ಪುಟ:ಅರಮನೆ.pdf/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೪ ಅರಮನೆ ಅತ್ತ ತ್ರಿಕಾಲಗಳ ನಡುವೆ ಅಯಿರತ ಸಂಚಾರ ಮಾಡುತಲಿದ್ದ ಹಂಪಜ್ಜನು ನಾಸ್ತಿಕ ಮಂದಿಯ ವುಸಾಬರಿಯನ್ನು ದಯವಾನುಕೂಲಕ್ಕೆ ಬಿಟ್ಟುಬಿಡಬೇಕೆಂದು ನಿಲ್ದಾರ ಮಾಡಿದನು.. ತಾನು ಯೀ ಮುಂದಕ ಯೇನು ಮಾಡಿದನಂದರ.. ವಸ್ತಿಗೆ ಮಜ್ಜಣ ಮಾಡಿಸಲಕ, ಹಾಸಿಗೆ ಹಾಲಸಕ, ಗಾಳಿ ಹಾಕಲಕ.. ಸರುವನ್ನೊಂದು ಕಾರೈವುಗಳ ಮಾಡಲಕ ಹೊರಹೊರೆ ಬೇಯಿನ ತೊಪ್ಪಲು ತರಬೇಕರಪ್ಪಾ ಯಂದು ಅಪ್ಪಣೆ ಕೊಡಿಸಿದೊಡನೆ ಕವುಕಲ ಕಲ್ಲಯ್ಯ ಬೇಲಯ್ಯ ವುದುಳಯ್ಯ, ತಗ್ಗಯ್ಯ, ದಿನ್ನೆಯ್ಯರೇ ಮೊದಲಾದ ಸರಸರ ಮೇರ ಬಲ್ಲಂಥೋರು.. ಸರಸರ ಯಿಳಿಯಬಲ್ಲಂಥೋರು ತಾವು ತರತೇವಿ ಯಂದು ಬಯಲು ದೇರಿದರು. ಸದರಿ ನೆಲದ ಕಸುವು, ಸ್ಥಳಪುರಾಣ, ಆಯ್ತಿಹ್ಯಗಳನ್ನರಗಿಸಿ ಕೊಂಡು ದಟ್ಟವಾಗಿ ಬೆಳೆದಿದ್ದ ಬೇಯಿನ ಮರಗಳೇನೋ ಆಗೋ ಅಲ್ಲಿ, ಯಿಗೋ ಯಲ್ಲಿ ಯಂಬಂತೆ ಯಿದ್ದವು. ವಬ್ಬನಾದರೂ ತಮ್ಮ ನನ್ನೊಳಗೆ ಯಿಸ್ತಮಿಸಿಕೊಂಡಿದ್ದುಂಟಾ? ಹುಡುಗರುಪ್ಪಡಿ ಗೋಲಿ ಗಜ್ಜುಗ ಆಡಿದ್ದುಂಟಾ? ತಮ್ಮ ಕಡ್ಡಿ ಮುರುದು ದಂತ ಧಾವನ ಮಾಡಿದ್ದುಂಟಾ? ಯಿನ್ನೇನು ಅವ್ವ ಬಂದಳು, ತಮ್ಮ ಬದುಕಿಗೊಂದು ಅಗ್ಗ ಕಟ್ಟುತ್ತಾಳೆ. ಆಧಾರ ಮಾಡುತ್ತಾಳೆ ಯಂದವು ಭಾವನ ಮಾಡಿಕೊಂಡಿದ್ದು ಸುಳ್ಳಾಗಿತ್ತು. ರೋಸಿದ ಜಗಲೂರವ್ವಗೆ ನೆಳ್ಳು ಕೊಟ್ಟಿದ್ದೇ ಮಾಪರಾಧವಾಗಿತ್ತು. ತಮ್ಮ ಕರವ್ಯವೇ ತಮಗ ಮುಳ್ಳಾಗಿತ್ತು.... - ಅಗೋ ಅಲ್ಲಿ.. ಯಿ ಯಿಲ್ಲಿ. ಅವರು ಬರುತಲಿದ್ದುದನ್ನು ಆಟು ದೂರದಿಂದಲೇ ನೋಡಿದ ಸುನಕ ರೂಪಿಗಳಾದ ಸಿವ ಸರಣೆ ಚೆನ್ನವ್ವ ಧರುಮ ದೇವತೆಯರು ತಮ್ಮ ಜಗಲೂರೆವ್ವ ಯಾರ ತಾಯ ಕ್ರುಪಗೆ ಪಾತ್ರಳಾಗುತಾಳ.. ವುಸುರು ಬಿಡೋದನು ಕಡಿಮೆ ಮಾಡಿಕೊಳ್ಳುತಾಳ ಯಂದು ವಳಗೊಳಗೇ ಭಾವಿಸಿದರು.. ಬೊವಷ್ಟೋ ಯಂದು ಮಂಗಳದ್ದೋನಿ ಮಾಡಿದರು.. ಯೇನವ್ವಾ. ಯತ್ತವ್ವಾ ಯಂದು ಪಟ್ಟಣದ ಯಾವತ್ತೂ ಸುನಕ ಸಮುದಾಯವು ನೂರು ಕಡೇಲಿಂದ ಬಂದು ಅವರ ಹಿಂದ ಮುಂದ ಜಮಾವಣೆಗೊಳ್ಳುತ್ತಿದ್ದಂತೆ... ಅತ್ತ ಕಡೇಲಿಂದ ಅವರು, ಯಿತ್ತ ಕಡೇಲಿಂದ ಯವರು ಆ ಅಯಾತಿ ಬೇಯಿನದ ಬುಡಕ ಬಂದರು, ನೆಳ್ಳಿನ ಅನುಭವವಾಗಲಿಲ್ಲ... ಬೊಡ್ಡೆ ಮುಟ್ಟಿದೊಡನೆ ಕರಕೂ ಕರಕೂ ಯಂಬ ನರಳುವಿಕೆಯಲ್ಲೊನಿಯು ಬಂತು... ತಲೆ ಯತ್ತಿ ನೋಡಿದರು.. ವಂದಾರ ಯಲೆ ಯಿತ್ತೇ ಸಿವ ಸಿವಾss ಯಲ್ಲಾ ಬಟಾಬಯಲು.. ಯಲುವಿನ ತಡಿಕೆ ನೆಲ್ಕಮ್ಮರಿಕೊಂಡಿರುವಂತೆ.. ಯಿದು ಬೇಯಿನ