ಪುಟ:ಅರಮನೆ.pdf/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೭೧ ಅವಳೊಬ್ಬಳೇ ಅನುಬೋಸಬೇಕೆನಲೋ ಯಂದವು ಕೂಗಾಡುತ್ತಿರುವುದೇನು.. ಚೀರಾಡುತ್ತಿರುವುದೇನು ಲಂಚ ರುಷುವತ್ತು ಅಮಿಷ ವಡ್ಡುತ್ತಿರುವುದೇನು? ಆದರಾ ವಯ್ಯನು ನಿಷು«ರವಾಗಿದ್ದನಂತೆ... ಯಾದೋ ಎಂದು ಛುದ್ರದೇವತೆಯು ಯಾರೋ ಮಾದಿಂಯೊಳಗ ಪಟ್ಟಣವನ್ನು ಪ್ರವೇಶ ಮಾಡಿರುವುದೆಂಬ ಅನುಮಾನ ಬಂತಂತೆ.. ದುಸ್ಸಿಯನ್ನು ಮತ್ತಷ್ಟು ಬಿಗಿಗೊಳಿಸಿದನಂತೆ.. ಆದರದು ಅವನ ನೋಟದ ಚಿಮುಟಿಗೆ ಸಿಕ್ಕಲಿಲ್ಲವಂತೆ.. ಯಿತರೇ ನಾಕು ಯಿಂದ್ರಿಯಂಗಳ ಸವಲತ್ತು ಯಿದ್ದ ಆ ನೋಟವು ಯಾರಭೇ ನೀನು.. ಯಾಕಂದಿ.. ನೋಡಂಗಾಗಯ್ತಿ.. ನಿನ್ನ ಮುಖವನ್ನಾದರೂ ವಂಚೂರು ತೋರುಸು” ಯಂದು ಜಬರದಸ್ತೀಲೆ ಕೇಳಿದ್ದಕ್ಕದು ಕೊಸರಾಡುತ ದೂರ ಸರಕಂತಂತೆ.. ಯಿದನೆಂಗಪ್ಪಾ ಹಿಡಿಯೋದು ಯಂದು ನೋಟವು ಬಗೆಬಗೆಯ ರೀತಿಯಲ್ಲಿ ಯತ್ನ ಪ್ರಯತ್ನಂಗಳ ಮಾಡಿ ರೋಸಿಗಂತಂತೆ. ಅದು ಹಂಪಜ್ಜನಿದ್ದಲ್ಲಿಗೆ ಮರಳಿ “ಯಜಮಾನss ಅದು ಮಂತ್ರಗಾತಿ ಛುದ್ರದೇವತೆ ಯಿದ್ದಂಗಯಿತೆ.. ಹಿಡಿತಕ್ಕೆ.. ಮಾತಿಗೆ.. ಕಯಿಗೆ ಯಟಕುತ್ತಿಲ್ಲ.... ಕಾಲಿಗೆ ತೊಡರುತ್ತಿಲ್ಲ” ಯಂದು ಅಸಹಾಯಕತೆಯಿಂದ ನುಡಿಯಿತಂತೆ, ಅದನ್ನು ಕೇಳಿ ಮುದೇತನು ಘಟ ಸರುಪದೊಳು ಕಂಪಿಸಿದನಂತೆ.. ನೆತ್ತರು ಕಲೆಸಿ ಮಣ್ಣಿಂದ ಹೆಣ್ಣು ಗೊಂಬೆಯನ್ನು ಮಾಡಿದನಂತೆ. ಅಂಗಾತ ಮಲಗಿಸಿ ಮುಂದಕ ಯೇನು ಮಾಡಿದನಂತೆಂದರೆ ಸಿವಸಂಕರ ಮಾದೇವಃs ಅತ್ತ ಮನೋ ಸಾಹೇಬನು ನತದ್ರುಸ್ಟ ತರನೇಕಲ್ಲನ್ನು ಕಳ್ಕೊಳಗ ತುಂಬಿಕೊಂಡು ಅಡಿಗಡಿಗೊಂದೊಂದು ಸಲಕ ನಿಟ್ಟುಸುರು ಬಿಡುತ್ತ “ದೇವರೇ ನನ್ನನ್ನು ಕ್ಷಮಿಸು ಯಂದು ಜಾವಕ್ಕೊಂದೊಂದು ಸಲ ಪಾಪ ನಿವೇದನೆ ಮಾಡಿಕೊಳ್ಳುತ ಅಸ್ಟರಿ, ಹಲಗೇರಿ, ಚಿನ್ನೊತ್ತೂರು, ಪೆದೊತ್ತೂರು, ಗುಡೇಕಲ್ಲುಗಳನ್ನು ವಂದೊಂದಾಗಿ ದಾಟುತ್ತ ಅದವಾನಿಗೆ ಬಂದೊಡನೆ ಸದರಿ ಪಟ್ಟಣದಲ್ಲಿ ಸಿದ್ದಮಸೂದುಖಾನ ಯಂಬ ನವಾಬನಿಂದ ಹಣಕಾಸಿನ ಸಾಯ ಪಡದು ದಳವಾಯಿ ಸಿದ್ದೆಂಕಣ್ಣನೆಂಬಾತನು ಕಟ್ಟಿಸಿದ್ದ ಅಗಾದ ಸಯ್ತಿಯ ಭಾವಿಯ ಸುತ್ತ ವಂದಾಳೆತ್ತರದ ತಂತಿ ಬೇಲಿಯನ್ನು ಹಾಕಿಸಿದನು. ಪ್ರಜೆಗಳು ಅದರ ನೀರನ್ನು ವುಪಯೋಗ ಮಾಡುವುದನ್ನು ಕಾನೂನು ಮೂಲಕ ನಿರಂಧಿಸಿದನು. ಪೂರುವಿಕರು ಯಿಂಥ ಬಾವಿಗಳನ್ನು ಕಟ್ಟಿಸಿರುವುದು ವಂದಾನೊಂದು ಕಾಲದಲ್ಲಿ