ಪುಟ:ಅರಮನೆ.pdf/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯a ಅರಮನೆ ತಗ್ಗಿಸಿದಳೆಂಬಲ್ಲಿಗೆ ಸಿವ ಸಂಕರ ಮಾದೇವಾss ಅತ್ತ ಕುದುರೆಡವು ಪಟ್ಟಣದೊಳಗ ಕಾಲಿಟೊಡನೆ.. - ಹಂಪಜ್ಜನ ಚಿತ್ತಾರವನ್ನು ಕಣ್ಣೆಳಗ ಮೂಡಿಸಿಕೊಂಡ.. ಆತನ ಬಾಯ ವಾಸಣೆಗಾಗಿ.. ಆತನ ಮಯ್ಯ ಬೆವರ ವಾಸಣೆಗಾಗಿ ಕಣ್ಣು ಚಾಚಿ, ಮೂಗು ಚಾಚಿ ಹಂಬಲಿಸಿದ. ಯಾರನ್ನು ಕೇಳುವುದು? ಯಾರನ್ನು ಬಿಡುವುದು? ಸುತ್ತಮುತ್ತ ಕಣ್ಣು ಪಿಳುಕಿಸಿದ. ಯಾರೊಬ್ಬರು ಕಣ್ಣಿಗಾಗಲೀ, ಮಾತಿಗಾಗಲೀ ತಗುಲುತಾಯಿಲ್ಲ. ತಾನ್ಯಾರು? ತಾನೆದಕ ಬಂದಿರುವುದು? ತಾನು ಯಾರನ್ನು ಹುಡುಕುತ್ತಿರುವುದು? ಯಂಬೀ ಮೂರು ಪ್ರಶ್ನೆಗಳನ್ನು ಬಾಯಿ ವಡದು ಹೇಳಬಾರದು ಯಂಬುದು ಕುಲಾಚಾರವುಂಟು.. ಅಲ್ಲದ ಸದರಿ ಪಟ್ಟಣವು ಕಣ್ಣಳತೆ, ಕೂಗಳತೆ ಮೀರಿ ಬೆಳೆದಿರುವುದು? ವಬ್ಬೊಬ್ಬರೂ ವಂದೊಂದು ವುಸಾಬರೀನ ಹೆಗಲಿಗೆ ಹಾಕ್ಕೊಂಡು ತಿರುಗಾಡುತ್ತಿರುವರು.... ಯಾರೊಬ್ಬರಿಗೂ ಪಂಚೇಂದ್ರಿಯಗಳು ಸ್ವಾಧೀನ ಯಿದ್ದಂಗ ಯಿಲ್ಲಲ್ಲಾ... ಯಾರೊಬ್ಬರೂ ತನ್ನ ಕಡೇಕ ಕಣ್ಣೆತ್ತಿ ನೋಡುತ ಯಿಲ್ಲಲ್ಲಾ... ತಾಯಿ ಸಾಂಬವಿ ಹೊಳೆಗೆ ಹೊಂಟು ಬಂದಳೋ ಹೆಂಗೆ? ಪರಿಶ ಮೂಡುತಾ ಅಯ್ಕೆ.. ಮುಳುಗುತಾ ಅಯ್ಕೆ. ಫಲಾನ ಯಿಂಥೆಂಬೊ ದಿವಸಕ್ಕೆ ಕುದುರೆಡವನ್ನು ಸೇರಬೇಕು ಯಂದು ಖಬರನ್ನು ಯಾಕೆ ಕಳುವಬೇಕಿತ್ತೀ ಹಂಪಜ್ಞನು? ತಾನೇನು ಬರುವೆನೆಂದಿದ್ದೆನಾ? ಬಿಡುವೆನೆಂದಿದ್ದೆನಾ? ತನಗೇನು ಮೂರೊಳಗ ವದಕನ ಮಸ್ತು ಯಿರಲಿಲ್ಲವಾ? ಅನಾದಿತನದಿಂದಾಗಿ ತಾನು ಚಾಜ ಕೇಳುವವನೇ? ಹೇಳಿ ಕಳುವಿದವರ ಮ್ಯಾಲಿನ ಗವುರವ, ನಂಬುಕೆಯಿಂದಾಗಿ ಬರೀ ಬಾಯಿ ಮಾತನ್ನೇ ಚಾಜ ಯಂದು ಪರಿಭಾವಿಸಿದ್ದು ತನ್ನದು ತಪ್ಪಾ.. ಯಂದು ಮುಂತಾಗಿ ಸದರಿ ಆಗಂತುಕನು ಯೋಚನೆ ಮಾಡುತ್ತ ಹೋಗುತಿರಬೇಕಾದರ... ಧರುಮಛತ್ತರವೊಂದು ಕಣ್ಣಿಗೆ ಅಟೆಯಿತು.. ಅದು ತಿರುಪಾಲಯ್ಯ ಪ್ರೇಷಿ «ಯು ಪಾಪ ಪರಿಹಾರಾರವಾಗಿ ನಡೆಸುತಲಿದ್ದ ಅನ್ನದಾನ ಛತ್ತರ ಅದಾಗಿತ್ತು.. ಖುದ್ದ ಸ್ನೇಷಿ«ಯೇ ಅತಿಥಿ ಅಭಾಗತರನ್ನು ಪಿರೀತಿಯಿಂದ ಬರಮಾಡಿಕೊಂಡು ವುಂಬಲಕ ಯಿಡಲು ಸಿದ್ದನಿದ್ದನು.. ನೂರಾರು ಮಂದಿ ಬಡಬಗ್ಗರ ಹೊಟ್ಟೆ ಬಡಿದು ಸಂಪಾದಿಸಿರಬವುದಾದ ಪಾಪಿಷ್ಟಗೇಡಿ ಹಾಕುವ ಕೂಳು ತಿಂದು ನರಕಕ್ಕೆ ಹೋಗುವುದು ಯಾಕಂತ ಯಾರೊಬ್ಬರೂ ಛತ್ತರದೊಳಗೂ ಕಾಲಿಡುತಲಿರಲಿಲ್ಲ. ಆತ ಪ್ರತಿಯೊಬ್ಬ ಹಾದಿಹೋಕನನ್ನು