ಪುಟ:ಅರಮನೆ.pdf/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮ ಅರಮನೆ ಸೋಪ್ತಿ ಆಗಿರೋ ಕಟುಗರ ಬಗ್ಗೆ ಆಳೋ ಅರಸರಿಗೆ ವಂಚೂರಾರ ಕರುಣೆವುಂಟಾ? ಪಟ್ಟಿಗಳ ಕುತ್ತಿಗಿಗೆ ಬಾಯನ್ನ ಹಚ್ಚ ಹಸಿರಗುತ ಕುಡಿಯೋ ಪೋತರಾಜರು ಅಂಡಾವರನ ಪುಂಡೀಪಲ್ಯ ಆಗ್ಯಾರಲ್ಲಾ.. ಅವರ ಬಗೆಗೇನಾರ ಪಟ್ಟಣ ಸೋಮಿಗಳಿಗೆ ಕನಕರವುಂಟಾ? ಖಂಡಖಂಡುಗ ಬೆಳಿಯೋ ಭೂಮಾಯಿ ಅರವೆ, ಯರಡರವೆಗೆ ಸೋಪ್ತಿ ಆಗವಳಲ್ಲಾ, ಆಕೆ ಬಗೆಗೇನಾರ ಸರಕಾರಕ್ಕೆ ದರಕಾರವುಂಟಾ? ಧೋ ಅಂತ ಮಳೆ ಸುರಿದಿರುವುದುಂಟಾ? ಹೊಳೆ ಹಳ್ಳಗಳು ಅರಚಿರುವುದುಂಟಾ? 'ತಾಯಿ.. ಸಾಂಬವೀ.. ಹಂಪಜ್ಜನ ಬಾಯೊಳಗ ನಾಕಾರು ಸಬುದಗಳ ರೂಪ ಧರಿಸಿ ವಡ ಮೂಡು ಜಗದಂಬೆ' ಅವನ ವಕ್ಕಲು ಮಂದಿ ಜಾವ ಜಾವಕ್ಕ ಬಾಯಿ ತೆರೆಯೋದು, ಮುಟ್ಟೋದು ಮಾಡುತಲಿದ್ದರು..... ಅಲ್ಲೇ ಯಿನ್ನೊಂದು ಸೋಲುಪ ದೂರದ ಫಾಸಲೆಯಲ್ಲಿ ದೇವಿ ಪುರಾಣವನ್ನು ವುಸುರಾಡುತ ಬೆಳೆದಂಥವನಾದ ದಾಸರಯ್ಯನು ತನ್ನತ್ತ ಕಿವಿ ಚಾಚಿದ್ದ ಮಂದಿಯನ್ನುದ್ದೇಶಿಸಿ 'ಸತ್ಯಯುಗದಲ್ಲಿ ಗವುರಿಯ ಅದೇ ಯನ್ನು ಚಂಡನನ್ನು ಚೆಂಡಾಡಿ ಚಂಡಿಯಂಬ, ಮುಂಡನನ್ನು ಚೆಂಡಾಡಿ ಚಾಮುಂಡಿ ಯಂಬಭಿದಾನವ ಧಾರಣ ಮಾಡಿದ್ದಳು.. ಆಗ ಶಾಕಿನಿ ಡಾಕಿಣಿಯರು, ಸುಂಬ ನಿಸುಂಬರ ಬಾಡೂಟದ ಸಲುವಾಗಿ ಆಕೆಯನ್ನು ಬೆಂಬಲಿಸಿದ್ದರು. ಅವರನ್ನು ಸವಾರ ಮಾಡಿ ಸಾಂಬವಿ ನಂಬಭಿದಾನ ಮುಡುದು ಲೋಕ ಯಿಖ್ಯಾತಳಾಗು ತಾಯೇ ಯಂದವರು ಪರಿಪರಿಯಿಂದ ಕಾಡತೊಡಗಿದರು.. ಸುಂಬನ ಸೇನಾಧಿಪತಿ ರಕುತಬೀಜಾಸುರನನ್ನು ಸಮ್ಮರಿಸಲೋಸುಗ ತಾಯಿಯು ಪತಿಪರಮೇಸುರನ ಅಪ್ಪಣೆಯಂತೆ ಮಾಂಕಾಳಿಯ ರೂಪ ತಾಳಿದವಳಾಗಿ, ಅಖಂಡ ಹಲಗೆ, ಮಾರಾಂಕ ಖಡುಗ ಧರಿಸಿದವಳಾಗಿ, ತ್ರಿಸೂಲ, ಸಂಖ, ಡಮುರುಗಗಳನ್ನು ಧಾರಣ ಮಾಡಿದವಳಾಗಿ, ಬಿಚ್ಚುಗತ್ತಿ ಬಿದಿರಗ, ಚಂದ್ರಬಾಣ, ಸೂರಬಾಣ, ಅಗ್ನಿಬಾಣ, ಕಠಾರಿss ಯವೇ ಮೊದಲಾದು..... ಯಂದು ಪ್ರವಚನ ಮಾಡುತ್ತಿರುವುದ ರೊಳಗ......... ಮಂದಿ ವಸ್ತಿ ಸನೀಹಕ ಹೋಗುವುದು, ಬರುವುದು ಮಾಡುತಲಿತ್ತು, ಮಾಬಲಿಯ ಕಣಸು ಕಾಂಬುತಲಿತ್ತು. ತಮ್ಮ ತಮ್ಮ ಸರೀರದಂಗಾಂಗಗಳನು ಮುಟು ಮುಟ್ಟಿ ನೋಡಿಕೊಳ್ಳುತಲಿತ್ತು.. ಮನದಾಗ ವಟವಟ ಅಂದನಕಂತಲೇಯಿತ್ತು.. ಸದರಿ ಪಟ್ಟಣದೊಳಗ ಮಾಬಲಿ ಯಾರದ್ದಾಗಿರಬೌದು?