ಪುಟ:ಅರಮನೆ.pdf/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೬ ಅರಮನೆ ತಾನೂ ರೋಸಿ ಹೋಗಿದ್ದಳಂತೆ.. ಗುಬ್ಬಿ ಮ್ಯಾಲ ಬ್ರೇಮಾಸ್ತರ ಬಿಡುವುದು ತಾಯಿಯಾದಾಕೆಗೆ ಸೋಭಿಸುವುದಿಲ್ಲವೆಂದು ವಾದಿಸುತ್ತಲೇ ಬಂದಿದ್ದವಳಂತೆ ತಾನು, ಅವ್ವಾ ತಾಯಿ ನಿನ್ನಂಗೆ ನಾನೂ ಮುನುಸಿಕೊಂಡರ ಯೀ ಭೂಮಿವಾಲ ಹಸುರೆಂಬುವ ಸಬುಧವೇ ಯಿರಾಕಿಲ್ಲ.. ಹಸಿರಿಲ್ಲದ ಭೂಮಿಯನ್ನು ಮೋಹಿಸಿಕೊಂಡಲ್ಲಿ ಸಿವ.. ಸಿವ.. ಪರೋಕ್ಷವಾಗಿ ತನ್ನ ಬೆಂಬಲವೂಉಂಟು ಬೇಯಿನ ಮರದಮ್ಮದಿರಿಗೆ.. ತಿಳಿತಾ ಯಂದಾಕೆ ಅಂದೊಡನೆ ಸಾಂಬವಿಗೆ ನಡಗು ಹುಟ್ಟದೆಯಿರಲಿಲ್ಲವಂತೆ.. ಆಕೆಯ ನಡುಗಿಗೆ ವಸ್ತಿಯು ಅಳ್ಳಾಡಿತಂತೆ.. ಯಲ್ಲಿ ತನ್ನ ನೆಚ್ಚಿನ ತಂಗಿಯಾದ ಸಾಲುಮರದವ್ವ ತನ್ನನ್ನು ಬಿರುಬಿಸಿಲಿಗೆ ತಳ್ಳಿಬಿಡುವಳೋ, ಮುಂದ ಸಾಂಬವಿಯು ಸಾಲಮರದವಳೊಂದಿಗೆ ಮಾಡಿಕೊಂಡ ವಪ್ಪಂದ ಯಾವ ರೀತಿಯದು? ಸಾಲು ಮರದವ್ವ ಬೇಯಿನ ಮರದಮ್ಮದಿರಿಗೆ ಆಡಿರಬೌದಾದ ಕಿವಿಮಾತು ಯಂಥಾದ್ದು? ಅಂತೂ ಅಲವುಕಿಕಗಳ ನಡುವಿನ ತಂಟೆ ತಕರಾರು ಸುಖಾಂತಗೊಂಡಿತೆಂಬಲ್ಲಿಗೆ ಅಂತೆ ಕಂತೆಗಳು ಸಿವಸಂಕರ ಮಾದೇವಾ... ಆ ಕಾರಣದಿಂದ ಆ ಛಣದವರೆಗೆ ಭೂಮಿ ಮ್ಯಾಲೆ ವಣಕ್ಕೊಂಡು ತೇಜೋಹೀನವಾಗಿದ್ದ ಸಮಸ್ತ ಬೇಯಿನ ಮರಗಳೊಳಗ ರಸವಾಡಿತಂತೆ.. ಚಕಚಕಾಂತ ಚಿಗುರು ಮುಡುದು ಕಂಗೊಳಿಸಲು ಆರಂಭಿಸಿದವಂತೆ ಯಂಬಲ್ಲಿಗೆ... ಯವ್ವಾss ಅಂತೂ ಯಿಂತೂ ನಿನ್ನ ಮುನುಸು ಪರಿ ಸಮಾಪ್ತಿ ಆಯಿತಲ್ಲಾ ತಾಯೀ... ಮುಂದ್ಯಾವತ್ತೂ ನಮ್ಮ ಕಡೇಕ ಯಡಗಣ್ಣಿಂದ ನೋಡಬ್ಯಾಡ ತಾಯಿ ಯಂದು ಪ್ರತಿ ಚಿಗುರು ಸಣು ಮಾಡುತ ಅರಕೆ ಮಾಡಿಕೊಂಡವಂತೆ ಯಂಬಲ್ಲಿಗೆ.. ಯಿನ್ನುಳಿಕೆ ತರುಲತೆಗಳಿಂದ ಅಭಿನಂದನೆಗಳ ಮಾಪೂರವೇ ಹರಕೋತ ಬಂದು ಅವುಗಳ ಮಡಿಲು ತುಂಬಿ ತುಳುಕಾಡಿತಂತೆ ಯಂಬಲ್ಲಿಗೆ.. ತಾಯಿಯ ಹಾಸಿಗೆ ಆಗತೇವಿ.. ತಾಯಿಯ ಮಯ್ಯಾಂತಿಗೆ ಕಾರಕರಾಗುತೇವಿ.. ಆಕೆಯ ಸನೀಕ, ಆಕೆಯನ್ನು ನಂಬಿಕೊಂಡವರ ಸನೀಕ ರೋಗರುಜಿಣಗಳ ಸುಳಿಯದಾಂಗ ನೋಡ್ಕೊತೀವಿ ಯಂದು ಬಲು ಸಂಭರಮಪಟ್ಟವಂತೆ ಯಂಬಲ್ಲಿಗೆ.. ಹರಕೊಂಡವರ ತಕ್ಕೆ ತುಂಬಿದವು ಯಂಬಲ್ಲಿಗೆ.. ನೂರ ಮಂದಿಯ ಬೊಗಸೆ ತುಂಬಿದವು ಯಂಬಲ್ಲಿಗೆ.. ಭಕುತಾದಿ ಮಂದಿಂಚು ಬೇಯಿನ ಮರದಮ್ಮದಿರ ಅಂತಃಕರಣವನ್ನು ಮನಸೋಯಿಚ್ಚೆ ಕೊಂಡಾಡಿದರು ಯಂಬಲ್ಲಿಗೆ..