ ದೊಡ್ಡಗುಣವಂತೆ.. ಸಿವ... ಸಿವಾ.. ಆಕೆಯ ರುದಯದಲ್ಲಿ ದಯಾಸಾಗರ ಯಿರುವುದಂತೆ.. ಯಿಡೀ ಪಟ್ಟಣವನ್ನು ವಾಂತಮ್ಮ, ಭೇದಮ್ಮಗಳಿಗೆ ಬಲಿ ಕೊಟ್ಟು ಬಿಟ್ಟಿದ್ದಲ್ಲಿ.. ಯಂದು ಮಮ್ಮಲನ ಮರುಗುತ್ತ ಪಶ್ಚಾತ್ತಾಪದ ಬೆಂಕಿಯೊಳಗ ಬೆಂದು ನಿಚ್ಚಳಾಗಲಾರಂಭಿಸಿದರು.... ಮಯ್ಯವಂತನಾದ ಹಂಪಜ್ಜನೇ.. ನರಹುಳುಗಳು ನಾವು. ನಮ್ಮ ಅಪಚಾರವ ಹೊಟ್ಟೇಲಿ ಹಾಕ್ಕೊಂಡು ಕಾಪಾಡು ಮಾನುಭಾವss ಯಂದನಕಂತ ಹೋಗಿ ದೀರುದಂಡ ನಮಸ್ಕಾರ ಮಾಡಿಕೊಳ್ಳತೊಡಗಿದರು.. ಯೋ ಪ್ರಕಾರವಾಗಿ ಯಿಡೀ ಪಟ್ಟಣವೇ ನಾನಾರೀತಿಯ ಪ್ರಾಯಶ್ಚಿತ್ತದ ಬಾಣಲೆಯೊಳಗೆ ಬೇಯುವಂತೆ ಮಾಡಿದಂಥ ಮುಪ್ಪಾನು ಮುದೇತನು ಮತ್ತಿನ್ನೇನನ್ನು ಮಾಡಿಸಿದನೆಂದರೆ.. ಆ ಕಾರೈವುಗಳು ವಂದಲ್ಲಾ.. ಯರಡಲ್ಲಾ.. ಅರಮನೆಯ ಪ್ರಸಿದ್ಧ ಟಾಮು ಟಾಮುಗಾರರಾದ ಅಪರಾ ಯಂಬ ಆರು ಮೊಳದವನನ್ನೂ, ತಪರಾ ಯಂಬ ಮೂರು ಮೊಳದವನನ್ನೂ ಸನ್ನಿಧಾನಕ್ಕೆ ಕರೆಯಿಸಿಕೊಂಡು ಹಿಂಗಂಗಂತ ಹೇಳಿದರು.. ಯಿದು ತಮ್ಮ ತೂರುವ ಜಲುಮದ ಸುಕ್ರತ ಯಂದು ಭಾವಿಸಿದ ಆ ವಡಹುಟ್ಟಿದೋರು ಭಲೇ ಹುರುಪಿನಿಂದ ಸದರಿ ಪಟ್ಟಣವನ್ನು ಮಡಿವುಡಿಯಿಂದ ಯಿಡಬೇಕರಪ್ಪಾ. ಅದು ಯಾವ ಪ್ರಕಾರ ಯಂದರ.... ಪಟ್ಟಣ ಯಿರೋ ವಂದು ಮಯ್ಲಿ ಪಾಸಲೆಯೊಳಗೆ ವಂದ... ಮಾಡಬಾರದು ಟಾಂ ಟಾಂ... ಯರಡು ಮಾಡಬಾರದು ಟಾಂ ಟಾಂ.. ಮಟ್ಟು ಮಯ್ಲಿಗೆ ಮಾಡಬಾರದು ಟಾಂ ಟಾಂ.. ಪಟ್ಟಣದೊಳಗ ಯಾರೂ ದೊಡ್ಡಾಕಿ ಆಗಬಾರದು.. ಹಡೆಯಬಾರದು