ಪುಟ:ಅರಮನೆ.pdf/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೨ ಅರಮನೆ ಜರುಗಿತು. ವುಭಯತ್ರಸಾವು ನೋವು ಸಂಭವಿಸಿದವು.. ನಾಗಿರೆಡ್ಡಿಯನ್ನು ನೋಡಬವುದೆಂಬ ಕಾರಣದಿಂದ ಜನರು ತಮ್ಮನ್ನೆಲ್ಲ ಸೆರೆಮನೇಲಿ ಹಾಕುವಂತೆ ಹಠ ಮಾಡಿದರು. ಆದರೆ ಅಧಿಕಾರಿಗಳು ಅದಕ್ಕೆ ಸಮ್ಮತಿಸಲಿಲ್ಲ.. ನಾಗಿರೆಡ್ಡಿಗೆ ಜಯಕಾರ ಹಾಕುತ ಯರಡು ಮೂರು ದಿವಸಗಳ ಕಾಲ ವುಪುವಾಸ, ವನುವಾಸ ಅನುಭೋಸುತ ಅಲ್ಲೇ ಯಿದ್ದರು.. ಯೇಸು ದಿವಸಾಂತ ಅವರು ಅಲ್ಲೇ ಠಿಕಾಣಿ ಯಿರಲಕ ಆದೀತು.. ಭೀಮಲಿಂಗೇಶ್ವರ ಸ್ವಾಮಿ ಮ್ಯಾಲ ಭಾರ ಹಾಕಿ ಅಲ್ಲಿಂದ ಹೊಂಟು ತಮ್ಮ ತಮ್ಮ ಗ್ರಾಮಗಳನ್ನು ಸೇರಿಕೊಂಡರೆಂಬಲ್ಲಿಗೆ ಸಿವಸಂಕರ ಮಾದೇವss.. ಸೆರೆಮನೇಲಿದ್ದ ನಾಗಿರೆಡ್ಡಿಯನ್ನು ಕಲವಡಾನಿಕ ಥಾಮಸು ಮನೋ ಸಾಹೇಬನು ಕಡಪಾದಿಂದ ಬಳ್ಳಾರಿ ಪಟ್ಟಣದ ಕಡೇಕ ಬಯಲೇರಿದ್ದ ನಂಬಲ್ಲಿಗೆ ಸಿವಸಂಕರ ಮಾದೇವ.......... ಅತ್ತ ಹರಪನಹಳ್ಳಿ ಸೀಮೆ ವಳಿತದೊಳಗ ಹೇಳುವವರಿಲ್ಲದ, ಕೇಳುವವರಿಲ್ಲದ ಕಾರಣದಿಂದ ಅಲ್ಲೋಲ ಕಲ್ಲೋಲಗೊಂಡಿದ್ದ ಹತ್ತಾರು ದೇಸ ಯಿದೇಶಗಳಿಗೆ ವಂದು ಗತಿ ಕಾಣಿಸಬೇಕೆಂದು ಕುರುದುಗಡ್ಡೆ ದೇಸಾಯಿ ಭರಮನ ಗವುಡ, ಕುಂಚೂರು ಕೊಟ್ಟರಗವುಡ, ನಾಗತಿಬಸಾಪುರದ ಮೆಳ್ಳೆಕಟ್ಟೆಯ ಮಲ್ಲನಗವುಡರೆಲ್ಲ ಮಾಜಿ ದಿವಾನ ಹಂಪರಸಪ್ಪಯ್ಯನ ನಾಯಕತ್ವದಲ್ಲಿ ನೀಲಗುಂದದಲ್ಲಿ ಶೇಷಾಯುಷ್ಯವನ್ನು ಕಳೆಯುತಲಿದ್ದ ನೀಲಮ್ಮಾಜಿಯನ್ನು ಕಂಡರು. ಯೋಗಕ್ಷೇಮ ಯಿಚಾರಿಸಿದಾದ ಮ್ಯಾಲ “ತಾಯಿ ನೀನು ಯೀ ಪರದೇಸಕ್ಕೆಲ್ಲ ಹಿರೀಕಳದೀಯಾ . ನೀನು ಫಲಾನ ದೂರುಗಳಿಗೆ ವಂದು ದಿಕ್ಕಾಗಬೇಕು” ಯಂದು ಹೇಳಿಕೊಂಡರು. ಅದಕಿದ್ದು ಆಕೆಯು “ಮಕ್ಕಳಾ.. ನಂದು ಪರಿಸ್ಥಿತಿ ನೆಟ್ಟಗಿಲ್ಲರಪ್ಪಾ.. ಯಾರ ಗೊಡವೆಗೆ ಹೋದರ ಪಿಂಚಣೀನ ನಿಲ್ಲಿಸುವುದಾಗಿ ಹ್ಯಾರೀಸು ಸಾಹೇಬ ಹುಕುಮು ಮಾಡ್ಯಾನ.. ಪಿಂಚಣಿ ಕಳಕೊಂಡು ಹ್ಯಾಂಗ ಬದುಕೋದು.. ಅದೂ ಅಲ್ಲದ ಬದುಕು ತಗ್ಗು ಮುಖಾನ ಹಿಡದಯ್ಕೆ.. ಮೊದಲಿನಂಗ ಕಸುವುಯಿಲ್ಲ... ನಾಕು ಮಂದಿ ಛಂದಾಗಿ ಬದುಕೋದನ ನೋಡಲಕಂದರ ಅಂಗಯ್ಯ ಬಿಕೋ ಅಂತಯ್ಕೆ.. ಯನ್ನು ನಾಲಗೆ ಹುಕುಂ ನುಡಿದರ ಕೇಳುವವರಾರು ಕನರಪ್ಪಾss” ರಂದು ಫರಲಾಂಗುದುದ್ದ ನಿಟ್ಟುಸುರು ಬಿಟ್ಟಳು. ಅದಕ ಮೂಕರಾದರು ಅವರೆಲ್ಲ. "ಯವ್ಯಾ. ನೀನು ಹೇಳಿದ್ದು ಖರೇವಯ್ಕೆ. ಯಾರೊಬ್ಬರದು ನಸೀಬ ನೆಟ್ಟಗಿಲ್ಲ.. ಮುಂದಿನ ದಿವಸಗಳೂ ಸುಮಾರಯ್ತಾವ” ಯಂದು ಹಂಪರಸಪ್ಪಯ್ಯನೂ