ಪುಟ:ಅರಮನೆ.pdf/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೨ ಅರಮನೆ “ಸಿವನ್ನಾಮ ಪಾರೊತೀ ಹರ ಹರ ಮಾದೇವss ಜಯ ಸಾಂಬವೀ ಜಯ್” ಯಂದಂದು ಪರಸಾದ ಸ್ವೀಕಾರ ಮಾಡಲಕ ಅನುವು ಮಾಡಿಕೊಟ್ಟನು..... ಆಗಂತುಕನು ವಂದು ತುತ್ತು ಯತ್ತಿಕೊಂಡನೋ ಯಿಲ್ಲವೋ ಅವಯ್ಯನ ಕನ್ನೊಳಗೆ ನೀರಾವರಿ ಮೂಡಿತು. ಯಲ್ಲನೇ ತುತ್ತು ಯತ್ತಿಕೊಂಡನೋ ಯಿಲ್ಲವೋ ಹೆಂಡತಿ ಮಕ್ಕಳ ಪರಿಸೆಯು ನೆರತು ಪುಳಕ್ಕು ಪುಳಕ್ಕು ಅಂತ ವಂದರ ಹಿಂದ ವಂದರಂತೆ ಹನಿಗಳು ವುದುರಲಾರಂಭಿಸಿದವು.. ಅವರೆಲ್ಲ ವುಂಡಿರುವರೋ ವುಪಾಸ ಯಿರುವರೋ? ತನ್ನಂಥ ನತದ್ರುಷ್ಟನ ಹೆಂಡತಿಯಾಗಲಕ ಆಕೆ ಯೇನು ಪಾಪ ಮಾಡಿರಬವುದು? ತನ್ನಂಥ ಅಸಾಯಕನ ಹೊಟ್ಟೆಯಿಂದ ವುದುರಲಕ ಮಕ್ಕಳೇನು ಪಾಪ ಮಾಡಿರಬವುದು? ಸಮುಸಾರ ನಿರುವಣೆಗಾಗಿ ತಾನು ಅವಲಂಭಿಸಿರುವ ಕಸುಬು ವಮುಸ ಪಾರಂಪಠ್ಯವಾಗಿ ಬಂದಿರುವಂಥಾದ್ದು.. ಯಾವ ಛಣ ಮುಂಡದಿಂದ ರುಂಡವು ಬೇರುಪಡುವುದೆ? ತನ್ನ ಬದುಕೆ ಪಯಿತ್ರ ಸಾವಿಗೆ ಸಂಬಂಧಿಸಿರುವಂಥಾದ್ದು.. ವಂದೆಲ್ಲು ಮೂರು ದಿವಸಗಳ ಮಟ್ಟಿಗೆ ತನ್ನ ಬದುಕು ಪರಮ ಸುಖ.. ತನ್ನ ಸಾಮ್ರಪರಮ ಸುಖ.. ಯೀರ ಸೊರಗವಂತೂ ತನ್ನನ್ನು ನೆರಳಿನಂತೆ ಹಿಂಬಾಲಿಸುತ್ತಿರುವುದಂತೂ ಖರೇವು.. ಯೀಗ ಸದ್ಯಕ ತಾನು ಬದುಕಿರುವುದೇ ದೊಡ್ಡ ಮಾತು... ಯಲ್ಲಾನು ತಾಯಿ ಸಾಂಬವಿಂಯ ದಯೆಯು ..... ವಂದೊಂದು ತುತ್ತು ಸಿವನ ಧನುಸಿಗಿಂತ ವರಿ ಅನಿಸಿತು.. ಆತ ವುಣ್ಣದಿರುವುದನ್ನು ಕಂಡು ಆತ ಕಣ್ಣೂಳಗ ದುಕ್ಕ ಹೆಡೆಬಿಚ್ಚಿರುವುದನ್ನು ಕಂಡು ಸ್ನೇಷಿ«ಯು “ಯಾಕ ಯಸನ ಮಾಡುತ್ತಿರುವಿ ತಂದೇ.. ವುಂಬಲಕ ಯಾಕ ಹಿಂದೇಟು ಹಾಕುತ್ತಿರುವಿಯಪ್ಪಾ.. ವುಂಬಪ್ಪಾ. ವುಂಬು.. ವುಂಡು ಪುಣ್ಯಕಟ್ಟಿಕೋ” ಯಂದು ಪರಿಪರಿಯಿಂದ ಕೇಳಿಕೊಂಡನು. ತನ್ನ ಮನದೊಳಗಿನ ಕಾರುಪಣ್ಯವನ್ನು ಹಂಗಾತಂಗೆ ಬಿಡಿಸಿ ಹೇಳುವುದು? ವುಂಬಲೇಬೇಕಯ್ಕೆ.. ಅವ್ವಾ.. ತಾಯಿ.. ನಾವೆಲ್ಲ ನಿನ್ನೊಕ್ಕಲು ಮಂದಿ ಅದೇವಿ... ಯೀ ಘಟಗಳು ಯಾವ ಛಣದಲ್ಲಿ ನಿನ್ನ ಪಾದದ ಬುಡಕ್ಕೆ ಕಡಕ್ಕೊಂಡು ಬೀಳುವಮೋ.. ಯಿರೋ ನಾಕೇ ನಾಕು ಘಳಿಗೆ ಕಾಲ ನನ್ನೆಂಡರು ಮಕ್ಕಳನ್ನು ವುಪಾಸಗೊಲ್ಲಬ್ಯಾಡ ತಾಯೀ.. ಯಂದು ಮನದಾಗ ಅಂದುಕೊಳ್ಳುತ ಯಿನ್ನೊಂದು ತುತ್ತನ್ನು ಬಾಯೊಳಗ ಯಿಟ್ಟುಕೊಂಡನೋ ಯಿಲ್ಲವೋ.. ಅತ್ತ