ಪುಟ:ಅರಮನೆ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಜೊನ್ನಗಿರಿ ಪ್ರಾಂತದ ಕಡೇಕ ಗುಳೇ ಹೊಂಟಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದ ಅರಮನೇಲಿ ರಾಜಮಾತೆ ಭಮ್ರಮಾಂಬೆಯು ತನ್ನ ಸವತಿ ಮಗ ಕಾಟಯ್ಯ ನಾಯಕನೊಂದಿಗೆ ವಂದು ಕಾಸಿನ ಸರದ ಯಿಷಯದಲ್ಲಿ ಜಗಳವಾಡುತಲಿದ್ದಳು. ತಿರುಪಾಲಯ್ಯ ಶ್ರೇಷಿ«ಯು ತನ್ನ ಮನೆಯ ನೆಲಮಾಳಿಗೆಯೊಳಗೆ ತಾನೊಬ್ಬನೆ ಕೂತುಕೊಂಡು ರಾಣಿ ರೂಪಾಯಿಗಳನ್ನು ಯಣಿಕೆ ಮಾಡುತಲಿದ್ದನು. ಪ್ರಸಿದ್ದ ದೂರುವಿಕರ ವಂಶಸ್ಥನೂ, ಸರಸೂತಿ ದೇವಿಯ ವರಪುತ್ರನೂ ಆಗಿದ್ದಂಥ ಭಟ್ರಾಜು ರಾಮರಾಜುವು ಚುಟುಚುಟು ಗುಟ್ಟುತಲಿದ್ದ ಹೊಗಳಿಕೆಯ ಮಾತುಗಳನ್ನು ತನ್ನ ಗೇಣುದ್ದದ ನಾಲಿಗೆ ಮ್ಯಾಲಿಂದ ಯಕ್ಕಿ ತೆಗೆದು ತಾಳೆಯೋಲೆಯ ಮ್ಯಾಲೆ ಕಟೆದಿಡುತ ಹೊಗಳಿಕೆ, ತೆಗಳಿಕೆಗೆ ಸಂಬಂಧಿಸಿದ ನಿಘಂಟೊಂದನ್ನು ರಚನೆ ಮಾಡುತಲಿದ್ದನು. ಮ್ಯಾಗಳಗೇರಿಯಲ್ಲಿ ವಂದು ಕಸಬಾರಿಗೆ ಯಿಷಯದಲ್ಲಿ ಆಮಾತ್ಯ ಗವುಡಿಕೆ ಸಣಸಿದ್ದಪ್ಪನ ಚತುರ ಪತ್ನಿಯಾದ ಗವುರವನ್ನೂ, ಸೇನಾಧಿಪತಿ ಗೋಯಿಂದಪ್ಪನ ಪಂಚಮ ಪತ್ನಿಯಾದ ಯಂಕಮ್ಮನೂ ತಾಸೊತ್ತಿನಿಂದ ಜಗಳಾಡೀ ಆಡೀ ದಣದು ಅದೇ ಯಿನ್ನು ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡು ವಟವಟಗುಟ್ಟುತ ಧಮಾರಿಸಿಕೊಳ್ಳುತಲಿದ್ದರು.. ರಣಬಯಲಲ್ಲಿದ್ದ ಹವಾ ಮಹಲೊಳಗೆ ಗೊಂಜಾಡಲರ ಡವಯ್ಯನೂ, ಮ್ಯಾಲಗಿರಿ ತಿಮ್ಮನೂ, ಕಜ್ಜುವೀರಯ್ಯನೂ, ಸಂಧಿಯಿಗ್ರಹಿ ರಾಮಪ್ಪ ಸ್ವಾಮಿಯೂ ತಮ್ಮ ಮುಂದೆ ಚದುರಂಗದ ಪರಿಕರವನ್ನು ಯಿಟ್ಟುಕೊಂಡು ರಾಜಪರಿವಾರದ ಹುದ್ದರಿಗಳಿಗಾಗಿ ಕಾಯುತಲಿದ್ದರು. ದಿನತುಂಬಿದ ಬಸುರೇರು ನೋವು ತಿಂಬುತಲಿದ್ದರು... ನೀರು ತರೋರು ಹೊನ್ನಮ್ಮನ ಹಳ್ಳದಿಂದ ನೀರು ತರುತಲಿದ್ದರು.. ಹೊಲದ ಬದುಕಿಗೆ ಹೋಗೋರು ತಮ್ಮ ತಮ್ಮ ಹೊಲಗಳ ಕಡೀಕೆ ಹೊಂಟಿದ್ದರು.. ನೆಲ ಸಾರಿಸೋರು ನೆಲ ಸಾರಿಸುತಲಿದ್ದರು.. ಕಸ ಗುಡಿಸೋರು ಕಸ ಗುಡಿಸುತಲಿದ್ದರು.. ಹಲ್ಲಿದ್ದೋರು ಹುರಗಡ್ಡಿ ಜಮಡುತಲಿದ್ದರು.. ಹಲ್ಲಿಲ್ಲದೋರು ಜಮೈಕಡ್ಡಿ ನಮಲುತಲಿದ್ದರು. ತಮ್ಮ ತಮ್ಮ ಹೊಟ್ಟೆ ಪ್ರದೇಶವ ಕೆರಕೋತ ಸಿಪಾಯಿಗಳು ಅಲ್ಲೊಬ್ಬರು, ಯಿಲ್ಲೊಬ್ಬರಂತೆ ಗಸ್ತು ತಿರುಗತಲಿದ್ದರು. ಕುದುರೆಡವು ಪಟ್ಟಣದ ವರಮಾನವನ್ನು ವಂದೇ ಮಾತಲ್ಲಿ ಹೇಳಲಕಂದರೆ ಆರು ಮೂರರ ನಡುವೆ ಮಿಸುಕಾಡುತಲಿತ್ತು. ವಂದು ಯೇರಿಕೆ ಯಂಬುದಿರಲಿಲ್ಲ, ಎಂದು ಯಿಳಿಕೆ ಯಂಬುದಿರಲಿಲ್ಲ, ನಿನ್ನೆ ಯಂಬುದಿರಲಿಲ್ಲ, ಯಿಂದು ಯಂಬುದಿರಲಿಲ್ಲ, ನಾಳೆ ನಂಬು ದಿರಲಿಲ್ಲ. ವಾಲಿದೋರು ಕೆಳ ಗಿಸ್ಕೋರನು