ಪುಟ:ಅರಮನೆ.pdf/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೦೩ ನಿಟ್ಟುಸುರುಬಿಟ್ಟ, ವಂದು ಕಾಲದಲ್ಲಿ ಅವಯ್ಯ ಹರಪನಹಳ್ಳಿ ಪಾಳೇಗಾರರ ಬಳಿ ದಿವಾನಗಿರೀಲಿ ಯಿದ್ದಾತನು.. “ತಾಯಿ.. ನಿನ್ನ ಆಸಿರುವಾದ ಯಾವತ್ತು ಯೀ ಮಕ್ಕಳ ಮ್ಯಾಲಿರಲವ್ವಾ.” ಯಂದನಕಂತ ಸಣುಮಾಡಿದನು. ವುಳಿದವರೂ ಸಣುಮಾಡಿ ಅಲ್ಲಿಂದ... ಬಂದವರು ಸುಮ್ಮಕ ಕುಂಡರಲಿಲ್ಲ.. ಹಂಪರಸಪ್ಪಯ್ಯನ ನೇತ್ರುತ್ವದಲ್ಲಿ ಹರಪನಹಳ್ಳಿ ಸೀಮೆ ಸಮಗ್ರ ಅಭಿರುದ್ದಿ ಸಮಿತಿಯನ್ನು ರಚನೆ ಮಾಡಿಕೊಂಡರು. ದೇವರು ತಮಗ ಯಾತರಲ್ಲೂ ಕಡಿಮೆ ಮಾಡಿಲ್ಲ.. ಕಾದಷ್ಟು ವಂತಿಗೆ ಹಾಕಿದರು.. ದಿನಗೂಲಿ ಮ್ಯಾಲ ಕೆಲ ಯುವಕರನ್ನು ಸಿಪಾಯಿಗಳನ್ನಾಗಿ ನೇಮಕ ಮಾಡಿಕೊಂಡರು. ಅದಕ “ಯಿಮ್ಮಡಿ ಸೋಮಶೇಖರನ ನಾಯಕನ ಪದಾತಿದಳ” ಯಂದು ನಾಮಕರಣ ಮಾಡಿದರು.. ಹುಲಿಯನ್ನು ಕೊಂದು ಹುಲಿ ಯಿನಾವನ್ನೂ, ಕರಡಿಯನ್ನು ಕೊಂದು ಕರಡಿ ಯಿನಾಮನ್ನೂ ಪಡೆದಂಥವನೂ, ಆರೂವರೆ ಮೊಳ ವುದ್ದದವನೂ ಆದ ಕುರುದುಗಡ್ಡೆ ದೇಸಾಯಿ ಭರವುನಗವುಡನನ್ನು ಸೇನಾಧಿಪತಿಯನ್ನಾಗಿ ನೇಮಕ ಮಾಡಲಾಯಿತು. ಆ ಪರಾಕ್ರಮಿಗೆ ಅರಾಕಜತೆ ಯಿರುದ್ಧ ಹೋರಾಡುವ ರಾಜಸತ್ತೆಯನ್ನು ಪುನರ್‌ಸ್ಥಾಪನೆ ಮಾಡುವ ಸರುವ ಅಧಿಕಾರವನ್ನು ಯಿದ್ಯುಕ್ತವಾಗಿ ನೀಡಲಾಯಿತೆಂಬಲ್ಲಿಗೆ ಸಿವಸಂಕರ ಮಾದೇವ........... ಅತ್ತ ರಾಯನು ಹೆಂಡತಿ ಮಕ್ಕಳೊಡನೆ ಕೂಡ್ಲಿಗಿ ಪಟ್ಟಣಕ್ಕೆ ಆಗಮನ ಮಾಡಿದೊಡನೆ ಆದರ ದಾಂಪತ್ಯ ಯೋಜನೆಯನ್ನು ಬರಖಾಸ್ತುಗೊಳಿಸಿ ಹಲವು ಗಂಡ ಹೆಂಡರ ನಿಷ«ರ ಕಟ್ಟಿಕೊಂಡನು. ತ್ರಿಕಾಲ ಸಂದ್ಯಾವಂದನೆ, ಗಾಯಿತ್ರಿ ಸಹಸ್ತಲಲಿತನಾಮಗಳಿತ್ಯಾದಿಗಳನ್ನು ಚಾಚೂತಪ್ಪದೆ ಮಾಡತೊಡಗಿ ಸದರಿ ಪಟ್ಟಣದ ಸಮಸ್ತ ವಯ್ದಿಕರ ಪ್ರೀತಿಗೆ ಪಾತ್ರನಾದನು.. ಕುಂಪಣಿ ಸರಕಾರದ ಕರಚಳಕದಿಂದಾಗಿ ಸೊರಗಲಾರಂಭಿಸಿದ್ದ ಅಗ್ರಹಾರಗಳ ಜೀರೋದ್ದಾರದ ಸಲುವಾಗಿ ವಂದು ಯೋಜನೆಯನ್ನು ರೂಪಿಸಿದನು. ಅದಕ್ಕೆ 'ಪುರಾಣ'ಯಂಬ ಹೆಸರನ್ನಿಟ್ಟನು.. 'ವರಮಾನದ ಆತುಮವೇ ಪುರಾಣ' ಯಂದದಕ ಉಪಶಿಕ್ಷಿಕೆಯನ್ನು ಕೊಟ್ಟನು. ಹುಟ್ಟು ಸಾವು ಸಂಭವಿಸುವ ಪ್ರತಿಯೊಂದು ಮನೆ, ಸಮೀಪದ ಅಗ್ರಹಾರದೊಂದಿಗೆ ನಿಕಟ ಸಂಪಕ್ಕ ಯಿಟ್ಟುಕೊಳ್ಳಬೇಕೆ೦ದೂ, ವಯ್ದಿಕರು ನೊಂದುಕೊಂಡಲ್ಲಿ ಬರ ಸಂಭವಿಸುವುದೆಂದೂ, ದ್ವಿಜರ ಜೀವನಾವಶ್ಯಕ ಸಾಮಾಗ್ರಿಗಳನ್ನು