ಪುಟ:ಅರಮನೆ.pdf/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೦೯ ಅವರದ್ದಾಗಿರಬೌದಾ? ಯಿವರದ್ದಾಗಿರಬೌದಾ? ರಂದು ಪ್ರತಿಯೊಬ್ಬರ ಪ್ರತಿಯೊಂದು ಜಂತನ್ನು ಕಣ್ಣ ಮುಂದೆ ತಂದುಕೊಂಡು ತೂಕನ ನೋಡುತಲಿತ್ತು..... ಜಡೆಪ್ಪತಾತನಲ್ಲದೆ ಕಾಡುಗೊಲ್ಲರೀರಯ್ಯ, ಕರುಬಸಪ್ಪ ಮರುಬಾಲಪ್ಪರೇ ಮೊದಲಾದ ಪಟ್ಟಣಸೋಮಿ ದಯವಸ್ಥರ ನಡುವೆ ದೇದೀಪ್ಯಮಾನವಾಗಿ ಹೊಳೆಯುತಲಿದ್ದ ಹಂಪಜ್ಜನು ಸುಮ್ಮಕ ಕುಂತಿರಲಿಲ್ಲ. ವಸ್ತಿಯು ಜಾವ ಜಾವಕ ಯೇಳುವುದು, ಕುಂಡುರುವುದು, ಆಕಳಿಸುವುದು, ಚಪಚಪನೆ ಬಾಯಿ ಚಪ್ಪರಿಸುವುದು ಮಾಡುತಲಿತ್ತು.. ಪೂರುವಿಕನು ನೋಡೀ ನೋಡೀ.. ಸಾಕಾಗಿ “ಯ್ಯನವ್ವಾ ನಿಂದು ಬಲು ಆತು.. ಚಾವತ್ತು ಸುಮ್ಮಕ ಕೂಕಟ್ಟಲಕ ಯೇನು ತಗಮಿ” ಯಂದು ಚಿಕ ಮಗೀನ ಗದರಿದಂಗ ಗದರುತ್ತಿದ್ದನು.... ಅಷ್ಟರೊಳಗ ಶಂಖಾರಾವ ಕೇಳಿ ಬಂತು.. ವಸ್ತಿ ಕಡೇಲಿಂದ, ಯಲ್ಲರೂ ಅಚ್ಚೇಕಡೇಕ ಹೊಳ್ಳಿದರು. “ಸಾಂಬವಿ ಬಯಸಿದ ಮಾಬಲಿಯ ಮೇಲುಮಯ್ಯ ಲಕ್ಷಣಗಳು ಯೇನೇನಪಾಂದರ.. ಕೋಡುಗಳು ತದಿಗೆ ಚಂದ್ರಾಮನನ್ನು ಹೋಲುತಿರಬೇಕು. ಭೂಮಧ್ಯೆ ಅಂಗಯ್ಯಗಲದೋಟು ಬೆಳದಿಂಗಳಿರಬೇಕು.. ನಾಕೂ ಕಾಲುಗಳ ಮೊಣಕಾಲ ಚಿಪ್ಪಿನ ಮ್ಯಾಲ ನೊರೆವಾಲ ಕೆನೆಯಂಥ ಪಯಿತ್ರಕಲೆಗಳಿರಬೇಕು.. ಮಂಖ್ಯೆಂಬುವ ಮಮ್ಮಿಂಯ ಬಣ್ಣ ಕತ್ತಾಲೆ ಕಾವಳದಂಗಿರಬೇಕು. ಅದರ ಯರಡೂ ಕಣ್ಣುಗಳು ಸಾವುರ ದೀವಟಿಗೆಗಳಿಗೆ ಸರಿಸಮಯಿರಬೇಕು.. ಅದರ ಮೂಗಿನ ಹೊಳ್ಳೆಗಳಲ್ಲಿ ಬಿರುಗಾಳಿ ಸುಂಟರಗಾಳಿಗಳು ನೆಲಗೊಂಡಿರಬೇಕು. ಅದರ ವಂದೊಂದು ರುಷಣವು ರುಬ್ಬೋ ಗುಂಡಿಗೆ ಸರಿಸಮನಿರಬೇಕು, ಅದರ ಸಿಸ್ನ ಮೊಳವರೆಯಿರಬೇಕು... ಅದರ ಮಯ್ಯೋಳಗ ವಂದು ಕೊಪ್ಪರಿಗೆ ಮಾವುಸ, ವಂದು ಕೊಳಗ ರಗುತ ಯಿರಲಕಬೇಕು.. ಯಿಡೀ ವಂದು ಸಮ್ಮತ್ಸರ ವುರಿಯುವಷ್ಟು ನೆಣ ಅದರ ಬೆನ್ನೆಲುವಲ್ಲಿರಲಕು ಬೇಕು.. ಯಿಂಥಪ್ಪಾ ಮಾ ಬಲಿಯನ್ನು ತಾಯಿ ಬಗುಸವಳೆ..” ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ.. ಜೀಮೂತ ಮತ್ತವನ ಸಂಗಡಿಗರು ಹುರುಪಿನಿಂದ ತಮಟೆಗಳ ಮುದುದೊಗಲ ಮಾಲ ಕೋಲುರುಳಿಸಲಾರಂಭಿಸಿದರು. ಕವಳೆವ್ವ ಮತ್ತಾಕೆಯ ಸಂಗಡಗಿತ್ತಿಯರು “ಯವ್ವಾ ನಿನ್ನ ಕರುಳ ಬಳ್ಳಿ ಜಗದಲ ಹಬ್ಬಯ್ಕೆ.. ಮುಗಿಲುದ್ದ ತುಂಬಯ್ಕೆ..