ಪುಟ:ಅರಮನೆ.pdf/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅರಮನೆ

೨೮೧

ನೋಡಿದೆಡಲ್ಲಿ ಧುರುಮಛತ್ರಗಳು, ನೀರಿನರವಟ್ಟಿಗೆಗಳು, ಬಿಡದಿ ಮನೆಗಳು
ಹುಟ್ಟಿಕೊಂಡವು.. ಯಲ್ಲಂದರಲ್ಲಿ ಹ್ಹೋ... ಹ್ಹೋ.. ಯಲ್ಲಂದರಲ್ಲಿ ಹ್ಹಾ.. ಹ್ಹಾ..
ಯಂಬ ವುದ್ದಾರಗಳು ಹುಟ್ಟಿಕೊಂಡವು....
ಆ ಗವುಜ ಗದ್ದಲ ಭರಾಟೆಯೊಳಗ ಅರಮನೆಯು ತನ್ನ ಖೂನ ಗುರುತ
ಕಳಕೊಂಡು ಅಂಡಾವರನ ಪುಂಡೀಪಲ್ಲೆ ಆಗಿಬಿಟ್ಟಿತು ಸಿವನೇ.. ರಾಜಮಾತೆ
ಭಯ್ರಮಾಂಬೆ ಯಸನ ಮಾಡುತ ಕುಂತಿದ್ದಾಕಿ ಮ್ಯಾಲಕ ಯೇಳಲಿಲ್ಲ ಸಿವನೇ..
ತಾಯಿ ಸಾಂಬವಿಯಂಬುವ ಸಬುಧವು ಯಾವತ್ತೂ ಮಂದಿಯ ಥೆಲಿಯೊಳಗ
ಹೇನಾಗಿ ಸುಟುಸುಟು ಅಂತಿತ್ತು ಸಿವನೇ.. ಯಾವತ್ತೂ ಮಂದಿಯ ಸರೀರದ
ತುಂಬೆಲ್ಲ ತಾಯಿ ಸಾಂಬವಿಯಂಬುವ ಸಬುಧವು ತೊಣೆಚೆಯಾಗಿ ಹರದಾಡಲಕ
ಹತ್ತಿತು ಸಿವನೇ.. ಅಲ್ಲಿ ಹಗಲೆಂಬುವುದು ಯಿರಧಂಗಾತು.. ಯಿರುಳು
ಯಂಬುದು ಯಿರಧಂಗಾತು.. ಕಿವಿ ಅನಿಸಿದ ಕಡಲೆಲ್ಲ ಭಕುತಾದಿ ಮಂದಿಯ
ದಿಂಡುರುಳಿಕೆಗಳು.. ನೆಲವೆಲ್ಲ ಪ್ರಸಾದ.. ಜಲವೆಲ್ಲ ಸರುವ ತೀರ್ಥ....
ಮಾಮೂಲು ಮನುಷ್ಯರದೇ ಯೀಪಾಟಿ ವರ್ತನ ಯಿರುವುದು ಕಂಡು
ಯರಡಾ ನಾಕಲೆ ಯಂಟು ದಿಕ್ಕುಗಳು ಸುಮಸುಮ್ಮಕ ಯಿರಲಿಲ್ಲ.. ಅವುಗಳಿಗೆ
ಗಳಿಗೆಗೊಂದೊಂದು ಸಲ ಅದಲಿ ಬದಲೀ ಕಂಭವಾಗಲಕ ಹತ್ತಿದವು..
ರುತುಗಳೂ ಸುಮುಸುಮ್ಮಕ ಯಿರಲಿಲ್ಲ.. ಅವೆಷ್ಟಿರುವಮೋ ಅವಿಷ್ಟು ಸದರಿ
ಪಟ್ಟಣವನ್ನು ಪ್ರವೇಸ ಮಾಡಿ ಸಂಚಾರ ಕಯ್ನಕೊಂಡವು.. ಅದರ ಪರಿಣಾಮವಾಗಿ
ಸೀಲವಂತರೋಣಿ ಮಂದಿ ಸಳಿ ಸಳಿ ಅಂಬಲಕ ಹತ್ತಿದರ, ಮಾಲ್ಯವಂತರ
ಮೋಣಿ ಮಂದಿ ಸೆಕೆ ಸೆಕೆ ಅಂಬಲಕ ಹತ್ತಿದರು.. ದಳವಾಯಿಗಳೋಣಿಯ
ಮರಗಿಡಗಳು ಯಲೆ ವುದುರಿ ಬೋಡಾಗುತಲಿದ್ದರ, ಮಡ್ಡೇರೋಣಿಯ
ಗಿಡಮರಗಳು ಹೊಸ ಹೊಸ ಚಿಗುರು ಮುಡಕೊಂಡು ಮದಮಕ್ಕಳಂಗ
ಗೋಚರವಾಗತೊಡಗಿದವು.. ವರುಷ ರುತವಂತೂ ಜಾವ ಜಾವಕ್ಕಂದೊಂದು
ಸಲ ನೀರು ಚಿಮುಕಿಸುತ ಸುಳಿದಾಡಲಾರಂಭಿಸಿತ್ತು. ಪ್ರಕ್ರುತಿ ನಿಯಮಗಳು
ಅದಲು ಬದಲಾಗುತ ಸಂಭರಮಪಡುತಲಿದ್ದವು.. ವಂದೇ ಮಾತಲ್ಲಿ

ಹೇಳಲಕಂದರ....
****
ಅತ್ತ ಗುಂತಕಲ್ಲು ಪಟ್ಟಣದೊಳಗ ಮಿಷನರಿ ಗೋಡೆ ಯಬ್ಬಿಸುತಲಿದ್ದ
ಭಾವೀ ಸಂತ ಮುನುಸೋಬಯ್ಯಗೇ ಯೀ ಸುದ್ದಿ ತಿಳಿದು ನಂಬಲಿಕಾಗಲಿಲ್ಲ.