ಪುಟ:ಅರಮನೆ.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೭೯ ಯಾವತ್ತೋ ತಾನು ಬರದಿತ್ತು. ಯೇಸೋ ವರುಷಂಗಳ ಹಿಂಗಡ ಮಾತಿಗೆ ಮಾತು ಬಂದು ವಂಟೆ ಮ್ಯಾಲೆ ಬಂದು ಕಾಣುವುದಾಗಿ ಸಪಥ ಮಾಡಿದ್ದನಷ್ಟೆ. ಕುದುರೆಯ ಮ್ಯಾಲ ಬಂದರ ಬರಬೌದು, ಆನಿ ಮ್ಯಾಲ ಬಂದರss ಬರಬೌದು, ಆದರ ವಂಟೆ ಮಾಲ ಪಯಣ ಹೊಂಟು ಬರುವುದೆಂದರೇನು? ಆ ಕಾಲದಲ್ಲಿ ಬಲು ಬ್ಯಾಸರ ಪಟ್ಟಿದ್ದ ಕಾರಣದಿಂದಾಗಿ ತಾಯಕ್ಕ 'ಹೂ ಸರೆ' ಅಂದಿದ್ದಳು... ಈ ಹಿಂದಕ ಯರಡು ಮಂದಿ, ಮುಂದಕ ಮೂರು ಮಂದಿ, ಯಡಕ ಯರಡು ಮಂದಿ, ಬಲಕ ವಂದು ಮಂದಿಯನ್ನು ಅಲಂಕಾರಕ್ಕೆ ಯಿಟ್ಟುಕೊಂಡಿದ್ದ ಮೀರಭೋಜನು ಪ್ರವೇಸ ಮಾಡಿದೊಡನೆ ಪಟ್ಟಣದ ಪಂಚೇಂದ್ರಿಯಗಳು ಸರಕ್ಕಂತ ಆ ಕಡೇಕ ತಿರುಗಿಕೊಂಡುಬಿಟ್ಟವು. ಸದರಿಪಟ್ಟಣವು ವಂಟೆ ಯಂಬ ನಾಮವಾಚಕ ಕೇಳಿತ್ತೇ ಹೊರತು ಮುದ್ದಾಮು ನೋಡಿರಲಿಲ್ಲ. ಯೀತ ಯಾವ ಲೋಕದವ ಯಂದು ಸಂಭರಮಾಚ್ಚರದಿಂದ ಕೇಳುತಲಿದ್ದವರಿಗೆ ಬಿರುದಾವಳಿ ಪರಾಕು ಸಹಿತ ಯಿಸದ ಮಾಡಲಕ ಯಂದೇ ಭಟ್ರಾಜು ಭದ್ರಿರಾಜು ಯಂಬಾತನನ್ನು ವಂದು ದಿನದ ಮಟ್ಟಿಗೆ ಬಾಡಿಗೆ ಪಡಕೊಂಡು ಮುಂದ ಮುಂದಕ ಬಿಟ್ಟಿದ್ದನು. ಆದ್ದರಿಂದ ತಾನು ರುಥಾ ತಲೇನ ಖರಚು ಮಾಡಿಕೊಳ್ಳುವ ಅಗತ್ಯಯಿರಲಿಲ್ಲ. ಮೀಸೆಯನ್ನು ಚೂರಿಯಾಕಾರಕ್ಕೆ ತರಲೆಂದು ತೀಡೀ ತೀಡಿ ತನ್ನ ಯಡ ಮುಂಗಯ್ಯ ನೋಯುತ್ತಿದ್ದರೂ ಲೆಕ್ಕಿಸದೆ ಕುಂಪಣಿ ಕಛೇರಿಗೆ ಹೋಗಿ ಯಿಚಾರಿಸಿದ. ಆ ಕಡತವನ್ನು ನೋಡಿಕೊಳ್ಳುವ ರಾಯನು ರಜೆಯ ಮೇಲಿರುವುದರಿಂದಲೂ, ಯಡ್ಡವರ ಸಾಹೇಬನು ಅಂಥೋಣಿ ಪಾದರಿಂನೊಂದಿಗೆ ಫಲಾನ ದು ಫಲಾನ ವರಿಗೆ ಹೂಗಿರುವುದರಿಂದಲೂ... ಸಿಸಿಯಂದು ಆ ರಾಜನು ತನ್ನ ವಾಹನವನ್ನು ಯಲ್ಲಿಗೆ ತಿರುಗಿಸಿದನೆಂದರೆ.. ಮೀರಭೋಜ ಅಂದರೆ ಯಾರು? ಓಹೋ.. ಅವಯ್ಯನು.. ಅವಯ್ಯನು ಯಾಕ ವಂಟೆಯ ಮಾಲ! ಓಹೋ ಅದಕ್ಕ... ತನ್ನ ಮನೆಯ ಗುರಿಯಿಟ್ಟುಕೊಂಡು ಬರುತ್ತಿರುವ, ವಂಟೆ ಮ್ಯಾಲ ಯಿರೋದು ಮೀರಭೋಜ ಯಂಬ ಸಂಗತಿ ತಿಳಿದು ತಾಯಕ್ಕ ವಂಛಣ ವುಲುಕ್ಕಿ ಪಡ್ಡಳು. ವಂಟೆ, ಆನೆಗಿಂತ ಮುಂಗಟ ಯಂದೇ ತಾನೀ ಮೊದಲು ಭಾವಿಸಿದುದುಂಟು. ಯಾವಾಗ ಚಿನ್ನಾಸಾನಿ ರುತುಮತಿಯಾದಾಗ ಬರಲಿಲ್ಲವೋ