ಪುಟ:ಅರಮನೆ.pdf/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೧೧ ಪಾರೊತಿ ಪತಿ ಹರ ಹರ ಮಾದೇವ ಅಂದಕಂತ ಹಿರಿಹಿರಿ ಹಿಗ್ಗಿದರು. ಫಲಾನ ಜೆಗೇವು ತಲುಪಿದರು... ಜಾಗ ಕದಲಿರದ ಮಹಿಷವು ಗವುರವ ತೂರುವಕವಾಗಿ ಅವರನ್ನು ಸ್ವಾಗತಿಸಿತು. ತನ್ನ ಪವುರಾಣಿಕ ಕಾಲದ ದಿವ್ಯ ಸರೀರದ ಮ್ಯಾಲಣ ಕೂನ ಗುರುತುಗಳನ್ನು ತೋರಿಸಿಕೊಟ್ಟಿತು. ಅದರಿಂದ ಸಂತುಷ್ಟರಾದ ಹಿರೀಕರು “ಯಿರಯ್ಯss ನಸುವರವಾದ ಅಯ್ದು ಕೂರಿಗಿ ಹೊಲ ಬ್ಯಾಡಂಬುತಿ.. ಚಪಲವಾದ ಬೆಳ್ಳಿ ರೂಪಾಯಿಗಳನು ಬ್ಯಾಡಂಬುತಿ.. ಸಾಸುವತವಾದ ಮೋಕ್ಷ ಪದವಿ ಬೇಕೆಂಬುತೀ.. ಆಯ್ತು.. ಮೋಕ್ಷ ಪ್ರಾಪ್ತಿರಸ್ತು” ಯಂದಾಸರುವಾದ ಮಾಡಿದರು. ಹಂಪಜ್ಜನಿಗೆ ಅರಿಕೆ ಮಾಡಿಕೊಳ್ಳುವ ನಿಮಿತ್ತ ಪಟ್ಟಣದ ಕಡೇ.... ಅವರು ಆನಂದತುಂದಿಲರಾಗಿ ಪಟ್ಟಣವನ್ನು ಪ್ರವೇಸ ಮಾಡಿದ ಹೊತ್ತಿನಲ್ಲಿ ದಳವಾಯಿ ಬಾಗಿಲ ಮುಂದುಗಡೆ ಮುಳ್ಳಿನ ಪೀಠದ ಮ್ಯಾಲ ನಿಟಾರನೆ ನಿಂತಿದ್ದ ಕಾಲಾನಯ್ಯನು..... “....ಆದಿ, ಅನಾದಿ, ಅನಂತ, ಅದ್ಭುದ, ತಮಂಧ, ತಂಡಜ, ವಾರಿಜ, ಭಿನ್ನಯುಕ್ತ ಆಯುಕ್ತ ಮನಿರಣ, ಮಾನ್ಯರಣ, ಯಿಸುವಾವಸು, ಅಲಂಕುತ, ತ್ರೇತಾ, ದ್ವಾಪರ, ಕಲಿ.. ಕಲಿಯುಗದಲ್ಲಿ ಮೂಳೆಮೋಬಯ್ಯನೇ ನಿಜಭಕುತ ಕೇಳಿರಯ್ಯಾ... ಸಾಂಬವಿಮೋಲ್ವಳೇ ನಿಜದೇವತೆ ಕೇಳಿರಯ್ಯಾ.. ಯಿವರೀಶ್ವರಲ್ಲಿ ಭಿನ್ನ ಬೇದವ ಮಾಡಬ್ಯಾಡಿರಯ್ಯಾ, ತಾಯ ಮಯ್ಕೆಯ ಪ್ರಾಬಲ್ಯವುಂಟು ಮಾಡಲಕೆಂದೇ ಮೋಬಯ್ಯನ ಜನನವಾಯಿತ್ತು ಕೇಳಿರಯ್ಯಾ.. ಆಕೆ ಪ್ರವೇಶ ಮಾಡಿದ್ದು ರಾಕ್ಷಸನಾಮ ಸಮುವತ್ಸರ ಪಾಲ್ಗುಣ ಸುಕ್ಲ ಹನ್ನೆರಡು ಮಂಗಳವಾರ ಯಿಪ್ಪತ್ತೆಂಟನೇ ಗಳಿಗೆಯಲ್ಲಿ ಕೇಳಿರಯ್ಯಾ.. ಯೀ ಹುಣ್ಣುಮಿ ವಳಗಾಗಿ ಆದಿಸುತೀನ್ನ ಹೊಳೆಗೊಂಡಿಸದಿದ್ದಲ್ಲಿ ಆಗುವ ಅನಾಹುತವ ಕೇಳಿರಯ್ಯಾ... ಬಂದವ್ವನ ಸರೀರದಿಂದ ಅಂದ ಅಳೀತದೆ ಕೇಳಿರಣ್ಣಾ.. ಹೆಂಗಸರ ಮುಖದ ಮಾಲ ಗಡ್ಡಮೀಸೆ ಮೂಡುತಾವ ಕೇಳಿರಣ್ಣಾ.. ಗಂಡಸರು ಬಸುರಾಗುತಾರ ಕೇಳಿರಣ್ಣಾ... ಅವರು ಮೀಸವುಳ್ಳ ಕೂಸುಗಳನು ಹಡಿತಾರ ಕೇಳಿರಣ್ಣಾ.. ಮಳೆಗಾಲ ಅಡmಾವು, ಬೆಳೆಗಳು ವುಡುಗ್ಯಾವು ಮರೆಯದಿರಣ್ಣಾ.. ಕುದುರೆಡವು ಮಂದಿ ಅನ್ನವ ಕಾಣಾದೆ ಮನಿಮನಿಂದ ತಿರುಗ್ಯಾರು ಕೇಳಿರಣ್ಣಾ.. ಆಕಾಸ ಅದುರೀತು... ಭೂಮ್ರಾಯಿ ನಡುಗ್ಯಾಳು ಕೇಳಿರಣ್ಣಾ. ಕುಹಕಾರರ ಬಂದ ಕಡೆ ಮಾಟವಾದೀತು ನೋಡಿರಣ್ಣಾ.. ಲೋಕಕ್ಕೆ ಮೀರಿದ ಜ್ಯೋದ್ಯಾರು ಬರುತಾರ ನೋಡಿರಣ್ಣಾ.. ಮಾರಾಟ ನಡೆಯೂದು ಹೋರಾಟವಾದೀತು ಕೇಳಿರಣ್ಣಾ.. ಯಚ್ಚಾರ