ಪುಟ:ಅರಮನೆ.pdf/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೬೯ ಗೊತ್ತು? ಗಾಳಿ ಅಂದರೇನು ಗೊತ್ತು? ಸತ ಸತಮಾನಗಳ ಕ್ಷುದ್ಘಾಧೆ ತೀರಿಸಿಕೊಳ್ಳಲಕೆಂದು ಅವರು ಸಾಂಬವಿಯ ಚಲನವಲನದ ಮ್ಯಾಲ ಸದಾ ನಿಗಾಯಿಟ್ಟಿರುತ್ತಿದ್ದುದುಂಟಂತೆ? ನಾ ಮುಂದು, ತಾ ಮುಂದು ಅಂತ ಕಂಡ ಕಂಡ ಗ್ರಾಮಗಳೊಳಗೆ ನುಗ್ಗಿ ದಾಂಧಲೆ ಮಾಡುವುದುಂಟಂತೆ... ಮಹಿಮಾ ಯಿಶೇಷನಾದ ಹಂಪಜ್ಜನು ಧ್ಯಾನಸ್ಥ ಮುದ್ರೇಲಿದ್ದು ಹಲವು ಯೋಜನ ದೂರದವರೆಗೆ ಹರದಾಡುವ ತನ್ನ ದ್ರುಸ್ಟಿಯಿಂದ ನಿಗಾಯಿಟ್ಟು ಅವರ ಚಲನವಲನಗಳನ್ನು ಕುಣ್ಣವಾಗಿ ಗಮನಿಸುತಲಿದ್ದಾನಂತೆ.. ಅಗೋ ಅಲ್ಲಿ ಹೊಂಟವಳೆ ಮಡ್ಡಮ್ಮ ಹಕ್ಕಿ ಕಂಠದೊಳಗಡಗಿ, ಗೋ ಯಿಲ್ಲಿ ಚವುಡಮ್ಮ ಹೊಂಟವಳೆ ಯಿಲಿಚೆಮ್ಮನ ಬಾಲ ಹಿಡಕೊಂಡು, ಮಾತಾಡೋ ನಾಲಗೆ ಮ್ಯಾಲ ಯಸ್ರಮಿಸಿಕೊಂಡು ಹೊಂಟವಳೆ ಬಯ್ಯಮ್ಮ, ಕೇಳೋ ಕಿವಿಯೊಳಗೆ ಅಡಗಿ ಹೊಂಟವಳೆ ಬಿಸಿಲನ್ನ ನೋಡೋ ಕಣೆಪ್ಪೆ ಸಂದಲ್ಲಡಗಿ ಹೊಂಟವಳೆ ಬೇಲೂರಮ್ಮ ಬಲಾಕ ರುಕ್ಷದ ಬೇರಗುಂಟ ಹೊಂಟವಳೆ ತಿಂಗಳಮ್ಮ ತುರುಬ ನಾಗರದಡಿ ಕೂತು ಹೊಂಟವಳೆ ಮಂಚಾಲಮ್ಮ ಯೋಚನೆ ಮಾಡೋ ಮನಸೊಳಗ ಕೂತು ಮಂತರಮ್ಯ ಹೊಂಟವಳೆ.. ಭೂಮಿ ಪದರೊಳಗಿಂದ, ಬೀಸೋ ಗಾಳಿಯೊಳಗಿಂದ, ಆಡೋ ಮಾತುಗಳೊಳಗಿಂದ, ರುಚಿ ರಸ ಮಮಕಾರಗಳೊಳಗಿಂದ ಯಾವತ್ತೂ ದೇವತೆಗಳು ಪಯಣ ಹೊಂಟವರಂತೆ ಸಾಂಬವಿ ವಸ್ತಿ ಮಾಡಿರುವಂಥಾ ಘನ ಸಂಪನ್ನ ಕುದುರೆಡವು ಪಟ್ಟಣದ ಕಡೇಕ.. ಯಂದು ವುದ್ದಾರ ಮಾಡುತಲವನೆ. ಅವರನ್ನಲ್ಲಲ್ಲಿ ತಡೆಯಲಕಂತ ಆ ದೂರುವಿಕನು ಕಯ್ಯೋಂಡ ಮುನ್ನೆಚ್ಚರಿಕೆ ಕಾರೈವುಗಳೋ ನೂರಾರು ಸಿವನೇ..... ಪಟ್ಟಣದ ಸುತ್ತಮುತ್ತ ಯಲ್ಲಾಳೆತ್ತರದ ಬೇಲಿ ಹಾಕಿಸಿದ, ಅಗಸೆ ಬಾಕಲುಗಳ ನೆತ್ತಿಗೆ ಕುರಿದಲೆಗಳನ್ನು ಕಟ್ಟಿಸಿ ದಿಗ್ಬಂಧನ ಹಾಕಿಸಿದ, ಬೀಗರು ಬಿಜ್ಜರನ್ನು ಕರೆಯಲಕಂತ ಹೋಗುವರ ಕಯ್ದೆ ಮಂತ್ರಿಸಿದ ನಿಂಬೆಹಣ್ಣನು ಕೊಟ್ಟ ದೇಸ ಯಿದೇಸಗಳಿಂದ ಬರುವವರು ಕಡ್ಡಾಯವಾಗಿ ತಮ್ಮ ತಮ್ಮ ಅಂಗಾಲುಗಳನ್ನು ತಂಗಲು ಮಾಡಿಕೊಳ್ಳಲಕ್ಕೆ ಪಟ್ಟಣದ ಸಿಮ್ಯದ್ವಾರದ ಆಜೂಬಾಜಕ ವಂದು ವಕ್ರಾಣಿಯ ನಿರುಮಿಸಿ ಅದರೊಳಗೆ ನೀರುತುಂಬಿ ಮಂತ್ರಿಸಿದನು. ಅವಯ್ಯನು ಹಿಂಗ ಮಾಡುವಾಗ್ಗೆ ಯಾರೊಬ್ಬರು ಯೇನು ಯಂತ ಯಂಬ ವುಪದ್ವಾಪಿ ಪ್ರಶ್ನೆಗಳನ್ನು ಕೇಳಲಿಲ್ಲ. ಯೀ ಯಲ್ಲಾ ಕೆಲಸ