ಪುಟ:ಅರಮನೆ.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೬೩ ಟಾಂ.. ಟಾಂ.. ಬಸುರಾಗಬಾರದು.. ಹಡವಣಿಗೆಯಾಗಬಾರದು ಟಾಂ.. ಟಾಂ.. ವುಪ್ಪರಿಗೆ ಯೇರಬಾರದು.. ಮಂಚದ ಮ್ಯಾಲ ಮಲಗಬಾರದು ಟಾಂ.. ಟಾಂ . ಹಾಸಿಗೆ ಪತ್ಯೇವು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಟಾಂ ಟಾಂ.. ಚಾಕುವಾಡ ಮಾಡಬಾರದು, ಬಾಯಿಯಿಂದ ಮೋಕು ಮಾತು ಆಡಬಾರದು ಟಾಂ.. ಟಾಂ.. ಮಯ್ದೆ ಯರಕಂತಿರಬೇಕು ಟಾಂ.. ಟಾಂ.... ವುತ್ರಾಣಿ ಕಡ್ಡಿಯಿಂದ ದಂತ ಮಜ್ಜಣ ಮಾಡುತ್ತಿರಬೇಕು ಟಾಂ ಟಾಂ.. ಮುಂಬುವ ಬಾನ ತಾಯ ಪರಸಾದ ಯಂದು ತಿಳಿಯಬೇಕು.. ಕುಡಿಯೋ ನೀರು ತಾಯಿಯ ತೀರ ಯಂದು ತಿಳಿಯಬೇಕು ಟಾಂ.. ಟಾಂ.. ಜಾವ ಜಾವಕ್ಕೊಂದೊಂದು ಸಲ ತಾಯಿಯ ನಾಮಸ್ಮರಣೆ ಮಾಡಬೇಕು ಟಾಂ.. ಟಾಂ.. ಅವರು ಹಾಕಿದ ಟಾಮು ಟಾಮು ವಂದಾದರ, ಅದು ಮಂದಿಯ ಕಿವಿಯೊಳಗ ಬಿದ್ದು ಪಡಕಂಡ ರೂಪ ವಂದೇ ಯರಡೇ. ಆಸ್ತೀಕ ಮಂದಿ ವಂದ ಮಾಡಲಕೊಂದು ಮಯ್ತು.. ಯರಡು ಮಾಡಲಕ ಯರಡು ಮಯ್ತು ದೂರ ಹೋಗಲಾರಂಭಿಸಿದರು ಮಂದಿ.. ಯಲ್ಲು ತಂಬಿಗೆ ನೀರು ಕುಡಿಯೋರು ವಂದು ತಂಬಿಗೆ ನೀರು ಕುಡಿಯಲಾರಂಭಿಸಿದರು ಮಂದಿ.. ತಮ್ಮನ್ನು ಯೇರದವರಿಲ್ಲದೆ ವುಪ್ಪರಿಗೆಗಳು ಬಿಕೋ ಅಂಬತೊಡಗಿದವು. ಮಂಚ ವರಸುಗಳು ತಮ್ಮ ಮ್ಯಾಲ ಮಲಗುವವರಿಲ್ಲದೆ ಮೂಲೆಗುಂಪಾದವು.. ಗಂಡ ಹೆಂಡಿರು ಪರಸ್ಪರ ಬೆನ್ನು ಮಾಡಿ ಮಲಗಲಾರಂಭಿಸಿದರು. ಚಾಸ್ಪಿ ಕುವಾಡಗಳನ್ನು ತಮ್ಮ ತಮ್ಮ ಗಂಟಲುಗಳಿಂದ ವಕ್ಕಲೆಬ್ಬಿಸಿದರು ಮಂದಿ.. ಬಗ್ಗಳಿಂದ ದೂರವುಳಿದರು ಮಂದಿ.. ಸಾಂಬವಿ ಸಂಬ ಸಬುಧವು ಪಟ್ಟಣದ ಅಣುರೇಣು ತುಣಕಾಷ«ಗಳಲ್ಲಿ ರಸದುಂಬಿಕೊಂಡಿತು. ಆ ಮಹಿಮಾನ್ವಿತ ಸಬುಧವು ಚಲಾವಣೆಗೊಳ್ಳುತ್ತ ತನಗೆ ತಾನೇ ರೂಢಿಗೊಂಡಿತು. ಅರಮನೆಯೂ ಅಳುಕಿನಿಂದಲೇ ಟಾಂ ಟಾಮನ್ನು ಜಾರಿ ತಾರದೆ ಯಿರಲಿಲ್ಲ.. ಅದರ ಬೇಯಿನಮರದ ಬುಡದಲ್ಲಿ ಗುಡುಲು ಹಾಕಿಕೊಂಡು ವಾಸಿಸುತಲಿದ್ದ ಜಗಲೂರೆವ್ವ ಸಿಸರೆ....