ಪುಟ:ಅರಮನೆ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರ್ವ : ವಂದು ವಾರದ ಹಿಂದೆಯಷ್ಟೆ ಬೆಳಗುಪ್ಪದ ಜಮಿಂದಾರ್‍ರುಚಿನ್ನೋಬುಳ ರೆಡ್ಡಿಯನ್ನೂ, ಮುಷೂರು ಮಾದಿರೆಡ್ಡಿಯನ್ನೂ ಯೇಕಕಾಲಕ್ಕೆ ಮಣಿಸಿ ಕಡುಪಾದ ವಸ್ತಿವಳಗ ತನ್ನ ಸರೀರದ ಮ್ಯಾಲಿದ್ದ ಪೋಷಾಕನ್ನು ಕಳಚಿ ಕಲೆಟ್ರುಥಾಮಸು ಮನ್ರೋ ಸಾಹೇಬನು ಯದುರಿದ್ದ ನಿಲುಗನ್ನಡಿಯಲ್ಲಿ ನೋಡಿಕೊಳ್ಳುತ ತನ್ನ ಪ್ರತಿಬಿಂಬವನ್ನು ತಾನು ಮೋಹಿಸಿಕೊಳ್ಳುತ್ತಿರುವಾಗ್ಗೆ.. ಸಂಡೂರು ಗೆಡ್ಡೆಯ ಕಾರೀಕ ಸ್ವಾಮಿಯ ಕಾಡಡವಿಯಲ್ಲಿ ಕೂಡ್ಲಿಗಿಯ ಕುಂಪಣಿ ಅಧಿಕಾರಿ ಯಡ್ಡವರ್‍ಡನು ಹುಲಿ ಚಿರತೆಗಳನ್ನು ಶಿಕಾರು ಮಾಡುತಿರುವಾಗ್ಗೆ.. ಪದಭ್ರಷ್ಟಗೊಂಡಿದ್ದ ನಲ್ಲಚರುವಿನ ಗುರುವಪ್ಪನಾಯಕನು, ಹೆಬ್ಬೆಟದ ಪೆದ ತಿಮ್ಮಾರೆಡ್ಡಿಯು, ಹರುವಾಣದ ಹರಿಶ್ಚಂದ್ರರೆಡ್ಡಿಯು ಬೆಳಗಲ್ಲಿನ ಮೋಂಕಾರಪ್ಪನು ಪತ್ತಿಕೊಂಡ ಸಮೀಪದ ಕರಿಯೇಮಲ ದರಣ್ಯೇವ ಗುಪ್ತಜಾಗದಲ್ಲಿ ಕೂಕಂಡು ಕುಂಪಣಿ ಸರಕಾರದ ಕರಾಮತ್ತಿನ ಬಗ್ಗೆ ಚರೆ ಮಾಡುತ್ತಿರುವಾಗ್ಗೆ ಕೇಳಲೂ ಬಾರದ, ಹೇಳಲೂ ಬಾರದ ಸಂಗತಿಗಳನ್ನು ತಮ್ಮ ತಮ್ಮ ಕಾಲುಗಳಿಗೆ ಕಟ್ಟಿಕೊಂಡಿದ್ದ ಪಾರಿವಾಳಗಳು ಕುಂತಳ ಸೀಮೆಯ ವಳಿತದ ರಾಯದುಗ್ಗದಿಂದ ಚಿತ್ರಕಲ್ಲುದುರದ ಕಡೆಗೂ, ಜರುಮಲಿಯಿಂದ ಗುಡೇಕೋಟೆ ಕಡೆಗೂ, ಜಮ್ಮೊಬನಳ್ಳಿಯಿಂದ ಸಿಡೇಗಲ್ಲಿನ ಕಡೆಗೂ ಹಾರುತ ಮುಗುಲ ಬಯಲಲ್ಲಿ ಅಂಡಾವರನವಾಗಿರುವಾಗ್ಗೆ.. ಕೋನಾಪದ ಕೋನಪ್ಪ ನಾಯಕನಿಗೂ, ರಾಜಾಪ್ರದ ರಾಜಪ್ಪ ನಾಯಕನಿಗೂ ಬೊಮ್ಮಕ್ಕನ ರಣಬಯಲಲ್ಲಿ ನಡೆದ ಘನ ಘೋರ ಕಾಳಗದಲ್ಲಿ ಹತ್ತೋರಿಲ್ಲದೆ, ಉಳಿಯೋರಿಲ್ಲದೆ ತಮ್ಮ ತಮ್ಮ ಬೆನ್ನು ಡುಬ್ಬಗಳನ್ನು ಹಗುರ ಮಾಡಿಕೊಂಡಿದ್ದ ನೂರಾರು ಕುದುರೆಗಳು ಯರಡು ಮೂರು ಹರದಾರಿ ದೂರವನ್ನು ಕುಂಟುತ್ತ ತೆವುಳುತ್ತ ಕ್ರಮಿಸಿ ದರವುಜಿ ಕೆರೆಯ ನೀರಿಗೆ ಬಾಯಿ ಅಂಟಿಸಿರುವಾಗ್ಗೆ.. ತಮ್ಮ ರಾಜ ನೆಟಕಲ್ಲಪ್ಪ ನಾಯಕನ ವುಪಟಳಕ್ಕೆ ರೋಸಿ ನೂರಾರು ಮಂದಿ ಪ್ರಜೆಗಳು ಹೆಂಡರು ಮಕ್ಕಳನ್ನು ಕಟ್ಟಿಕೊಂಡು, ಸಾಮಾನು ಸರಂಜಾಮುಗಳನ್ನು ಬಂಡಿಗಳಲ್ಲಿ ಯೇರಿಕೊಂಡು ಮದ್ದಿಕೇರಿ ಗ್ರಾಮದಿಂದ