ಪುಟ:ಅರಮನೆ.pdf/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೮೩ ಗುಣವಾದ ವುಗ್ರಹೋರಾಟ, ರಕುತಪಾತಗಳಿಗೆ ದಕ್ಕೆವದಗದಂತೆ ನೋಡಿಕೋ. ಯಾರಾರು ಹೆಂಗೆಂಗಿರುವರೋ ಹಂಗಂಗೇ ಮುಂದುವರೆಯುವಂತೆ ನೋಡಿಕೋ ದೇವರೇ” ಯಂದು ಸದರಿ ಪ್ರಾಂತದ ಭೋ ಪಾಲು ಮಂದಿ ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ವಳಗೊಳಗ ಬೇಡಿಕೋತಿದ್ದುದು ಸಾಮಾನ್ಯ ದ್ರುಸ್ಯವಾಗಿತ್ತು ಸಿವನೇ.... ಸದರಿ ಪ್ರಾಂತದ ಫಲಾನ ಮೂರೊಳಗ ಭೋಜನ ನಡದು ಯಿತಿಹಾಸವನ್ನು ಯಕ್ಕಿತ್ತಲ್ಲಾ... ಅದು ಹಂಗs ನಡೆಯಿತು.. ಹಿಂಗ ಅದರ ಬೆನ್ನ ಹಿಂದುಗಡೆಗೇ ಮನೋನು, ನಾಗಿರೆಡ್ಡಿಯು ವುಂಡಂಥ ಪತೋಳಿಗಳಿಗೆ, ನೀರು ಕುಡಿದಂಥ ತಂಬಿಗೆ, ಲೋಟ್ಯಾಗಳಿಗೆ ಯಲ್ಲಿಲ್ಲದ ಬೆಲೆ ಬಂದು ಬಿಟ್ಟಿತ್ತು. ಅದು ನನಗೆ ಬೇಕು, ಯಿದು ತನಗೆ ಬೇಕು ಯಂದು ಸುತ್ತಮುತಲಿದ್ದ ಮಂದಿ ವಾದಾಡಿದ್ದುಂಟು, ಕಚ್ಚಾಡಿದ್ದುಂಟು. ಕಲ್ಕಿ ಕಮ್ಮಿ ಮಿಲಾಯಿಸಿದ್ದುಂಟು... ಯಿನ್ನೇನು ರಕುತಪಾತವಾತಯ್ಕೆ ಅಂಬುವಷ್ಟರಲ್ಲಿ ಫಲಾನ ಗ್ರಾಮದ ಗವುಡ, ಸಾನಭೋಗರೀಲ್ವರು ಪರಸ್ಪರ ಸಮಾಲೋಚನೆ ಮಾಡಿ “ನೋಡೋರು ನೋಡಿರಪ್ಪಾ.. ಕೇಳೋರು ಕೇಳಿರಪ್ಪಾ. ಮನೋನು, ನಾಗಿರೆಡ್ಡಣ್ಣ ವುಂಡು ಬಿಟ್ಟಂಥ ಪತ್ರೋಳಿಯೊಳಗ ಸಾಕ್ಷತ್ ಭೀಮಲಿಂಗೇಶ್ವರಸ್ವಾಮಿಯೇ ಅಡಗಾನ.. ಅವು ಯಾರ ಮನೆಯನ್ನು ಸೇರುತಾನೋ ಆ ಮನೆಯೊಳಗೆ ಕಾಲಾನುಕಾಲಕ್ಕೆ ಬಂಗಾರದ ಹೊಗೆ ಯೇಳುತಯ್ಕೆ.. ಯಿಂಥ ಅಮೂಲ್ಯ ವಸ್ತುಗಳನ್ನು ಪುಗಸಟ್ಟೆ ವಯ್ಯುವುದು ಸುತರಾಂ ಸಲ್ಲದು.. ಯಿವನ್ನು ಲೀಲಾವು ಮಾಡಬೇಕೆಂದಿರುವೆವು.. ಯೀ ಲೀಲಾವಿನಿಂದ ಸಂದಾಯವಾಗುವ ಡಬ್ಬನ್ನು ಗ್ರಾಮದ ಅಭಿರುದ್ದಿ ಕೆಲಸ ಕಾರೈವುಗಳಿಗೆ ಬಳಕೆ ಮಾಡಬೇಕೆಂದಿರುವೆವು... ಯಂದು ಹೇಳಿದ್ದಕ್ಕೆ ಯಲ್ಲಾರೂ ವಪ್ಪಿಕೊಳ್ಳದೆ ಯಿರಲಿಲ್ಲ.. ರೆಟ್ಟೆಯೊಳಗ ಕಸುವಿದ್ದರೆ ಸಾಲದು, ಬಕ್ಕಣದೊಳಗೆ ದಂಡಿ ದಂಡಿ ಡಬ್ಬುಯಿರುವುದು ಅವಶ್ಯವು.. ಅದರ ಸದರಿಗ್ರಾಮದಲ್ಲೊಂದೇ ಅಲ್ಲದ ಸುತ್ತಮುತ್ತಲ ಗ್ರಾಮಗಳಲ್ಲೂ ವಸ್ತು ಯಿಶೇಷ ಯಿವರಿಸಿ ಟಾಮು ಟಾಮು ಹಾಕಿಸಿದರು.. ಫಲಾನ ದಿವಸದಂದು ಫಲಾನ ಯಾಳ್ಯಕ್ಕೆ ಸರಿಯಾಗಿ ಡಬ್ಬುಳ್ಳ ಮಂದಿ ಫಲಾನ ಗ್ರಾಮಕ್ಕೆ ಆಗಮನ ಮಾಡಿದರು.. ಪಕಡ್ ಬಂಧಿಯೊಳಗ ಲೀಲಾವು ಯಶಸ್ವಿಯಾಗಿ ನಡೆಯಿತು. ವಂದೊಂದು ಯಂಜಲೆಲೆಯು ದಾಖಲೆ ಮಟ್ಟದಲ್ಲಿ ಯಿಂತಿಷ್ಟು ಮೊತ್ತಕ್ಕೆ ಲೀಲಾವು ಆಯಿತು... ಜೊತೆಗೆ ತಂಬಿಗೆ ಲೋಟ್ಯಾಗಳು ಸಹ.. ಅವನ್ನು ಪಡಕೊಂಡಂಥರು ಮೆರವಣಿಗೆ