ಪುಟ:ಅರಮನೆ.pdf/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೦೭ ಮಾಡುವುದಯ್ಕೆ. ಯೇನು ಬಿಡುವುದಯ್ದೆ ಯಂದು ತುದಿಗಾಲೀಲೆ ನಿಂತಿದ್ದರು... ಬರಿ ನೆಲದ ಮಾಲ ಅರಂಗುಲ ಕುಂಡಿ ನಾಟಿ ಮಾಡಿದ್ದರು.. ಕಯ್ದೆ ಕಯ್ಯ ಬೆಸೆದಿದ್ದರು.. ಮಮ್ಮೊಳಗಿನ ರವುಸ ಅರದಿರಲಂತ ತಮ್ಮ ತಮ್ಮ ಬಾಯೊಳಗ ತೊಪ್ಪಲದುಂಡೇನ ಯಟುಕೊಂಡು ಯಡಕು ಬಲಕು ವುರುಳಾಡಿಸುತ, ರೆಪ್ಪೆಗೆ ರೆಪ್ಪೆ ಬಡಿಸದೆ..... ಮಾ ಬಲಿ ಅರಕೆ ಹೇಗಾದೀತು, ಆಗಾದೀತು ಅಂತ ಅವನ ನಿಜವಕ್ಕಲು ಮಂದಿ ಮೇನಿತ್ತು ಅದು ಹಂಪಜ್ಜನ ಬಾಯಿ ಕಡೇಕ ನಿಗಾಯಿಟ್ಟಿತ್ತು. ನಿಗಾಯಿಟ್ಯೂ... ಯಿಟ್ಟು ಆ ತೂರುವಿಕನ ಹುತ್ತ ಸದ್ರುಸದ ಮುಖವನ್ನು ತಮ್ಮ ತಮ್ಮ ಕಣ್ಣೂಳಗ ಅಚ್ಚೆತ್ತುಕೊಂಡುಬಿಟ್ಟಿತ್ತು. ಅದು ಆಗಬೇಕಂದರ ಅದು ಆಗಿತ್ತು.. ಯಿದು ಆಗಬೇಕೆಂದರ ಯಿದು ಆಗಿತ್ತು. ಮಳೂರು ಸೀಮೇಲಿಂದ ಮೊದೋರು, ಬಾಳೂರು ಸೀಮೆಕಡೇಲಿಂದ ಬಾರಿಸೋರು, ಯಲ್ಲಾರು ಬಂದು ಸದರಿ ಪಟ್ಟಣದ ಫಲಾನ ಜೆಗೇವಳಗ ಬೀಡುಬಿಟ್ಟು ತಮ್ಮ ತಮ್ಮ ಕಲಾನಯಪುಣ್ಯದ ಸರದಿ ಸಲುವಾಗಿ ಕಾಯುತಲಿದ್ದರು. ಬಾನೊಳಗ ಚಂದ್ರಾಮ ದಿನದಿಂದ ದಿನಕ್ಕೆ ರುದ್ದಿ ಆಗುತಲಿದ್ದನು.. ಆತ ಬಿಳಿ ಜ್ವಾಳದ ರೊಟ್ಟಿ ಹಾಂಗ ದುಂಡಕಾಗುವ ದಿನ ದೂರಯಿಲ್ಲ.. ಅಮ್ಮಮ್ಮಾ ಅಂದರ... ಮಾ ಬಲಿಯ ಮೇಲು ಮಯ್ಯ ಲಕ್ಷಣ ಯೇನೆಂಬುದನು ಬಾಯಿ ಬಿಡುವುದೊಂದೇ ಬಾಕಿ.. ಅದನು ಹುಡುಕುವುದಯ್ಕೆ.. ಹುಡುಕಿ ತರುವುದಯ್ಕೆ.. ತಂದು ಕಟ್ಟುವುದಯ್ಕೆ.. ಕಟ್ಟಿ ಸೊಕ್ಕಡಗಿಸುವುದಂತ್ತೆ.. ಅಡಗಿಸಿ ಮುಂಡದಿಂದ ರುಂಡವನ್ನು ಬೇರುಪಡಿಸುವುದಯ್ಕೆ.. ಯವೇ ಮುಂತಾದ ರಗಡ ವದಕನ ಅಯ್ತಿ.. ವಾಬಲಿಯು ನೆತ್ತರು ಯೀ ನೆಲದ ವಾಲ ಬಿದ್ದು ಯೇಸು ಸತಮಾನಗಳಾದವೋ? ಅದು ವಬ್ಬರಿಗೂ ನಿಖರವಾಗಿ ನೆಪ್ಪಿಲ್ಲ... ಮಾಬಲಿ ಅರುದಾತೂss ಅವ್ವನ ವಕ್ಕಲು ಮಂದಿ ಹಿಂಗಾಲು ಮುಂಗಾಲು ಕಸುವೆಲ್ಲ ಆವಿ ಆಗಯ್ತಿ.. ರೋಗ ರುಜಿಣ ಕಾಡುತಾವ.. ಸಂತಾನ ಛೀಣಿಸಯ್ತಿ... ಕುಂಪಣಿ ಸರಕಾರ ದತ್ತ ಮಂಡಲದ ಮೂಗುದಾಣ ಹಿಡಕೊಂಡ ಮ್ಯಾಲ ಯಾವ ಮೂರೊಳಗ ಮಾಬಲಿ ಬಿದ್ದುದುಂಟಾ, ಥಾಮಸು ಮನೋ ಸಾಹೇಬ ಬಂದ ಮ್ಯಾಲ ಆಳೋರ ಕಮ್ಮೊಳಗಿನ ಬಡಿಗೇನ ಕಸಗೊಂಡ ಮ್ಯಾಲ ದಂಡು ದವಲತ್ತು ವುಪುಸಮ್ಮರಿಸಿಕೊಂಡ ಮ್ಯಾಲ, ಸಿಮ್ಮಾಸನಗಳನ್ನೆತ್ತಿ ಬೊಕಬಾರಲು ಮಲಗಿಸಿದ ಮ್ಯಾಲ ವಂದಾರ ದಯವತಾ ಕಾಠ್ಯವು ನಡದಾ? ಕೂಲಿನಾಲಿಗೆ