ಪುಟ:ಅರಮನೆ.pdf/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೬ ಅರಮನೆ ನಮ ನಿಮ್ಮಂಗs ಮನುಶ್ಯನದಾನ ಅಂತ ಕೇಳಿದ್ದಕ್ಕೆ ಯಿವರು ಮೋಬಯ್ಯನೂ ಮನುಶ್ಯನೇ ಯಂದು ಬಿಡುತಲಿದ್ದರು. ಅವರ ಪಯ್ಕೆ ವಬ್ಬಿಬ್ಬರು ತಮಗೂ ದ್ಯಾಮಯ್ಯನೆಂಬಾತನನ್ನು ನೋಡುವಂಗಾಗಯ್ತಿ ಯಂದು ಮುದೇಕಿಯನ್ನು ಪೀಡಿಸದೆ ಯಿರಲಿಲ್ಲ.. ಅರಮನೆ ಯಂಭೋ ಅರಮನೆಯನ್ನು ಭೂತ ಬಿಲ್ಲೆಯು ಸೂಜಿಗಲ್ಲಿನಂತೆ ಸೆಳೆಯುತ್ತಿರಬೇಕಾದ ಪಟ್ಟಣದ ಸರುವೇ ಸಾಮಾನ್ಯ ಮಂದಿ ಹಂಗ ಸುಮಕ ಯಿದ್ದಾರು? - ಅವರೆಲ್ಲರ ಒಳಗೂ ಭೂತಬಿಲ್ಲೆ ಸಂಬಂಧೀ ಕಥನಗಳು ಹುಟ್ಟಿಕೊಂಡು ನೋಡಲಕ ಬರಿ ನೋಡಲಕ ಹೋಗಿರಿ ಯಂದು ಸತಾಯಿಸಲಾರಂಭಿಸಿದ್ದವು.. ನೋಡಿದರ ವುಂಟಾಗುವ ಸಾಧಕಗಳೆಂಥವು? ನೋಡಿದಿದ್ದರ ವುಂಟಾಗುವ ಬಾದಕಗಳಂಥವು? ದ್ಯಾಮಯ್ಯನೆಂಬಾತ ಪಟ್ಟಣವನ್ನು ಪ್ರವೇಶ ಮಾಡಿದ ಹೊತ್ತಿನ ಫಲಾಫಲಗಳೇನು? ದಿಕ್ಕಿನ ಫಲಾಫಲಗಳೇನು? ವುಂಡ ಧರುಮ ಛತ್ತರದ ಫಲಾಫಲಗಳೇನು? ಧರುಮ ಛತ್ತರದ ವಡೆಯನಾದ ವಂಟಿಗಣ್ಣಿನ ತಿರುಪಾಲಯ್ಯ ಸ್ನೇಷಿಯಂತೂ ಆ ಆಗಂತುಕನ ಗುಣಲಕ್ಷಣ ಸೊಭಾವಗಳನ್ನು ವಂದೊಂದು ನೆನಪು ಮಾಡಿಕೊಳ್ಳುತ್ತ ಅಡಲ್ಲಾಗಿಬಿಟ್ಟಿದ್ದನು. ತನ್ನನ್ನು ಅಟಕಾಯಿಸಿ ಕೇಳುತಲಿದ್ದ ಮಂದಿಗೆ ಅವಯ್ಯ ಬಂದಾಗ ವಂದು ನಮೂನಿ ಯಿದ್ದನರಪಾ.. ಎಂದು ನಮೂನಿ ಯಸನ ಮಾಡಿದನರಪ್ಪಾ.. ಅವಯ್ಯನ ಕಣ್ಣಿಂದ ವುದುರಿದ ಮದೊಂದು ಹನಿಯು ವಂದೊಂದು ಗುಂಡುಕಲ್ಲುಗಳಾಗಿ ಮಾರುಪಟ್ಟಿದವರಪಾ... ಹದಿನದ್ದು ಯಿಪ್ಪತ್ತು ಮಂದಿ ವುಣ್ಣುವುದನು ತಾನೊಬ್ಬನೆ ವುಂಡುಬಿಟ್ಟನರಪಾ.. ಬೇಕಾದರ ಬಾನ ಬಡಿಸಿದ ಚರಕಲಯ್ಯನನ್ನು ಕೇಳಿರಪಾ.. ಬೇಕಾದರ ಸಾರು ಬಡಿಸಿದ ಗುಂಡಾಲಯ್ಯನನ್ನು ಕೇಳಿರಪಾ.. ಯಂದು ಬೊಟ್ಟು ಮಾಡಿ ತೋರಿಸುತಲಿದ್ದನು.. ಪ್ರೇಷಿ «ರ ಯಿವರಣೆ ಯಿಂದ ಮತ್ತೊಟು ತತ್ತರಿಸಲಾರಂಭಿಸಿದ ಮಂದಿ ಸದರಿ ಪಟ್ಟಣದಲ್ಲಿ ದ್ವಾಪರ ಕಾಲದಿಂದ ವಾಸಿಸುತಲಿದ್ದ ಮುಪ್ಪಾನು ಮುದೇರನ್ನು ಅಟಕಾಯಿಸಲೆಂದು ಬೆದಕಾಡಲಾರಂಭಿದ್ದು ಯೀ ಬಿಳಂಬಕ್ಕೆ ಕಾರಣವಾಗಿತ್ತು.. ಮುಗೇರ ಮುದೇರು ಯಾರಿದ್ದರ ಪಾ ಅ೦ದರ ಕವಣೆ ಗಲ್ಲಿನ ಮನತನದ ಸಮುಸ್ಥಾಪನಾಚಾರಿಣಿಯಾಗಿರುವಂಥ ಬಟಾ ಬಯಲವ್ವ ಯಂಬ ಮುದುಕಿಯು, ಅದು ತನ್ನ ಗಿರಿಮೊಮ್ಮಗ ಕಾಳಗಯ್ಯನಿಂದ ಜಾಬು ಯವತ್ತು ಬಂದೀತು? ನಾಳೆ ಬಂದೀತು? ಯಂಬ ನಿರೀಕ್ಷೆಯಲ್ಲಿತ್ತು. ಅದು ಕೇಳಲಕ ಬಂದವರ