ಪುಟ:ಅರಮನೆ.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೬ ಅರಮನೆ ಯದ್ದಿತ್ತು. ಹುಡುಕಿದರೆ ಸಿಗಬಹುದಿದ್ದ ಅರಮನೆಗೆ ಸಂಬಂಧಿಸಿದಂಥ ವಮುಸರುಕ್ಷಗಳು ಪ್ರತಿಯೊಬ್ಬರ ನಾಲಗೆ ಮ್ಯಾಲಿದ್ದವು. ಅತ್ತ ಕೂಡ್ಲಿಗಿ ವಳಗ ನಡೆಯುತಲಿದ್ದ ಕಥಿ ಅಷ್ಟು ಲಗೂನ ಆರುವಿಗೆ ಬರುವಂತಿರಲಿಲ್ಲ. ಬರೋರು ಹೋಗೋರಿಗೆಲ್ಲ ಯಿಡೀ ಪಟ್ಟಣವು ಧರುಮಛತ್ರದ ರೂಪ ಪಡೆದಿತ್ತು. ಅಗೋ ಅಲ್ಲಿ ಆ ಮೂರ ರಾಜ. ಯಿಗೋ ಯಿಲ್ಲಿ ಮೊರ ರಾಜ.. ಪ್ರತಿ ಹತ್ತು ಮಂದಿ ಪಯ್ಲಿ ವಬ್ಬರಲ್ಲಾ ವಬ್ಬ ರಾಜನು ಕಾಣಸಿಗುತಲಿದ್ದರು. ಅವರು ತಮ್ಮನ್ನು ತಾವು ಪರಿಚಯಿಸಿ ಕೊಳ್ಳುತಲಿದ್ದುದು, ಅವರು ತಮ್ಮ ತಮ್ಮ ತುದಿನಾಲಗೆಗಳ ಮ್ಯಾಲ ಭೂತಕಾಲದ ಗೊಬ್ಬುರವನ್ನು ಯಿಟ್ಟುಕೊಂಡಿದ್ದುದು, ಅವರು ತಮ್ಮ ತಮ್ಮ ನಿಲುವಂಗಿಗಳ ಮ್ಯಾಲ ಸವಕಲು ಪದಕಗಳನ್ನು ನೇತುಹಾಕಿಕೊಂಡಿದ್ದುದು, ಅವರು ಹೆಜ್ಜೆ ಹೆಜ್ಜೆಗೊಂದೊಂದು ಸಲ ತಮ್ಮ ತಮ್ಮ ಭಗ್ನರಿ ಮೀಸೆಗಳ ಮಾಲ ಕಯ್ಯಾಡಿಸುತಲಿದ್ದುದು, ರಾಜರ ರೀತಿ ರಿವಾಜೊಳಗ ನಡೆಯಲೆತ್ನಿಸುತ್ತಿದ್ದುದು, ನುಡಿಯಲೆತ್ನಿಸುತ್ತಿದ್ದುದು ನಾಕು ಮಂದಿ ತಮಗ ಗವುರದ ದಯಪಾಲಿಸಲಂತ.. ಅದರ ಯಾರೊಬ್ಬನು ನಾಮ ಮಾತ್ರವುದ್ದಾರ ಯತ್ತುತಲಿರಲಿಲ್ಲ.. ಯಲ್ಲೋ ಯಾವತ್ತೋ ವಬ್ಬಾನೆ ವಬ್ಬ ರಾಜನಿದ್ದರ.. ಅವನು ಆನೆ ವಾಲ ಅಂಬಾರಿಯೊಳಗ ಬರುತಲಿದ್ದರೆ ಸರೆ.. ಸಿ. ಪದಕ ಕಿಂಕಾಪು ತೋರಿಸಿದ ಮಾತ್ರಕ ರಾಜನಂಗಾಗುತಾನ..? ವುಂಬಲಕ ಯಿಡೋರು ಯಂದು ಕೇಳುವವ ವಬ್ಬ ರಾಜನೇನು? ಕುಡಿಯಲಕ ನೀರು ಕೊಡೂರಿ ಯಂದು ಕೇಳುವವ ವಬ್ಬ ರಾಜನೇನು? ಮಲಗಲಕ ವಂಚೂರು ಜೆಗ್ಗವ ಕೊಡೂರಿ ಯಂದು ಕೇಳುವವ ವಬ್ಬ ರಾಜನೇನು? ಯಂದು ಯೋಚಿಸುತ ಮಂದಿ ಬಲು ತಾಚ್ಚಾರ ಮಾಡುತಲಿದ್ದರು. ಅದು ಮೊದಲೇ ಪರಸ್ಥಳ.. ವಂದಿನ ಯಿರಲಕಾದೀತು... ಯಲ್ಲು ದಿನ ಯಿರಲಕಾದೀತು.. ಮೂರನೇ ದಿನ ಯಿರಲಕಂದರ ಬಲು ತ್ರಾಸಾಗುತಲಿದ್ದಿತು. ಭವುತಿಕವಾಗಿ ಯಂಥವೇ ಆದ ಲಡಾಸು ಕಿಂಕಾಪು ಮೋಸಾಕು ಧರಿಸಿಕೊಂಡಿದ್ದರೂ, ತಲೆಮ್ಯಾಲ ದುಗ್ಗಾಣಿ ಮವುಲ್ಯದ ಪೇಟಿಯಂಬ ಕಿರೀಟ ಧರಿಸಿದ್ದರೂ ಹೊಟ್ಟೆ ಮೊರೆ ಆಲಿಸಬೇಕಲ್ಲ. ಚಟಗಳ ಅಟ್ಟವಾಗಿದ್ದ ಪಂಚೇಂದ್ರಿಯಗಳು ಕೇಳಬೇಕಲ್ಲ... ಸಂಚಾರಿ ಬೊಕ್ಕಸ ಖಾಲಿಯಾದೊಡನೆ ತಮ್ಮ ಯಾದಾರ ವಂದು ವಸ್ತುವನ್ನು ಅಮವುಲ್ಯ ಯಂದು ಭಾವಿಸಿ ಅಮಾತ್ಯರ ಕಲ್ಲೋ, ಭಂಡಾರಿಯರ ಕಲ್ಲೋ ಕೊಡುತ್ತ ಯಿದು