ಪುಟ:ಅರಮನೆ.pdf/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೭೩ ಸಾಹೇಬನು ರಕುತಪಾತಕ್ಕಿಂತ ರಾಜಿಕಬೂಲಿಯೇ ವಾಸಿ ಯಂದು ಹೇಳಿದ. ಯೀಗಾಗಲೆ ಗುಂತಕಲ್ಲು ಪ್ರಾಂತದ ಜನಸಾಮಾನ್ಯ ಮಂದಿಯ ಯದೆ ವಳಗೆ ಗುಡಿಗುಂಡಾರ ಕಟ್ಟಿಕೊಂಡಿರುವ ಬೊಬ್ಬಲಿ ಬಿರುದಾಂಕಿತ ನಾಗರಡ್ಡಿಯ ಯಿಸುವಾಸ ಸಂಪಾದನೆ ಮಾಡಬೇಕಾದರ ಕುಂಪಣಿ ಸರಕಾರದ ಪ್ರತಿನಿಧಿಯಾಗಿ ತಾನು ಆ ರಾಬಿನ್ ಹುಡ್ ಬಡಿಸುವ ಬಾನವನ್ನು ಸೂಯಂಪ್ರೀತಿಯಿಂದ ವುಂಬಲಿರುವುದಾಗಿ ಖಡಾಖಂಡಿತವಾಗಿ ಹೇಳಿದ. ಹನಿಯನ್ನು ಮಾತ್ರಹಿಂದೆ ಯಿಟುಕೊಂಡು ಫಲಾನ ದಿವಸದಂದು ಪ್ರಯಾಣ ಬೆಳೆಸಿ ಫಲಾನ ಮೂರನ್ನು ಸೇರಿಕೊಂಡ. ಅಸಂಖ್ಯಾತವಾಗಿ ಸೇರಿದ್ದ ಮಂದಿ ಅವರೀಲ್ವರನ್ನು ದಿಬ್‌ದೀಪ್ತಿಯಿಂದ ಸ್ವಾಗತಿಸಿದರು. ಮನೋನಿಗಾದರೋ ತಾನು ನಾಗಿರೆಡ್ಡಿಯನ್ನು ಯಾವಾಗ ಕಾಣುವೆನೋ ಯಂಬ ಹಂಬಲವು. ಆತನಿರಬೌದೆ ಅವಯ್ಯನು? ಯೀತನಿರಬೌದೇ ಅವಯ್ಯನು, ಹಂಗಿರಬೌದಾ ಅವಯ್ಯನು? ಹಿಂಗಿರಬೌದಾ ಅವಯ್ಯನು.. ಛೇ... ಛೇ.. ಯಿವನಲ್ಲ ಅವಯ್ಯನು.. ಛೇ... ಛೇ ಅವನಲ್ಲ ಯಿವಯ್ಯನು, ಮತ್ತಾರಿದ್ದಿರಬೌದು? ಯಂಬ ಸಂದೇಹದ ಸಂದೂಕದೊಳಗಿದ್ದ ಕಲೆಟ್ಟರ ಸಾಹೇಬನನ್ನು ವಂದ ನಾಕುಮಂದಿಯು ಕಕ್ಕುಲಾತಿಯಿಂದ ಸಿಂಗಾರಗೊಂಡಿದ್ದ ಝಪಡಿ ವಳಕ್ಕೆ ಕರೆದೊಯ್ದರು. ಗಿಡ್ಡನೆಯ ಬಾಗಿಲನ್ನು ಕಲೆಟ್ಟರನು ತಲೆಯೊಂದನ್ನಲ್ಲದೆ ನಡು ಬಗ್ಗಿಸಿ ದಾಟಿದೊಡನೆ ಜನ ವುಘ ವುಫ್ ಅಂತು. ರಂಡೀ ರಂಡೀ.. ಕಲೆಟ್ಟರ ಸಾಹೇಬss ಯಂದು ಸ್ವಾಗತ ಪಲುಕಿದ ಮಟ್ಟಸ ನಿಲುವಿನ ಯಕ್ತಿಯೇ ನಾಗಿರೆಡ್ಡಿ ಆಗಿದ್ದನು. ತಿಳಿದು ಭಾವಪರವಸನಾದ ಮನೋನು ಓಹ್.. ನಾಗಿರೆಡ್ಡಿಗಾರೂ' ಯಂದುದ್ದಾರ ತೆಗೆಯುತ್ತ ಧಾವಿಸಿ ಆಲಿಂಗನ ಮಾಡಿದನು. ನಾಗಿರೆಡ್ಡಿಯ ರುದಯದೊಳಗ ಕುಂಪಣಿ ಸರಕಾರ ಸಂಲಗ್ನಗೊಂಡಿತೋ, ಅವರೀಲ್ವರು ತಮ್ಮ ತಮ್ಮ ಹಿಂದಲ ಜಲಮದಲ್ಲಿ ವಂದೇ ತಾಯಿಯ ಹೊಟ್ಟೆಯ ವಳಗಿದ್ದರೋ, ವಂಛಣ ಹೊತ್ತು ಅಪ್ಪುಗೆ ಸಣ್ಣ ಆಗಲಿಲ್ಲ. ವಬ್ಬರ ವುಸುರನು ವಬ್ಬರು ಕುಡಿದರು, ಬೆವರ ಯಿನಿಮಯ ಮಾಡಿಕೊಂಡರು, ಗದ್ಗದಿತರಾದರು.. ಚಾವತ್ತಿನ ನಂತರ ಪರಸ್ಪರಹಿಡಿತ ಸಡಲ ಮಾಡಿದರು, ಯವೆಯಿಕ್ಕದೆ ನೋಡಿಕೊಂಡರು.. ಅವಯ್ಯನೊಳಗ ಯಿವಯ್ಯನು ತನ್ನನ್ನೂ, ಯಿವಯ್ಯನೊಳಗ ಅವಯ್ಯನು ತನ್ನನ್ನೂ ಬೆದಕಾಡಿಕೊಂಡರು, ವಬ್ಬರೊಳಗ ಯಿನ್ನೊಬ್ಬರ ದೀವಿಯಂದುಕೊಂಡರು ಸಿವನೇ.. ಅವರಿಗೆ ದ್ರುಸ್ಸಿ ತಗಲುವಂತೆ