ಪುಟ:ಅರಮನೆ.pdf/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೦ ಅರಮನೆ ಸದರಿ ಗುಂತಕಲ್ಲು ಪ್ರಾಂತವು ಯೀ ಸುದ್ದಿ ತಿಳಿದ ಕ್ಷಣದಿಂದ ಕನಲಿದ ಜೇನುಗೂಡಾಗಿ ಬಿಟ್ಟಿತ್ತು. ಯೀ ಸುದ್ದಿ ತಿಳಿಯುತಲೆ ಅಂಗಮ್ಮೊಳಗಿನ ತುತ್ತು ಮರೆತವರೆಷ್ಟೋ? ಬಾಯೊಳಗಿನ ಬಾನ ಮರೆತವರೆಷ್ಟೋ? ಮೊಲೆಗೆ ಹಾಕ್ಕೊಂಡಿದ್ದ ಕೂಸುಗಳನ್ನು ಮರೆತವರೆಷ್ಟೋ? ಸತ್ತವರೆದುರು ಅಳುವುದನ್ನು ಮರೆತವರೆಷ್ಟೋ? ಸಂತ ಮಿಷಂತಾಸಕ್ತಿಯ ಬೆನ್ನುಮಾಡಿದ ದಂಪತಿಗಳೆಷ್ಟೋ? ಸಹಜ ಕ್ರಿಯೆಗಳನ್ನು ಆರಂಬರಕ್ಕೆ ಬಿಟ್ಟಿದ್ದವರೆಷ್ಟೋ...? ನಂಬುವಲ್ಲದಂಗಾದರು.. ನಂಬದೆ ಯಿರದಂಗಾದರು.. ಹಾಂಯ್ ಭೀಮಲಿಂಗೇಶ್ವರನೇ.. ಯಿದು ನಿಂದು ನ್ಯಾಯವಾ ಯಂದು ಪ್ರಶ್ನಿಸುತ್ತಲೇ.... ಜಾಬಾಲ, ಸಂಗಾಲ, ಚಕ್ರಾಲ, ಉಡುಪನಕಲ್ಲು, ಯಾಡಕಿ, ಹಾವಳಿಗಿ, ಪಾಲ್ಲೂರು ಮುಂತಾದ ಚೂರು ಪಾರು ಗ್ರಾಮಗಳಂತೂ ಕಾದ ಕಾವಲಿ ಮಾಲಿನ ಕೋಳಿ ಮರಿಗಳಂತಾದವು.. ನಿಟ್ಟುಸುರು, ಬಿಸಿವುಸುರುಗಳೆಲ್ಲ ಬಿರುಗಾಳಿ ರೂಪ ಪಡಕೊಂಡು ಅಂಡಲೆಯಲಾರಂಭಿಸಿದವು.. ಯಾರಾರ ಸರೀರದೊಳಗ ಬ್ಯಾಲ್ಯಾರೋ ತೂರಿಕೊಂಡಂಥ ಅನುಭವವಾಗತೊಡಗಿತು.. ನಾಯಿ, ನರಿಗಳು ಮುಗುಲಿಗೆ ಮುಖ ಮಾಡಿ ಮಳಿಡುತಲಿದ್ದುದೋ? ಮಂದಿ ಹರಕೋತ ಹರಕೋತ ಬಂದು ತಲುಪಿದ ಪರಿಣಾಮವಾಗಿ ಗಡೇಕಲ್ಲು ಗ್ರಾಮ ವಟ್ಟರಿಸಿಬಿಟ್ಟಿತು.. ರಥೋತ್ಸವದ ನಿಮಿತ್ತ ತೇರುಗಡ್ಡೆಯನ್ನು ಅದರ ಮೂಲ ಸ್ಥಾವರಿಂದ ಹೊರಗೆ ಹಾಕಿ ವಂದೆಲ್ಲು ದಿನಗಳಷ್ಟೇ ಕಳೆದಿದ್ದವು.. ಗುಡಿಯ ವಳ, ಹೊರ ಮಯ್ಯನ್ನು ತೊಳೆಯುವ, ಬಳಿಯುವ ಕಾರೈವು ನಿಧಾನಕೀಲೆ ಸ್ಥಗಿತಗೊಳ್ಳತೊಡಗಿತ್ತು. ಯುಮೂರು ಸತಮಾನದಿಂದ ನಿರಂತರವಾಗಿ ವುರಿಯುತ್ತ ಬಂದಿದ್ದ ನಂದಾದೀಪವು ನಂದುವ ಸ್ಥಿತಿಗೆ ತಲುಪಿತ್ತು. ತಮ್ಮನ್ನು ಭಾರಿಸುವವರಿಲ್ಲದೆ ದೇವುಳದ ಗಂಟೆ, ಜಾಗಟೆಗಳು ಬಿಕೋ ಗುಟ್ಟತೊಡಗಿದ್ದವು... ಭೀಮಲಿಂಗೇಶ್ವರ ಸ್ವಾಮಿ ಯಿಗ್ರಹದ ಮ್ಯಾಲಿದ್ದ ಪತ್ರೆ ಪುಷ್ಪಗಳು ವಂದೊಂದಾಗಿ ಬಾಡುತ ವುದರಲಾರಂಭಿಸಿದ್ದವು.. ರಥೋತ್ಸವವು ಫಲಾನ ದಿನದಂದು ಸಿವನೇ... ನಾಗಿರೆಡ್ಡಿಯು ಮಡಿವುಡಿಯಿಂದ ಬಂದು ಮಿಣಿ ಹಿಡಿಯದ ಹೊರತು ತೇರು ವಂದು ಮೊಳ ಮುಂದಕ್ಕೆ ವುರುಳುವುದಿಲ್ಲವಲ್ಲ ಸಿವನೇ, ಜಾತುರೆ ನಿಂದುರತಯ್ಕೆ.. ಪರಿಸೆ ನಿಂದುರತಯ್ಕೆ. ಯೇನು ಮಾಡುವುದೀಗ? ಯಲಯ್ ಭೀಮಲಿಂಗೇಶ್ವರ ಸ್ವಾಮಿಯೇ.. ನಿನ್ನ ತೇರನ್ನು ನೀನೇ ಯಳವಂತಿ.. ನಿನ್ನ ನಿಜ ಭಕುತನನ್ನು ನೀನೇ ಕಾಪಾಡಲಾರದಾದೆಯೇನು?.. ಯಂದು ಮಂದಿ