ಪುಟ:ಅರಮನೆ.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೬೭ ಬೇಯಿನತೊಪ್ಪಲ ರಸದಿಂದ ಮಜ್ಜಣ ಮಾಡಿಸಿಕೊಂಡ ಪರಿಣಾಮವಾಗಿ ಪಯಿತ್ರವಸ್ತಿಯು ದೇದೀಪ್ಯಮಾನವಾಗಿ ಹೊಳೆಯಲಾರಂಭಿಸಿದ್ದೇನೋ ನಿಜ.. ಅದನ್ನು ಬೇಯಿನ ತೊಪ್ಪಲ ತಲ್ಪದಮ್ಯಾಲ ಕುಂಡರಿಸಿದ್ದೇನೋ ನಿಜ.. ಮಡಿವುಡಿಯಿಂದ ಹೆಣ್ಣುಮಕ್ಕಳು ದಂಡುದಂಡಾಗಿ ಬಂದು ಬೇಯಿನತೊಪ್ಪಲ ಹೆಡೆಮಾಡಿದ್ದೇನೋ ನಿಜ.. ಬೇಯಿನ ತೊಪ್ಪಲ ಚಾಮರ ಸೇವೆ ಮಾಡತೊಡಗಿದ್ದರೆಂಬುದೇನೋ ನಿಜ.. ಹಸಿರ ಪಲ್ಲಕಿಯೊಳಗ ವಸ್ತಿಯು ಜೀವ ಚಝನ್ಯದಿಂದ ಬೀಗಲಾರಂಭಿಸಿತೆಂಬುದೂ ನಿಜ.. ಯಿಷಕ್ಕೆ ಯಾರೊಬ್ಬರೂ ನೆಮ್ಮದಿಯ ವುಸುರು ಬಿಡುವಂತಿಲ್ಲ.. ವಸ್ತಿಯ ಅಂದ ಚಂದ ನೋಡುತ ಮಯ್ಯ ಮರತು ಸುಮ್ಮಕ ಕುಂಡುವಂತಿಲ್ಲ.. ದೇವಿಯ ಪವಾಡಗಳನ್ನು ನಮಲುತ ಕಾಲಕ್ಷೇಪ ಮಾಡುವಂತಿಲ್ಲ. ಮಾಡಲಕ ವದಕನ ಮಸ್ತುವುಂಟು, ನೂರು ಮಂದಿಗೆ ಹೇಳುವುದುಂಟು, ನೂರು ಮಂದಿ ಹೇಳುವುದನ್ನು ಕೇಳುವುದುಂಟು.. ರೋಮ ರೋಮಕ್ಕೊಂದು ಜೊತೆ ಕಮ್ಮ ಕಾಲನ ಮುಡುಕೊಂಡು ಬಲು ಸಂಭರದಿಂದ ಕ್ರಿಯಾಸೀಲರಾಗಿದ್ದವರೆಂದರ ಪಟ್ಟಣಸ್ವಾಮಿಗಳ ಪಯ್ಕೆ, ದಯವಸ್ತರ ಪಯ್ಕೆ, ಹಿರೀಕರ ಪಯ್ಕೆ ಗೊಂಜಾಡಲರಡವಯ್ಯ, ಜಡೆತಾತ, ಕಾಡುಗೊಲ್ಲರೀರಯ್ಯನೇ ಮೊದಲಾದವರು. ಅವರಲ್ಲ, ಯಿವರೆಲ್ಲ ಕತ್ತಿಮಾಲ ಸಾಮು ಮಾಡಿದಾಗ ಸೊನ್ನೆ ಸೂಕ್ಷುಮಗಳನು ಮಾಡಿಕೊಂಡು ಬಲು ಹುಶಾರಿಕೀಲೆ ಮುಂದಕ ಅಡಿಯಿಡುತಲಿದ್ದರು.. ಮಾನುಭಾವ ಹಂಪಜ್ಜನು ಯಾದೋ ಗಳಿಗೇಲಿ ಯಚ್ಚರಿರುತಲಿದ್ದನು.. ಯಾದೋ ಗಳಿಗೇಲಿ ಸಡನ್ನ ಧ್ಯಾನಮಗ್ನನಾಗಿ ಬಿಡುತಲಿದ್ದನು. ತಾನಿದ್ದಲ್ಲೆ ಡಿಂಬ ವದಲಿ ತ್ರಿಲೋಕ ಸಂಚಾರ ಮಾಡುತ ಆಯಾ ಲೋಕಗಳ ಕ್ರಿಯೆ, ಪ್ರತಿಕ್ರಿಯೆಗಳನ್ನರಿಯುವ ಕಾವ್ಯದಲ್ಲಿರುತಲಿದ್ದನಂತೆ. ಗೋಚರವಾಗುತಲಿದ್ದ ತರಾವರಿ ದ್ರುಸ್ಯಾವಳಿಗಳನ್ನು ಕಾಂಬುತಲಿದ್ದನಂತೆ.. ತಲೆ ವಳಗೆ ಹೇಮಾಹ್ಮಿ ಪರಿಶಗಳನ್ನು ತರುಬಿಕೊಂಡು ನಿಭಾಯಿಸುತಲಿದ್ದನಂತೆ.. ಅವನ್ನೆಲ್ಲ ಜರುಗಲಿರುವ ಪುಣ್ಯಕಾಠ್ಯವುಗಳಿಗೆ ಚಾಣಾಕ್ಷತನದಿಂದ ವಗ್ಗಿಸುತಲಿದ್ದನಂತೆ.. ಗಡಿಬಿಡಿಯಿಂದಾಗಿ ತನ್ನನ್ನು ತಾನು ಕಳೆದುಕೊಳ್ಳುತಲಿದ್ದನಂತೆ.. ತನ್ನನ್ನು ತಾನು ಹುಡುಕಿಕೊಳ್ಳುತ ಲಿದ್ದನಂತೆ, ಓಹ್ ಅದನು ಕಂಡೆ.. ಓಹ್ ಯಿದನು ಕೇಳಿದೆ ಯಂದು ಮುಂತಾಗಿ ನಡುನಡುವೆ ವುದ್ದಾರ ತೆಗೆಯುತಲಿದ್ದನು.. ನುಡಿವವರಿಗೆ ಬಾಯಿಯಾಗುತಲಿದ್ದನು.. ಕೇಳುವವರಿಗೆ ಕಿವಿಯಾಗುತಲಿದ್ದನು. ಮಾಡುವವರಿಗೆ ಕಯಾಗುತಲಿದ್ದನು.