ಪುಟ:ಅರಮನೆ.pdf/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೮ ಅರಮನೆ ಮೊದಲಾದ ಪ್ರಶ್ನೆಗಳನ್ನು ತನ್ನೊಳಗೆ ಸ್ರುಷಿ«ಸಿಕೊಂಡು ನರಳುತಲಿದ್ದನು.. ವಂದೊಂದು ಬಾರಿ ತಾನು ರೂಪಿಸಿರುವ ಸಂಚು ಯಿಫಲವಾಗಲಿ ಯಂದುಕೊಳ್ಳುತಲೂ.. ಮರುಗಳಿಗೆ ಸಂಚು ಸಫಲವಾಗಲಿ ಯಂದುಕೊಳ್ಳುತಲೂ ಅಸಂದಿಗ್ಧತೆಯಿಂದ ಕಂಪಿಸುತಲಿದ್ದನು. ನಾಗಿರೆಡ್ಡಿಯನ್ನು ಬಂಧಿಸಿದಲ್ಲಿ ಅದು ತನ್ನ ಸೋಲು.. ಆತನ ಬಂಧನ ಯಿಫಲಗೊಂಡಲ್ಲಿ ಅದು ತನ್ನ ಗೆಲವು.. ಓss ದೇವರೇ... ನಾಗಿರೆಡ್ಡಿಯು ಸಾಯುವ ಪಠ್ಯಂತರ ಅಜೇಯನಾಗೇ ವುಳಿಯಿಲಿ.. ಯಾವ ಕಾರಣಕ್ಕೂ ಆತನು ಸರಕಾರದ ಸಿಪಾಯಿಗಳಿಗೆ ದೊರಕದಿರಲಿ.. ಆತನು ಆ ಪ್ರಾಂತದಿಂದ ಬಹುದೂರ ಹೊರಟು ಹೋಗಿ ನೆಮ್ಮದಿಯಿಂದ ಬಾಳುವಂತಾಗಲಿ.. ಯಂಬ ವಂದೊಂದು ಮಾತು ಹೇಳುವಾಗಲೂ... ಸಮವಸ್ತ್ರಗಳನ್ನು ವಂದೊಂದಾಗಿ ಸರೀರದಿಂದ ಕಳಚಿ ನಗಂದಿಗೆ ತೂಗುಬಿಟ್ಟನು. ಕೊನೆಯ ಮಾತನ್ನು ಯೋಚಿಸಿದ್ದು ತಾನು ದೋತರ ಜುಬ್ಬ ಧರಿಸಿ ತಲೆಮಾಲ ರುಮಾಲು ಸುತ್ತಿಕೊಂಡ ನಂತರವೇ.. ತಾನೀಗ ರೆಡ್ಡಿಗಳ ಪಯ್ಕೆ ರೆಡ್ಡಿಯು.. ಆ ಸಂಚಿನ ಜಯಾಪಜಯಗಳು ನಿಖರವಾಗಿ ತಿಳಿಯುವವರೆಗೆ ತಾನು ಖಂಡಿತ ರೆಡ್ಡಿಯೇ, ರೆಡ್ಡಿಗಳಂತೆಯೇ ತಾನು ಅಭಿನಯಿಸಬೇಕು.. ರೆಡ್ಡಿಗಳ ಯಿಸುವಾಸ ಸಂಪಾದಿಸಬೇಕು.. ಅತುಲ ಮಾನವ ಪ್ರೇಮಿಯಾದ ಮನೋ ಸಾಹೇಬನು ಯಂದೆಂದೂ ಕೀಳುಮಟ್ಟದ ಸಂಚುಗಳನ್ನು ರೂಪಿಸಿರಲಾರನು, ಆಲೋಚಿಸಿರಲಾರನು ಯಂದು ಪ್ರತಿಯೊಬ್ಬರು ತನ್ನ ಕುರಿತು ಮಾತಾಡಿಕೊಳ್ಳುವಂತಾಗಬೇಕು.. ಹಿಂಗss ಯೋಚನೆ ಮಾಡ್ತ ತನ್ನನ್ನು ಕಾಣಲು ಬಂದ ಆ ರೆಡ್ಡಿ, ಯೀ ರೆಡ್ಡಿ, ಯಾವ್ಯಾಮೋ ರೆಡ್ಡಿಗಳನ್ನು ಓಹೋ... ರೆಡ್ಡಿಗಾರು, ಹಾ ಹಾ... ರೆಡ್ಡಿಗಾರು ಯಂದನಕಂತ ಆಲಿಂಗನ ಮಾಡಿಕೊಳ್ಳುತಲಿದ್ದುದೇನು? ವಭಯ ಕುಸಿ ಪರಿ ಯಿಚಾರಿಸುತಲಿದ್ದುದೇನು..? ವಾಗ್ದಾನ ಮಾಡುತಲಿದ್ದುದೇನು? ಜಾವ ಜಾವ ಕೊವ್ವೆ ಮುಖದ ಬೆವರನ್ನು ಕರವ ಸ್ತರದಿಂದ ವರಸಿಕೊಳ್ಳುತಲಿದ್ದುದೇನು ಸಿವ ಸಿವಾ....... ಅತ್ತ ಯೀ ಸುದ್ದಿಯನ್ನು ಗುಂತಕಲ್ಲು ಪಟ್ಟಣದೊಳಗ ಮಿಷನರಿ ನಿರುವಾಣ ಮಾಡುತಲಿದ್ದ ಮುನುಸೋಬಯ್ಯನೇ ನಂಬಲಿಲ್ಲ.. ಸದರಿ ಸುದ್ದಿಯನ್ನು ಖಾತರಿ ಮಾಡಿಕೊಳ್ಳಲಕೋ, ಹರಿದು ಹಂಚಿಕೊಳ್ಳಲಕೋ.. ಹತ್ತಾರು ಮಂದಿ ಮಿಷನರಿಗೆ ಬರೋದು ಹೋಗೋದು ಮಾಡುತಲಿದ್ದರು...