ಪುಟ:ಅರಮನೆ.pdf/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ತರುಬಿ ವುಣ್ಣುವಂತೆ ದಯನಾಸದಿಂದ ಕೇಳಿಕೊಳ್ಳುತಲಿದ್ದನು. ಕೆಲವರು ಪರಪಾಟಿನಿಂದಾಗಿ ವುಂಡು ಅನ್ನದಾತ ಸುಖೀ ಭವ ಯಂದು ಹಾರಯಿಸಿ ತದನಂತರ ವಸ್ತುಸಂಗತಿ ತಿಳಿದು ಅಯ್ಯಯ್ಯೋ ಯಂಥ ಕೆಲಸ ಮಾಡಿದೆವಲ್ಲಾ ಯಂದು ಪಶ್ಚಾತ್ತಾಪ ಪಡುತಲಿದ್ದರು. ಕೆಲವರು 'ಯಲಮೋ ಸ್ನೇಷಿ« ನಿನ್ನ ಪಾಪಿಷ«ಗೇಡಿ ಕೂಳನ್ನುಣ್ಣಲು ಬಡಿಸಿ ನಮ್ಮನ್ನು ರವುರವ ನರಕಕ್ಕೆ ಪಾತ್ರಮಾಡಿದೆಯಲ್ಲಾ.. ಸಾಂಬವಿ ನಿನ್ನನ್ನು ಕ್ಷಮಿಸುವುದಿಲ್ಲ” ಯಂದು ಹಿಡಿಹಿಡಿ ಸಾಪ ಹಾಕುತಲಿದ್ದರು. ಹಿಂಗಾಗಿ ಸದರಿ ಧರುಮವೃತ್ತರವು ಬಿಕೋ ಗುಟ್ಟುತಲಿತ್ತು.... ತಾನು ಯನ್ನು ಮುಂದ ಅನುಭವಿಸಲಿರುವುದು ಯಿನ್ನೆಷ್ಟಿರುವುದೋ? ವಾಡಿಟ್ಟಿರುವ ಅನ್ನ ಖರು ಚಾಗದ ಹೊರತು ತನ್ನ ಪಾಪ ಪರಿಹಾರವಾಗುವುದಿಲ್ಲ.. ಕುಲಧರುಮಕ್ಕನುಸಾರವಾಗಿ ತಾನು ಹಣ ಸಂಪಾದನೆ ಮಾಡಿರುವನೇ ಹೊರತು... ಚಿಂತೆ ಮಾಡುತ ಮನಸನ್ನು ನರಕಲೋಕಕ್ಕೆ ಹರಿಬಿಟ್ಟು ಮಯ್ಯನಮರತು ಕೂಕಂಡಿದ್ದ ತಿರುಪಾಲಯ್ಯ ಸ್ನೇಷಿ«ಗೆ ಪರಪರ ಯಂಬ ಸಬುಧ ಆಶಾದಾಯಕವಾಗಿ ಕೇಳಿಸಿತು. ಬೆಚ್ಚಿ ಬಿದ್ದು ತಲೆಯೆತ್ತಿ ನೋಡಿದ. ಹೊಟ್ಟೆಯನ್ನು ಕೆರಕೊಳ್ಳುತಲಿರುವುದು ಯತ್ತರವೂಅಲ್ಲದ, ಗಿಡ್ಡಮಅಲ್ಲದ ಮಟ್ಟದ ನಿಲುವಿನ ಯ್ಯಕ್ತಿಯು ನಂಯಮಿಷಾರಣ್ಯವನ್ನು ಹೊಕ್ಕು ವುಂಬಲಕ ಯಿಡು ಅಂತ ದ್ರವುಪದಿಯನ್ನು ಪೀಡಿಸಿದ ದೂರುವಾಸಮುನಿಯನ್ನೇ ಆಗಂತುಕನು ಹೋಲುತ್ತಿರುವನು. ಸದರಿ ಗ್ರಾಮದೊಳಗ ಯಾರಾರ ಸರೀರದೊಳಗ ವಸ್ತಿ ಮಾಡಿರುವರೋ ಮೊಹಿಸಲಸದಳ.. ಸ್ನೇಷಿ«ಯು ದಿಗ್ಗನ ಯೆದ್ದು “ಬಾರಣ್ಣಾ... ಬಾ ತಂದೆಯೇ..” ಯಂದು ಸ್ವಾಗತ ಪಲುಕಿದನು. ಕಾಲು ಕಯ ತೊಳಕೊಳ್ಳಲಕ ನೀರು ಕೊಟ್ಟನು. ನೀರಿನ ಅಭಾವ ಕಾರಣದಿಂದಾಗಿ ತನ್ನ ಮಗಳು ಗೋಯಿಂದಿಯು ಕುಂಡೀನ ತೊಳಕೊಂಡಯ್ಯೋ ಯಿಲ್ಲಮೋ? ಯಂದು ಸಾಂಪ್ರತು ಆಲೋಚನೆ ಮಾಡುತ ಆಗಂತುಕನು ಧಾರಾಳವಾಗಿ ಕಲ್ಕಿ ಕಾಲು ಮಖಮಾರೀನ ತೊಳಕೊಂಡನು.. ಯಿಲ್ಲಿ ಕುಂತುಕೊಳ್ಳಪ್ಪಾ ತಂದೆಯೇ ಯಂಬಂತೆ ನೋಡಿದನು.. ಪೋಷಿ«ಯು ತೋರಿಸಿದ ಮಟ್ಟಸವಾದ ಜಾಗದಲ್ಲಿ ಕೂಕಂಡನು.. ಚರಕಲಯ್ಯ ಪತ್ರೋಳಿ ಹಾಕಲು ಗುಂಡಾಲಯ್ಯನು ಬಾನ ಪಳದ್ಯಂಗಳನು ಬಡಿಸಿದನು.. ಬೊಗಸಯ್ಯನು ಸಾರು ಸುರುವುತ್ತಲೆ ಪೋಷಿ«ಯು