ಪುಟ:ಅರಮನೆ.pdf/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೮ ಅರಮನೆ ನಡೆವವರಿಗೆ ಕಾಲಾಗುತಲಿದ್ದನು.. ಜೋಜಿಗದ ರೀತಿವಳಗss ಸಿವನೇ.... ದೇವಿ ಸಾಂಬವಿ ಹೊಳೆಗೆ ಬಿಜಯಂಗಯ್ಯಲಿರುವ ಸಂಗತಿ ಸುತ್ತೇಳೂ ಲೋಕಗಳೊಳಗ ಅಡಾವುಡೀನ ಯಬ್ಬಿಸಿದ್ದರ ಸಲುವಾಗಿ, ಬಂದವರನ್ನು ಬರಿಯಂಬುವ ಸಲುವಾಗಿ, ಹೋಗುವವರನ್ನು ಹೋಗಿ ಎಂಬುವ ಸಲುವಾಗಿ, ಯಾರಾರಿಂದ ಯಾವ್ಯಾವ ಅನಾಹುತವಾಗುತ್ತದೆ ಯಂದು ಅರಿಯುವ ಸಲುವಾಗಿ, ಸರುವನ್ನೊಂದು ಹೊಗಗಳನ್ನು ಸಾಸ್ತರೋಕ್ತವಾಗಿ ನಿವಾರಣೆ ಮಾಡುವ ಸಲುವಾಗಿ, ದಿಗ್ಬಂಧನಗಳ ಜಗೋವುಗಳನ್ನು ಮುಂಗಡ ಪತ್ತೆ ಹಚ್ಚುವ ಸಲುವಾಗಿ, ಪರುವಿಕನಾದ ಹ೦ಪಜ್ಜನು ಆಗಾಗ್ಗೆ ಧ್ಯಾನಸ್ಥನಾಗುತಲಿದ್ದುದು ಅನಿವಾರವಾಗಿತ್ತು.. ಸದರಿ ಮಹಿಮಾನ್ವಿತ ಪಟ್ಟಣಕ್ಕೆ ಯೇರುಪಟ್ಟಿದ್ದ ಅಗೋಚರ ಹಾದಿಗಳು ಸಾವುರ ಸಾವುರ ಸಂಖೆಯಲಿದ್ದವಷ್ಟೆ. ಸಣ್ಣ ಬಲಿಯಿಂದ ಹಿಡುದು ಮಾ ಬಲಿವರೆಗೆ ಯಾವತ್ತೂ ಫಲವನ್ನು ಗಲಕಾಯಿಸುವಲ್ಲಿ ಸಿದ್ಧಹಸ್ತೆಯರೆನಿಸಿರುವ ಗ್ರಾಮದೇವತೆಗಳು ವಂದಾ.. ಯರಡಾ... ಅವರು ಯಾರು ಯಾರಪ್ಪಾ ಅಂದರ ಮಡಳ್ಳಿ ಮಡ್ಡಮ್ಮ ಚೆನ್ನಾಪದ ಚೆನ್ನಮ್ಮ ಬಯ್ಸಳ್ಳಿ ಬಯ್ಯಮ್ಮವುರುಕುಂದಿಯ ವುರುಕುಂದಮ್ಮ ವುದ್ದಾನಳ್ಳಿಯ ವುದ್ದಾನಮ್ಮ ಮದ್ದಿಕೇರಿಯ ಮದ್ದಮ್ಮ ಗೂಳ್ಳಾದ ಗೂಳಮ್ಮ ಆಲೂರಿನ ಆರುಮೊಳದಮ್ಮ, ಮಯಸೂರಿನ ಮಯಸೂರಮ್ಮ ಚಿಕ್ಕನಳ್ಳಿಯ ಚಿಕ್ಕಮ್ಮ ಸಕಲೇಸಪುರದ ಸಕಲೇಸಮ್ಮ ಬೇಕನಳ್ಳಿಯ ಬೇಕಾದಮ್ಮ, ಕೋಟ್ಯಾಳಿನ ಕೋಟೆಮ್ಮ, ಬೇಲೂರಿನ ಬೇಲೂರಮ್ಮ, ಶೆಟ್ಟಿಗೆರೆಯ ಶೆಟ್ಟೆಮ್ಮ ಯಿವರೇ ಮೊದಲಾದ ಸತಸಹಸ್ರಗ್ರಾಮದೇವತೆಗಳು.. ಅವರಾರಿಗೆ ಯೇಕರಿಕೆ ಯಂಬುದುಂಟಾ? ದೇಕರಿಕೆ ಯಂಬುದುಂಟಾ? ಮರಗಳ ಪೊಟರೆ ಗುಡ್ಡಗಳ ಕಲ್ಲು ಸಂಧು, ಪಾಳು ಮನೆಯ ತೊಲೆ ಸಂಧು, ಅಷ್ಟೇ ಯಾಕ? ಕಂಡಕಂಡವರ ತುರುಬುಗಳೊಳಗ, ಹಲ್ಲು ಸಂಧುಗಳೊಳಗ, ಅಂಗಯ್ಯ ರೇಖೆಗಳೊಳಗ, ಅಂಗಾಲ ಬಿರುಕುಗಳೊಳಗ ಹಿಂಗ ಯಲ್ಲಂದರಲ್ಲಿ ವಾಸ ಮಾಡುತ್ತಿರುವ ಅವರಿಗೆ ವಂದು ಗುಡಿ ಯಂಬುದುಂಟಾ? ಎಂದು ಮನೆ ಯಂಬುದುಂಟಾ? ವಂದು ಮಠ ಯಂಬುದುಂಟಾ? ಎಂದು ಥಟಗು ರಗುತದ ಮ್ಯಾಲ, ವಂದು ಬಿಂದು ಬೆವರ ಮ್ಯಾಲ, ವಂದು ನೆನಪ ಮ್ಯಾಲ ಜೀವನ ಮಾಡುವಂಥ ಅವರಿಗೆ ಪರಸಾದ ಅಂದರೇನು ಗೊತ್ತು? ತೀರ ಅಂದರೇನು ಗೊತ್ತು? ಬಿಸಿಲಂದರೇನು ಗೊತ್ತು? ಚಳಿ ಅಂದರೇನು ಗೊತ್ತು? ಮಳೆ ಅಂದರೇನು