ಪುಟ:ಅರಮನೆ.pdf/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೮ ಅರಮನೆ ತಮ್ಮ ತಮ್ಮ ಗಡ್ಡ ಮೀಸೆಗಳನ್ನು ಲೆಕ್ಕಿಸದೆ ವುಳುದು ಬಿಟ್ಟಿದ್ದಂಥವರೂ ಯಿದ್ದರು. ಕೆಲವು ರಾಜರು ತಮ್ಮ ತಮ್ಮ ಸರೀರಗಳ ಭಾದೆ ತೀರಿಸಲಕೆಂದು ಯೇಶ್ಯಾವಾಟಿಕೆಗಳ ಹೊಸ್ತಿಲು ದಾಟಲಾರಂಭಿಸಿದ್ದರು. ಅಂಥವರ ಪಯ್ಕೆ ಹೆಸರಗುಂಟ ಕರೆಯಬೌದದಂಥವರೆಂದರ ಹಾಲಪಿಂರು ರಾಜನಾದ ಚನ್ನನಗವುಡನು, ಬೂದಾಳು ರಾಜನಾದ ಯತ್ತಪ್ಪನಾಯಕನು, ಬೊಮ್ಮಗಟ್ಟದ ರಾಜನಾದ ಬಮ್ಮನಾಂತುಕನು, ಕಣ ಕುಪ್ಪಂ ರಾಜನಾದ ತಡಸಾಲಯ್ಯನಾಯಕನು, ಗುಡ್ಡಗಾಡು ದೇಸಗಳಿಗೆ ಸೇರಿದವರಾದ ಯವರು ತಮ್ಮ ತಮ್ಮ ಮುಂಗಯ್ಯಗಳಿಗೆ ಮಲ್ಲಿಗೆ ದಂಡೆಗಳನ್ನು ಕಟ್ಟಿಕೊಂಡು ಜಾವ ಜಾವಕ್ಕೊಂದು ಸಲ ಮೂಸುತ್ತ ಯರಕಲಮ್ಮ ಪದುಮಾವತಮ್ಮ ಮಾತರಮ್ಮ ಗವರಮ್ಮ, ಗಿರಿಜಮ್ಮರೇ ಮೊದಲಾದ ರುತ್ತಿಪರ ಯೇಸ್ಯೆಯರ ಮನೆಗಳೊಳಗ ಗಾನಾ ಬಜಾನ ಕೇಳೂತಃ ಕೇಳೂತ ಮಯ್ಯ ಮರತು ಯಿದ್ದು ಬಿಟ್ಟರು. ಅವರಿಗೆ ತಮ್ಮ ತಮ್ಮ ರಾಣಿ ವಾಸದವರಿಂದಲೂ, ಆಡಳಿತ ವರದ ಪದಾಧಿಕಾರಿಗಳಿಂದಲೂ ಬುಲಾವುಗಳು ವಂದರ ಮ್ಯಾಲ ವಂದರಂತೆ ಬರಲಾರಂಭಿಸಿದ್ದವು. ಅಂಥ ಬುಲಾವುಗಳನ್ನು ಅವರು ಗದ್ದರಿಸಿ ಕಳುಹಿಸುತಲಿದ್ದರು, ಪರಿಸ್ಥಿತಿ ಹಿಂಗs ಯಿರುವಾಗ್ಗೆ sss ಕುರುಗೊಡು ರಾಚಮಲ್ಲನ ಯೇಳನೇ ಹೆಂಡತಿಯ ವಮುಸಸ್ಥನೂ, ಬಾದನಟ್ಟಿ ಪಾಳೆಪಟ್ಟಿನ ನಾಯಕನೂ, ಬಲ್ಲ ಕುಂದೆ ಮಾಂಕಾಳಮ್ಮನ ಸದುಭಕುತನೂ ಆದಂಥ ಯೀರ ಭೋಜನಾಯಕನು ವಂಟೆ ಡುಬ್ಬದ ಮ್ಯಾಲ ಕೂಕಂಡು ಸದರಿ ಪಟ್ಟಣವನ್ನು ಪ್ರವೇಸ ಮಾಡಿದ್ದು ಯರಡು ಕಾರಣಗಳಿಗಾಗಿ.. ಮದನೇದೆಂದರೆ ವಡ್ಡಟ್ಟಿ ಗುತ್ತಪ್ಪನಾಯಕನ ಮ್ಯಾಲೆ ಧಾಳಿ ಮಾಡುವ ಸಲುವಾಗಿ ಅಯಿವತ್ತು ಮಂದಿ ಸಿಪಾಯಿಗಳನ್ನು 'ಸಯ್ತಿಕ ಸಾಯ ಪದ್ದತಿ' ಅಡಿ ಕಳುವಿಕೊಡಬೇಕೆಂದು ಯೀ ಹಿಂದೆಯೇ ಕುಂಪಣಿ ಸರಕಾರಕ್ಕೆ ದರಖಾಸ್ತು ಸಲ್ಲಿಸಿದ್ದನು. ಅದು ಯೇನಾತು ಯಂದು ತಿಳಿದುಕೊಳ್ಳಲಕ ಬಂದಿದ್ದನು. ಯರಡನೇದು ಯಂದರೆ.. ತಿಲ್ಲಾನ ತಾಯಕ್ಕನ ಮಗಳು ಚಿನ್ನಾಸಾನಿ ರುತುಮತಿಯಾದಾಗ ಬಂದು ನಝರಾನ ಸಲ್ಲಿಕೆ ಮಾಡುವುದಾಗಿರಲಿಲ್ಲ. ಆಕೆಯ ಮೂಗು ತನ್ನ ಮೂಗನ್ನು ಹೋಲುತ್ತಿರುವದಂತೆ, ಸುದ್ದಿ ಕಿವಿಗೆ ಬಿದ್ದಂದಿನಿಂದ ಕರುಳ ಸೆಳೆತಕ್ಕೆ ತುತ್ತಾಗಿದ್ದ, ಹಳೆಯ ನೆನಪುಗಳ ಮಂಕರಿಯೊಳಗೆ ಹುದುಗಿ ಚಡಪಡಿಸಿದ್ದ...