ಪುಟ:ಅರಮನೆ.pdf/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೬ ಅರಮನೆ


    ಭಾವಿಸಿ ತನಗೊದಗಿರುವ  ದುಸ್ಥಿತಿಯನ್ನು ನಿವೇದನೆ ಮಾಡತೊಡಗಿತು. ಭದ್ರತಾದಳವು ಅಲ್ಲಿ ಅರವೆ ಸುಡುತಯ್ತಾ? ಯಿಲ್ಲಿ ಅರವೆ ಸುಡುತಯ್ತಾ ಯಂದು ಸುತಮುತ್ತ ಬೆದಕಾಡಾಲಾರಂಭಿಸಿದರು. ಅಲ್ಲಿ ಅರುವೆ ಸುಡಾತಾ ಯಿಲ್ಲಿ.. ಯಿಲ್ಲಿ ಅರುವೆ ಸುಡುತಾಯಿಲ್ಲ. ಯಲ್ಲಿ ಅರುವೆ ಸುಡುತ್ತಿರಬಹುದು? ಯಂದು ಭದ್ರತಾದಳವು ಸುತಮುತ್ತ ಬೆದಕಾಡಲಾರಂಬಿಸಿತು. ಮನ್ರೋ ಸಾಹೇಬನು "ಭಲಾನಾಗಿರೆಡ್ಡೀ ಭಲಾ" ಯಂದು ವುದ್ಗಾರ ಮಾಡಿದನು. ನಾಗಿರೆಡ್ಡಿಯ ವಸ್ತರ ಯಿನ್ಯಾಸವು "ಗಂಡಸಾದರ ನೀನೂ ನನ್ನ ಸುಡು ಮತ್ತೆ" ಯಂದು ಸವಾಲು ಹಾಕುತ್ತಿರುವಂತೆ ಭಾಸವಾಯಿತು. ಸುಡುವುದು ದೊಡ್ಡ ಮಾತಲ್ಲ..  ಸುಟ್ಟಲ್ಲಿ ಅದೂ ಹೊಗೆ ರೂಪದ ರಾಯಭಾರಿಯಾಗಿ ಹೋಗಿ ನಾಗಿರೆಡ್ಡಿಗೆ ವರದಿ ಮಾಡದೆ ಯಿರದು? ಅದಕ್ಕೆಂದೆ ತಾನು ಯೇನು ಮಾಡಿದನೆಂದರೆ....
    ವಂದು ಸ್ಕೆಲಟನ್ನನ್ನು ತರಿಸಿ ಅದಕ್ಕೆ ನಾಗಿರೆಡ್ಡಿಯ ವುಡುಪನ್ನು ತೊಡಿಸಿ ಯದುರಿಗೆ ಮುರಕು ಕುರುಚಿಯ ಮ್ಯಾಲ ಕುಂಡರಿಸಿಟ್ಟುಕೊಂಡನು. ಕೂಡಲೆ ಕೇಂದ್ರಕಾರಾಗ್ರುಹಕ್ಕೆ ಹೋಗಿ ನಾಗಿರೆಡ್ಡಿಯ ಸಹಚರರನ್ನು ಕಂಡು ರೆಡ್ಡಿಯ ಗುಣಗಾನ ಮಾಡ ಬಿಡುಗಡೆ ಮಾಡಿದನು..  ಯಂಜಲು  ಯಿನಿಮಯ ಮಾಡಿಕೊಂಡಿರುವುದರಿಂದ ತಾನಿಲ್ಲೇ ಯಿರುವಿದು ವಳಿತಲ್ಲ ಯಂದು ಬಗೆದು ದುಪಟಿಕಲೆಟ್ಟಲು ಕ್ಯಾಂಪಬೆಲ್ಲು, ಹೆನ್ರಿಮುಂತಾದವರನ್ನು ತನ್ನು ಖೋಲಿಗೆ ಕರೆಯಿಸಿಕೊಂಡು ಅವರು ಕಿವಿಯೊಳಗ ಪಿಸಿ ಪಿಸಿ ನುಡಿವುತ ತನ್ನ ಕಣ್ಣುಗಳಲಿ ಎರಡು ಚಮಚ ನೀರು ತಂದುಕೊಡನು.. ಗದ್ಗದಿತನಾಗುತ್ತಲ್ಲೇ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಸಭೆಯನ್ನು ಬರಕಾಸ್ತು ಮಾಡಿದನೆಂಬಲ್ಲಿಗೆ ಸಿವ ಸಂಕರ ಮಾದೇವ

ಅತ್ತ ಹರಪನಹಳ್ಳಿ ವಳಿತದ ಹಲವು ಗ್ರಾಮಗಳೊಳಗೆ ಸರ್ರೇ.. ಸರ್ರೇ... ಅತ್ತ ಕೂಡ್ಲಿಗಿ ಪಟ್ಟಣದೊಳಗೆ ಜೆನ್ನಿಫರಮ್ಮಳ ಸಾಯದಿಂದ ಯಾವ ಬಂಂಅವನ್ನು ಕಲೆಯಿಸಿದರ ಯಾವ ಬಣ್ಣ ಮೂಡುತದ ಯಂಬುವಷ್ಟರ ಮಟ್ಟೀಗೆ, ಬಣ್ಣದ ಕಿಡುಕೆಯೊಳಗೆ ಕುಂಚ ಅದ್ದಿ ತೆಗೆಯುವಷ್ಟರ ಮಟ್ಟೀಗೆ, ನಾಲಕಾರು ಚಿತ್ರಗಳನ್ನು ರಚನೆ ಮಾಡುವಷ್ಟರ ಮಟ್ಟಿಗೆ ಯೇಂಜಲು ಅಂದರ ಚಿನ್ನಾಸಾನಿ ಕಲಿತುಕೊಂಡಿದ್ದರ, ಚಿನ್ನಾಸಾನಿಯ ಸಾಯದಿಂದ ನಿರಿಗೆ ಬರುವಂತೆ ಸೀರೆ, ಕುಬುಸು ವಿಟ್ಟುಕೊಳ್ಳುವಷ್ಟರಮಟ್ಟಿಗೆ, ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುವಷ್ಟರಮಟ್ಟಿಗೆ, ತಂದಾನ ಯಂದು ಹೆಜ್ಜೆ ಹಾಕುವಷ್ಟರಮಟ್ಟಿಗೆ, ಕರಿವದನ