ಪುಟ:ಅರಮನೆ.pdf/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೪ ಅರಮನೆ ಯಿನಿಮಯ ಮಾಡಿಕೊಂಡರು. ವಬ್ಬರನ್ನೊಬ್ಬರು ಮನಸೋಯಿಚ್ಛೆ ನೋಡಿ ಕೊಂಡರು. ತಾಯಿ ಸಾಂಬವಿ ವಸ್ತಿ ಮಾಡಿದ್ದಂಥ ಗುಡಿ ಹಿ೦ದಲ ಮೂಳೆ ಮೋಬಯ್ಯನ ಸರೀರಕ್ಕೆ ಭಕುತಿದೂರುವಕವಾಗಿ ಸಣುಮಾಡಿದ ದ್ಯಾಮಯ್ಯನಿಗೆ ಹಂಪಜ್ಜನು “ಯೇನಯ್ಯಾ, ನಿನ್ನೊಸ್ತಿಯನ್ನು ಅರಮನೇಲಿ ಮಾಡಬೇಕೋ, ಗುರುಮನೇಲಿ ಮಾಡಬೇಕೋ” ಯಂದು ಕೇಳಿದ್ದಕ್ಕವಯ್ಯನು “ಅರಮನೆ ಆಚ್ಚೇ ಕಡೇಕಿರಲಾ .. ಗುರುವನೆ ಯಿಚ್ಛೇ ಕಡೇಕಿರಲಯ್ಯಾ.. ನಂಗೆ ಯಾದಾದರೊಂದು ಅವನ ಮರದ ಬುಡದಲ್ಲಿ ವಸ್ತಿ ಯೇರುಪಾಡು ಮಾಡಿದರ ಸಾಕು' ಯಂದು ಬಿನ್ನಪ ಮಾಡಿಕೊಂಡನು. ಆ ಜವಾಬಿನಿಂದ ಸಂತುಷ್ಟಗೊಂಡ ಪೂರುವಿಕನು ಭೂತಬಿಲ್ಲೆ ಅಂದರ ನೀನೆ.. ನೀನಂದರ ಭೂತಬಿಲ್ಲೆ ಕಣಯ್ಯಾ...” ಯಂದಂದನು. ಮುಂದಕ ಭೂತಬಿಲ್ಲೆ ದ್ಯಾಮಯ್ಯನ ವಸ್ತಿ ಯಲ್ಲಾತೆಂದರೆ ಗುಡಿ ಹಿಂದಲ ಮೂಳೆ ಮೋಬಯ್ಯನ ದೂರುವಾಗ್ತಮ ಯಿತ್ತಲ್ಲ.. ಅದರ ಯದುರಿಗೆ ಯಿಸಾಲವಾದ ಬೇಯಿನ ಮರ ಯಿತ್ತಲ್ಲ.. ಅಲ್ಲೇ ಜಗಲೂರೆವ್ವ ಹೈಪಡಿ ಕಟ್ಟಿಕೊಂಡು ವಾಸಮಾಡುತಲಿದ್ದಳಲ್ಲ... ಸಿವಸರಣೆ ಚೆನ್ನವ್ವ ಧರುಮದೇವತೆ ಯಂದಿರು ನಾಯಿ ರೂಪ ತಾಳಿ ಆಕೆಗೆ ಕಾವಲಿದ್ದರಲ್ಲ.. ಅಲ್ಲಿ. ಅಲ್ಲಿ ಅಂದರ ಅಲ್ಲೇಯಾ .... ಮರು ದಿವಸವೇ ಜಾಟಗೆರೆಯಿಂದ ಹೆಂಡರು, ಮಕ್ಕಳು ಬಂದು ಸೇರಿಕೊಂಡರು.. ದ್ಯಾಮಯ್ಯನ ಸಮಸ್ತ ಕುಟುಂಬವು ಜಗಲೂರವ್ವಗೆ “ಯಮೋsss.. ಯಮೋss...” ಯಂದನಕಂತ ಹೊಂದಿಕೊಂಡಿತು.. ಬೇಯಿನ ಮರದ ಹತ್ತಾರು ಕಡೇಕ ತೊಟ್ಟಿಲು ಜವ್ವಾಲೆಗಳು ಉಳಿಬಿದ್ದವು.. ದ್ಯಾಮಯ್ಯನ ಮಕ್ಕಳದು ಯೇನು ಸಿದುಗಾಟ? ಯೇನು ಕಥೆ?.. ಸಿವ ಸಿವಾ.... ಭೂತಬಿಲ್ಲೆ ಪಟ್ಟಯೇರಲಿರುವಾತ ಬಂದವನೆ, ಬೇಯಿನಮರ ಬುಡದಲ್ಲಿ ಸಮುಸಾರ ಸಮೇತ ಬೀಡು ಬಿಟ್ಟವನೆ ಯಂಬ ಸುದ್ದಿ ನಿಧಾನಿಕೀಲಿ ಪಟ್ಟಣದಾದ್ಯಂತ ಹಬ್ಬಿತು... ಭೂತಬಿಲ್ಲೆಯಂಬ ನಾಲಕಕ್ಕರಗಳ ಸಮುಚ್ಚಯವೇ ಅದನುಚ್ಚಾರ ಮಾಡಲಕ ಭಂಗ ತಂದು ಬಿಟ್ಟಿದ್ದೇ ಆ ಯಿಳಂಬಕ ಕಾರಣವಾಗಿತ್ತು.. ಭೂತ ಅಂದರ ಯೇನು? ಬಿಲ್ಲೆ ಅಂದರ ಯೇನು? ಆ ಯರಡು ಸಬುಧಗಳ ನಡುವಿನ ನಂಟಸ್ತನ, ತೆಗಸ್ತನ ಯಂಥಾದ್ದು ಯಂದು ಮುಂತಾಗಿ ತಮಗೆ ತಾವ ಮಾತನಾಡಿಕೊಳ್ಳಲಕ ಹತ್ತಿದ್ದೇ ಆ ಯಿಳಂಬಕ