ಪುಟ:ಅರಮನೆ.pdf/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೮೫ ವುಸುರಾಡೋ ಪ್ರತಿಯೊಬ್ಬರ ವಳಗ ಪ್ರವೇಸಿಸಿ ಕುಂಪಣಿ ಸರಕಾರದ ಗುಲಾಮರನ್ನಾಗಿ ಮಾಡಿಟ್ಟುಕೊಳ್ಳುವೆನು ... ಹೈ.” ಯಂದಂತೆ ಭಾಸವಾಯಿತು.. ಅಯ್ಯೋ ಭೀಮ್ಹಂಗೇಶ್ವರಸ್ವಾಮಿ.. ಯಂಥಾ ಪಾಪ ಕಾವ್ಯವನ್ನು ಮಾಡಿಬಿಟ್ಟೆನಲ್ಲಾ. ರಂದು ಬೊಬ್ಬಿಲಿ ಬಿರುದಾಂಕಿತ ನಾಗಿರೆಡ್ಡಿಯು ಮಮ್ಮಲನ ಮರುಗತಲಿರುವಾಗ್ಗೆ.... - ಅತ್ತ ಬಳ್ಳಾರಿಯ ಅಠಾರ ಕಛೇರಿಯೊಳಗ ಮನ ಪರಿಸ್ಥಿತಿಯು ನಾಗಿರೆಡ್ಡಿಯ ಪರಿಸ್ಥಿತಿಗಿಂತ ಸೋಲುಪ ಭಿನ್ನ ಯಿತ್ತು. ಅವರಿವರು ಯೇನು ಅಂದಾಡುವರೆಂಬುದರ ಕಡೆಗೆ ತಿಲ ಮಾತ್ರಗಮನ ಯಿಟ್ಟಿರಲಿಲ್ಲ. ತಾನು ಮೊದಲೇ ಕಲೆಟ್ಟರು ಸಾಹೇಬ.. ತಾನು ನಡೆದದ್ದೇ ಹಾದಿ.. ತಾನು ಮಾಡಿದ್ದೇ ಸರಿ, ತಾನು ಪ್ರಸ್ನಾತೀತ.. ನಾಗಿರೆಡ್ಡಿಯ ರೂಪ ತನ್ನೊಳಗ ವುದಾರವಾಗಿ ಬೆಳೆಯುತಲಿತ್ತು. ಆತನೊಳಗ ಯಿಂಡಿಯಾದ ಅವುದಾರ ಯಿಂಡಿಯಾದ ಅಂತಃಕರಣ, ಯಂಡಿಯಾದ ಸ್ನೇಹ ಪರತೆ ಯಿವೆಲ್ಲ ಸಂಗಮಿಸಿರುವುದು. ನೀನು ನನ್ನ ಗೆಲ್ಲಲಾರೆ ಯಂದು ಆತ ತನಗೆ ಸವಾಲು ಹಾಕಿರುವನೆಂದುಕೊಂಡ. ಆತ ಪ್ರಾಂಶುಶಃ ತಾನು ಅವನೊಂದಿಗೆ ಭಜನ ಕೂಟದಲ್ಲಿ ಪಾಲ್ಗೊಳ್ಳದಿರಬೌದೆಂದೇ ಯೀ ಮೊದಲು ಭಾವಿಸಿದ್ದಿರಬೇಕು. ಅವನ ನಿರೀಕ್ಷೆಯನ್ನು ತಾನು ಸುಳ್ಳು ಮಾಡಿದನು. ಆ ಮೂಲಕ ತನ್ನ ಸರಳ ಸಹುರುದಯತೆಯನ್ನು ಮನವರಿಕೆ ಮಾಡಿಕೊಟ್ಟೆನು. ಅತನಷ್ಟೇ ತಾನು ಕೂಡ ಜನಪ್ರಿಯತೆಯನ್ನು ಸಂಪಾದಿಸಿದನು. ಆತನಲ್ಲಿ ಕುಂಪಣಿ ಸರಕಾರದ ಬಗೆಗಿರಬೌದಾದ ಸಿಟ್ಟು ಸೆಡವುಗಳನ್ನು ಕಡಿಮೆ ಮಾಡಿದೆನು, ಯಿದು ಕೂಡ ವಂದು ವಿಜಯೋತ್ಸವವೇ ಸರಿ... ಹಾ.. ಅದೆಲ್ಲ ವತ್ತಟ್ಟಿಗಿರಲಿ, ತನ್ನ ಸಮವಸ್ತ್ರದೊಳಗ ಆತ ಯಷ್ಟು ಸರಿಸಮವಾಗಿ ಗೋಚರಿಸಿದನಲ್ಲ.. ತನ್ನ... ಅಂದರ ಕುಂಪಣಿ ಸರಕಾರ ಪ್ರತಿಷ«ಯ ಸಂಕೇತವಾಗಿದ್ದ ಆ ಸಮವಸ್ತ್ರವನ್ನು ಆತನೀಗ ಹ್ಯಾಂಗ ವುಪಯೋಗ ಮಾಡುತ್ತಿರಬೌದು? ಧಾರಣ ಮಾಡಿ ಸತಪತ ಅಡ್ಡಾಡುತ್ತಿರಭೌದೇ? ಮೀಸೆಮ್ಯಾಲ ಕಯ್ಯನಾಡಿಸುತ್ತಿರಬೌದೇ... ಹಾ... ಹಾ.. ತಾನು ಥಾಮಸು ಮನ್ನೋ, ತಾನೇ ಕಲೆಟ್ಟರು ಸಾಹೇಬನೆಂದೇ ಬೀಗುತ್ತಿರಬೌದೇ? ಯಂದೀವಯ್ಯನು ಯೋಚಿಸುತ್ತಿರುವಾಗ ಆ ಫಲಾನ ಮೂರು ಕಡೇಲಿಂದsss ಅರುವೆ ಸುಟ್ಟ ವಾಸನೆಯು ತೇಲಾಡುತss ತೇಲಾಡುತ ಬಂದು ತನ್ನ ಸುತ್ತಮುತ್ತ ಗಿರಕಿ ಹೊಡೆಯಲಾರಂಭಿಸಿತು. ಕಲೆಟ್ಟರ ಮೂಗನ್ನೇ ಕಿವಿ ಯಂದು