ಪುಟ:ಅರಮನೆ.pdf/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೬ ಅರಮನೆ ಹಟ ಮಾಡಿದನಲ್ಲ.. ತೋರಿಸದಿದ್ದಲ್ಲಿ ಅಪಹರಣ ಮಾಡುವುದಾಗಿ ಯೇರಿಕೆ ದನಿಯಲ್ಲಿ ಬೆದರಿಕೆ ಹಾಕಿದನಲ್ಲಾ.. ಅದೂ ನಾಕಾರು ಮಂದಿ ಕೇಳಿಸಿಕೊಳ್ಳಲಿ ಯಂಬ ಲೆಕ್ಕಾಚಾರದಿಂದ.. ತಾನೇ ಮಹಾ ಗಂಡಸೆಂಬ ಅಹಂಕಾರದಿಂದ.. ಯಲಮೋ ಮೀರಭೋಜss ನೀನು ಖಂಡಿತ ನನ್ನ ಮಗಳ ತಂದೆಯಲ್ಲ.. ಆಮೂರ ರಾಜನಲ್ಲ... ಯೇವೂರ ರಾಜನಲ್ಲ... ಯಂದು ಗಟ್ಟಿಯಾಗಿ ಹೇಳಬೇಕೆಂಬ ಮನಸ್ಸಾಯಿತು ಆ ಕ್ಷಣದಲ್ಲಿ.. ಅವನಾರು ಯಂದು ಅವನು ಮರು ಸವಾಲು ಹಾಕಬೌದೆಂದು ತಾನು ತುದಿನಾಲಗೆಯನ್ನು ಕಚ್ಚಿ ಹಿಡಿದದ್ದುಂಟು.. ಆ ಕ್ಷಣ ಆ ಮುಖ ಯಾಕಾದರು ನೆಪನಾಯಿತೋ? ಯಷ್ಟು ಕೊಡಹಿದರೂ ಹೋಗುತಾಯಿಲ್ಲವಲ್ಲಾ.. ಆ ಗಡ್ಡ, ಆ ತಲೆ, ಆ ಹೊಳೆವ ಕಣ್ಣುಗಳು.. ಆ ಮಟ್ಟಸ ನಿಲುವು.. ಆ ಕಾಷಾಂಯಾಂಬರ.. 'ಜಯ್ ಗೋರಖನಾಥ' ಯಂದು ಅಡಿಗಡಿಗೆ ನುಡಿವ ಆ ದ್ವನಿಯು.. ವಂದೇ ವಂದು ಸಣ್ಣ ಸ್ವರುಷದಿಂದ ಪುಳಕಗೊಳಿಸಿದ, ಮಯ್ಯ ಮರೆಯಿಸಿದ ಆ ಸಾಂಗತ್ಯ.. ಛೀ.. ಛೇ.... ಈ ಹಿಂಗss ತಲೆಯನ್ನು ಮೊಸರುಗಡಿಗೆ ಮಾಡಿಕೊಂಡಿರುವ ತಾಯಕ್ಕ... ಅನಾಕರಕ ನಾಮವಾಚನವನ್ನು ಮಧ್ಯಂತರದೊಳಗ ತನಗೆ ತಾನೆ ಆರೋಪಿಸಿಕೊಂಡಿರುವಂಥ ತಾಯ... ಜಾವ ಜಾವಕ್ಕೆ ತನ್ನ ಕರುಳ ಕುಡಿಯನ್ನು ಅಪ್ಪಿಕೊಳ್ಳುತ್ತಿರುವ ತಾಯಕ್ಕ.. ತಲೆಯನ್ನು ನೇವರಿಸುತ್ತಿರುವ ತಾಯಕ್ಕ... ವಳಗೊಳಗ ನಾಥ ಸಂಪ್ರದಾಯಸ್ಥೆಯಾಗಿರುವ ತಾಯಕ್ಕ.. ಯದೆಯೊಳಗಿನ ಜನುಮ ರಹಸ್ಯಯಲ್ಲಿ ಸ್ಫೋಟವಾಗವುದೋ ಯಂದು ಹೆದರುತ್ತಿರುವ ತಾಯ. ತನ್ನ ಪ್ರತಿಬಿಂಬದೆದುರು ಅಂಗಲಾಚುತ್ತಿರುವ ತಾಯಕ್ಕ... ಕೆಲವು ದಿನಗಳ ಮಟ್ಟಿಗಾದರೂ ತಾನು ತನ್ನ ಮಗಳೊಂಡನೆ ಯಲ್ಲಿಗಾದರೂ ಹೋಗಿದ್ದು ಬರಬೇಕೆಂದು ನಿಲ್ದಾರ ಮಾಡಿದ ತಾಯಕ್ಕ... ಅತ್ತ ಭೂಲೋಕಕ್ಕೆ ಅಧಿಕವಾಗುತಲಿದ್ದ ಕುದುರೆಡವು ಪಟ್ಟಣದೊಳಗೆ ವಬ್ಬೊಬ್ಬರು ಅಯಿವತ್ತೊಂದು ಬಾಯಿಗಳನು ಮುಡ ಕೊಂಡು ಮಾತಾಡುತ್ತಿರಬೇಕಾದರ, ವಬ್ಬೊಬ್ಬರು ನೂರೊಂದು ಕಾಲುಗಳನು ಮುಡಕೊಂಡು ಅಡ್ಡಾಡುತ್ತಿರಬೇಕಾದರ.. ವಬ್ಬೊಬ್ಬರು ಸಾಯಿರ ಕಯ್ಕೆಗಳನ್ನು ಮುಡಕೊಂಡು ಕ್ರಿಯಾಕಟ್ಟಳೆ ಮಾಡುತ್ತಿರಬೇಕಾದರೆ.. ವಸ್ತಿ ಸಾನ್ನಿಧ್ಯದಲ್ಲಿ ನೂರಾರು ಮಂದಿ ಹಿರೇಕರು, ಕಿರೀಕರು, ಆಗ್ರಾವರಿಗಳು ಯೇನು