ಪುಟ:ಅರಮನೆ.pdf/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೨ ಅರಮನೆ ಸ್ತ್ರೀಯಾರು ಮೆಚ್ಚುಗಳ ಮಾಡುತಾರ ನೋಡಿರಣ್ಣಾ... ಲೋಕಾವು ಹೆಚ್ಚತು ಹೆಚ್ಚಾಗಿವುದು.....” ತರಗೆಲೆಗಳುರುಳಿದಂತೆ ನಡೆಯುತಲಿದ್ದ ಹಿರೀಕರಿಗೆ ಅದನ್ನೆಲ್ಲ ಕೇಳುವ, ಕೇಳಿ ಅಲ್ಲ ಬಗೆಯುವ ಯವಧಾನ ಯಿರಲಿಲ್ಲ.. ವಂದೆರಡು ಮಾತುಗಳನು ಕಿವಿಂರೊಳಗ ಯಿಟ್ಟುಕೊಳ್ಳಬೇಕಂದರ ವಾದ್ಯಗಳ ರಬುಸ ಬ್ಯಾರೆ.. ಪಂಚೇಂದ್ರಿಯಂಗಳಿಗೆ ಅಟೆಯುತಲಿದ್ದ ಮೂರುಗಳು ವಂದೇ ಯರಡೇ... ಸಿವ. ಸಿವಾ.. ಗವುಜುಗ ಅಂದರ ಗವುಜುಗ.. ಖಾಂಡವವನ ಧಗಧಗಾಂತ ವುರಿದಾಗ ಯಾವ ಪ್ರಕಾರವಾಗಿ ಸರುಪಗಳು ನಡೆದವೋ, ಅದೇ ರೀತಿವಳಗ.... ಅವರು ನಡದು ಗಮ್ಯ ತಲುಪಿ ನಮಸ್ಕಾರ ಮಾಡಿ ಹಿಂಗಿಂಗೇ ಅಂತ ಅರಕೆ ಮಾಡಿಕೊಳ್ಳಲು ಹಂಪಜ್ಜನು “. ಕ್ಲೋ.. ಹಂಗಾ” ಯಂದು ವುದ್ದಾರ ತೆಗೆದನು. ಆ ಮಹಿಷದ ಮಾಲಕಳು ಯಾರು ಯಂಬ ಪತ್ತೆ ಕಾರೈವು ನಡದೂ ನಡದೂss ಸದರಿ ಪಯಿತ್ರಆಸ್ತಿಯು ಧರುಮಪತ್ನಿಯಾದ ಜಗಲೂರೆವ್ವ ಯಂಬುದಾಗಿ ತೇಲಿ ಬಂತು.. ಯೇಳ್ನಮಾಚಾರ ಮಾಡಿ ತಪ್ಪಿಸಲೋಸುಗ ಗೊಂಜಾಡಲರಡವಯ್ಯನ ನೇತ್ರುತ್ವದಲ್ಲಿ ದಿಬ್ಬಣ ಥಳಗೇರಿಗೆ ಹೊಂಟಿತು.. ಹತ್ತು ಮನೆಗೊಬ್ಬಬ್ಬರಂತೆ ಮುತ್ತಯೇರು ಕಳಸಗಿತ್ತಿಯರಾಗಿ ಅದನ್ನು ಸೇರಿಕೊಂಡರು.. ಜಗಲೂರೆವ್ವನೂ, ಆಕೆಯ ಕೋಣನೂಚಿರಾಯುವಾಗಲಿ ಯಂಬ ಅಗ್ಗದ ಜಯಕಾರ ಗಳಿಂದ ದಿಬ್ಬಣ ನಳನಳಿಸಿತು..... ದಿಬ್ಬಣ ಥಳಗೇರಿಯನ್ನು ಪ್ರವೇಸ ಮಾಡಿದ ಸಮಯಕ್ಕೆ ಸರಿಯಾಗಿ ಯೇಕ ಪ್ರಕಾರವಾಗಿ ತಲೆ ಅಲ್ಲಾಡಿಸುತ್ತ ಜಗಲೂರೆವ್ವ ಕಾಯಿಸುತ್ತಿದ್ದ ಅಂಬಳಿಯ ಸುವಾಸಣೆಯನ್ನು ಪ್ರಾಣ ಮಾಡುತಲಿದ್ದ ಬೇಯಿನಮರವೂ.. ಅದರ ಕೊಂಬೆರೆಂಬೆಗೆ ತೊಟ್ಟಿಲು.. ಗೂಡು ಕಟ್ಟಿಕೊಂಡು ಸಮುಸಾರ ನಡೆಸಿದ್ದ ತರಾವರಿ ಪಕ್ಷಿಗಳೂ ವಂದು ಛಣ ಮೂಕಯಿಸುಮಿತಗೊಳ್ಳದೆ ಯಿರಲಿಲ್ಲ.. ಭೂತಬಿಲ್ಲೆ ದ್ಯಾಮಯ್ಯ ಮತ್ತವನ ಪರಿವಾರ ಬಲು ಜೋಜಿಗದಿಂದ ನೋಡು ನೋಡುತ್ತಿರುವಾಗ್ಗೆ..... ಸಿವನ್ನಾಮ.. ಜಯನಾಮ... ಯೀ ಚಾಜವನ್ನು ಯಿಳುವಿದ್ದೆಲ್ಲಿ? ಮಂಡೆವೂರಿದ್ದೆಲ್ಲಿ? ಕಯ್ಯ ಕಟ್ಟಿದ್ದೆಲ್ಲಿ? ಸೊಂಟ ಬಗ್ಗಿಸಿದ್ದೆಲ್ಲಿ? ನಾಲಗೆಗೆ ನಯನಾಜೂಕು ಕಲಿಸಿದ್ದೆಲ್ಲಿ? ಸ್ತ್ರೀ ಸಂಕುಲವನ್ನು