ಪುಟ:ಅರಮನೆ.pdf/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೦೧ ಅಂದಾಡತೊಡಗಿದರು.. ಕುಂಪಣಿ ಸರಕಾರದ ಸಿಪಾಯಿಗಳ ಕಯ್ದ ತಮ್ಮ ನಾಗಿರೆಡ್ಡಿಯು ಹಂಗ ಸಿಕ್ಕಿರಬವುದಾ? ಹಿಂಗ ಸಿಕ್ಕಿರಬವುದಾ? ತಮ್ಮ ಪಯ್ಕೆ ಯಾರಾದರು ಯೀ ಸಂಚೋಳ ಶಾಮೀಲಾಗಿದ್ದಿರಬವುದಾ?.. ಹಿಂಗs ಯೋಚನೆ ಮಾಡಿಕೋತ ತಲಾಕೊಂದೊಂದು ಆಯುಧ ಹಿಡಕೊಂಡಿದ್ದಾಗಲೀ, ಕತ್ತೆ, ಕುದುರೆ, ಬಂಡಿ ಬಡಗೋಲು ಯಿವೇ ಮೊದಲಾದ ವಾಹನಗಳನ್ನು ತಮ್ಮೋಟಕ ತಾವು ಯೇರಿದ್ದು ತಡ ಆಗಲಿಲ್ಲ.. ಬಳ್ಳಾರಿ ಯಂಬ ನಂಗನಾಚಿ ಪಟ್ಟಣದ ಕಡೇಕ ಸಾಲಿಟ್ಟಿದ್ದು ತಡ ಆಗಲಿಲ್ಲ... ತಲುಪಿದ್ದು ತಡ ಆಗಲಿಲ್ಲ.. ಕುಂಪಣಿ ಸರಕಾರದ ಕಟ್ಟಡವನ್ನು ಮುತ್ತಿಗೆ ಹಾಕಿದ್ದು ತಡ ಆಗಲಿಲ್ಲ.. ಯಲವೋ ಕ್ಯಾಂಪಬೆಲ್ಲು... ಯಲಮೋ ಹೆನ್ರಿ... ಯಲಮೋ ಥಾಮಸು ಮತ್ತೋ... ಯಂದು ಕೂಗಿದ್ದು ತಡ ಆಗಲಿಲ್ಲ.. ಸಿಪಾಯಿಗಳು ತಮ್ಮ ತಮ್ಮ ಬಂದೂಕುಗಳನ್ನು ಜನರತ್ತ ತಿರುಗಿಸವರೆ, ಫಿರಂಗಿಗಳು ಅವರತ್ತ ಮುಖ ಮಾಡವೆ, ಸಯಲನ್ನೂ ಸಯಲನ್ನೂ.. ಯಂದು ಕೂಗುತವೆ ಸಿಪಾಯಿ ಮಂದಿ.. ಅಧಿಕಾರಿಗಳು ಕಿಟಕಿ, ಜಾಲಂದರಗಳಲ್ಲಡಗಿ ಯಿಣುಕಿ ನೋಡುತ ವಣಕುತವರೆ.. ಕರದು ಕೇರು ಬಡಸಿಕೊಂಡಂತಾಯಿತಲ್ಲ ತಮ್ಮ ಪರಿಸ್ಥಿತಿ ಯಂದು ವಳಗೊಳಗ ಮರುಗುತವರೆ.. ಹೊರಗಡೆ ಯುದ್ಧ ವಾತಾವರಣ ನಿರುಮಾಣವಾಗಯ್ತಿ.. ನಾಗಿರೆಡ್ಡಿಯ ಸರೀರವೇ ವಂದು ಬವುದೊಡ್ಡ ಸಾಮ್ರಾಜ್ಯವು. ಅದನ್ನು ಮರಳಿ ಪಡೆಯಲ.. ಗೆಲ್ಲಲಕ ಯೀ ಮಂದಿ ಯಾವ ತ್ಯಾಗಕ್ಕೂ ಸಜ್ಜಾಗಿ ಬಂದವರೆ.. ಹರಪನಹಳ್ಳಿಯ ಯಿಮ್ಮಡಿ ಸೋಮಸ್ಕರ ನಾಯಕನ ಚರಾಸ್ತಿ, ಸ್ಥಿರಾಸ್ತಿಗಳನ್ನೆಲ್ಲ ಸರಕಾರದ ಬೊಕ್ಕಸಕ ಸೇರಿಸಿ ಹೆಸರು ಮಾಡಿದ್ದ ಕ್ಯಾಪ್ಟನ್ ರವುಡನು ತಮ್ಮ ಪುಣ್ಯಕ್ಕೆ ಯಿದ್ದನಲ್ಲ.. ಮಂದಿಗೆ ನಾಕು ಮಾತು ನಚ್ಚ ಚೆಪ್ಪುವಂತೆ ಅವನನ್ನು ಕೇಳಿಕೊಂಡರು.. ಮತ್ತು ಭವಂತಿ ಕಡೆಗೆ ಅವನ ಹಿಂದೆ ಹೋದರು.. ಸಪ್ತಲೋಹದ ಫಿರಂಗಿಯ ಸೋದರನಂತಿದ್ದ ಅವನು ಜನರನ್ನುದ್ದೇಶಿಸಿ ನಾಗಿರೆಡ್ಡಿ ಸರಕಾರದ ಗವುರವಾನ್ವಿತ ಅತಿಥಿ ಯಂದೂ, ಅವನು ಕ್ಷೇಮದಿಂದ ಯಿರುವನೆಂದೂ ಹೇಳಿದನು.. ಅದರಿಂದ ಜನಕ ನಂಬುಕೆ ಬರಲಿಲ್ಲ.. ನೋಡಬೇಕು, ಮಾತಾಡಬೇಕು ಯಂದು ಚಂಡಿಹಿಡಿದರು. ತದನಂತರ ಕೇಂದ್ರ ಕಾರಾಗ್ರುಹದತ್ತ ದವುಡಾಯಿಸಿದರು, ಅಲ್ಲಿ ಅದೇ ವುತ್ತರ ಬಂತು, ಕೋಪದ ಭರದಲ್ಲಿ ವಬ್ಬ ಯುವಕನು ಕಯ್ದೆ ತಗುಲಿದ ಸಿಪಾಯಿ ಮ್ಯಾಲ ಮಾರಣಾಂತಿಕ ಹಲ್ಲೆ ನಡೆಸಿದನು. ಅದರಿಂದ ಘಕ್ಷಣ