ಪುಟ:ಅರಮನೆ.pdf/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಯೀ ಕುತ್ಯ ಕುಂಪಣಿ ಸರಕಾರದ ಘನತೆಗೆ ತಕ್ಕುದಾ ಯಂದು ಕೇಳುವಾಗ್ಗೆ 'ನಿಮ್ಮ ಯಂಬ ಸಬುಧವನ್ನು ಹಚ್ಚುವುದನ್ನು ಮಾತ್ರಮರೆಯುತಲಿರಲಿಲ್ಲ. ಅದೇ ಯಿನ್ನು ಸಂತ ಪದವಿಗೆ ಅನತಿ ದೂರದಲ್ಲಿದ್ದ ಮುನುಸೋಬಯ್ಯನು ತಾನೀಗ ಕುಂಪಣಿ ಸರಕಾರದ ಮಳಿಗದವನು ಅಲ್ಲ ಯಂದೂ.. ನಿಮ್ಮೆಲ್ಲರ ಪಯ್ಕೆ ವಬ್ಬನೆಂದೂ ಮನವರಿಕೆ ಮಾಡಲು ಪ್ರಯತ್ನ ಮಾಡುತಲಿದ್ದನು.. ಅವರೆಲ್ಲರ ಸಮಕ್ಷಮ ಜೀಸಸು ದೇವರ ಮುಂದೆ ಮುಂಬತ್ತಿ ಬೆಳಗಿಸಿ 'ದೇವರೇ ಯೀ ಸುದ್ದಿ ಸುಳ್ಳಾಗಲಿ' ಯಂದು ಮಂದ್ರಸ್ಥಾಯಿಯಲ್ಲಿ ಬೇಡಿಕೊಳ್ಳುತಲಿದ್ದನು. ನೇಮಕಲ್ಲು ಹನುಮಣ್ಣ ಭಟ್ಟರೊಂದಿಗೆ ಬಂದ ಚಿಪ್ಪಗಿರಿಯ ಗೆಲುವುರೆಡ್ಡಿಯು “ಸ್ವಾಮೀ ಯೀ ಸುದ್ದಿ ಖರೇವಯ್ಕೆ.” ಯಂದು ಕಣ್ಣಲ್ಲಿ ನೀರು ತಂದುಕೊಳುತ ಹೇಳಿದ ಮ್ಯಾಲ... ಮುನುಸೋಬಯ್ಯನು ನಂಬಿದ್ದು... ಮನ ಬಗ್ಗೆ ತನ್ನೊಳಗಿದ್ದ ಗವುರವಯಂಬ ಸವುಧ ಆ ಕ್ಷಣ ದಡಕ್ಕನ ವಜಾ ಬಿಟ್ಟಿತು.. “ಕುಂಪಣಿ ಸರಕಾರದ ವಂದು ಹುಲ್ಲುಕಡ್ಡಿ ಕುಸಿಯಲಕೂ ಕಲೆಟ್ಟರ ಆಗೈ ಬೇಕು.. ಆತನೇ ಯೀ ಸಂಚಿನ ರೂವಾರಿಯಾಗಿರಲಕಬೇಕು.. ತನ್ನ ಯಿತಿಹಾಸಕಃ ತಾನೇ ಕಪ್ಪು ಮಸಿ ಬಳಕೊಂಡನಲ್ಲಾ.. ಛೇ.. ಛೇ.. ಕುಂಪಣಿ ಸರಕಾರವೇ?' ಯಂದು ಮುನೋಬಯ್ಯನು ಮಮ್ಮಲನ ಮರುಗಿದನು. ಸರಕಾರದ ಯೀ ಕುತ್ಯದಿಂದ ತನ್ನ ಸಂತ ಪದವಿಗೆ ಧಕ್ಕೆ ವದಗುವುದೋ? ತನ್ನ ಮಿಷನರಿ ಕೆಲಸ ಕಾರೈವುಗಳಿಗಿದರಿಂದ ಅಡ್ಡಿ ಆತಂಕಗಳು ಸಂಭವಿಸುವಮೋ? ಮಿಷನರಿ ಕಟ್ಟಡದಿಂದ ಹೊರಗೆ ಕಾಣಿಸಿಕೊಂಡು ನಿರತಿದ್ದ ನೂರಾರು ಮಂದಿಯನ್ನುದ್ದೇಶಿಸಿ 'ಸೋದರರಾ........ ನೀವ್ಯಾರೂ ಘಾಬರಿ ಆಗಬ್ಯಾಡಿರಿ.. ಯೀ ಸುದ್ದಿ ನಿಜ ಯಿರಲಾರದು.. ದೇವರ ವಲುಮೆಗೆ ಪಾತ್ರನಾಗಿರೋ ನಾಗಿರೆಡ್ಡಿ ಮೋಸದಿಂದ ಹಿಡಿಯೋದು ವಂದಾ ಕುಂಪಣಿ ಸರಕಾರದ ತನ್ನ ಕಾಲ ಮ್ಯಾಲ ತಾನಃ ಕಲ್ಲು ಹಾಕಿಕೊಳ್ಳುವುದು ವಂದ........ ಯಿದು ನಿಜ ಆಗಿದ್ದರೆ ನಾನು ನಿಮ್ಮೆಲ್ಲರ ಪರವಾಗಿ ಪ್ರತಿಭಟಿಸಿ ಬಂಧನಕ್ಕೊಳಗಾಗಲಕ ತಯ್ಯಾರದೀನಿ. ಅವಯ್ಯನನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಪ್ರಾಣವನ ಬೇಕಾದರು ಕೊಡುತೇನಿ.. ಧಯರವಾಗಿರಿ.. ತಾಳುಮೆ, ಸಹನೇನs ಕಳಕೋಬ್ಯಾಡಿರಿ” ಯಂದು ಮುಂತಾಗಿ ಮಾತಾಡಿದನು. ಜನ ವಕ್ಕೊರಲಿನಿಂದ ಸರಕಾರಕ್ಕೆ ದಿಕ್ಕಾರ ಕೂಗಿದರು.. ನಾಗಿರೆಡ್ಡಿಗೆ ಜಯಘೋಷ ಹಾಕಿದರೆಂಬಲ್ಲಿಗೆ...