ಪುಟ:ಅರಮನೆ.pdf/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೧೩ ಕೊಂಡಾಡಿದ್ದಲ್ಲಿ ಅಂದರ ಜಗ್ಗೂರೆವನೆದುರು.. ಅದಕಾಕೆ ವಂದು ಯೇರಿಕೆ ಆಗಲಿಲ್ಲ. ವಂದು ಯಿಳಿಕೆ ಆಗಲಿಲ್ಲ... ಯದಕ ಬಂದಿರಿ ತಂದೆಗೋಳಾ ಅಂದಳು. ಅವರು ಯಿರೋ ಸಮಾಚಾರ ಹೇಳುತ್ತ ವುಗುಳು ನುಂಗಿದರು.. ಮೋಕ್ಷ ಪ್ರಾಪ್ತಿಯ ಅಮಿಷ ವಡ್ಡಿದ್ದಕ್ಕೆ ಆಕೆ “ಮೋಕ್ಷ ಗೀಕ್ಷಾ ಯಲ್ಲಾವು ನಿಮ್ಮ ಮನಿ ಬಚ್ಚಲಾಗಿರಲಪ್ಪಾ.. ಸೂರ ಬಲ... ನೀವು ಬಲ” ಅಂದುಬಿಟ್ಟಳು. ಹೆಚ್ಚಿಗೆ ಮಾತು ಬೆಳಿಸುವ ಗೋಜಿಗೆ ಹೋಗಲಿಲ್ಲ. ಯೀಯಮ್ಮಗೂ ಬುದ್ಧಿ ಬಂದಂಗಯ್ಕೆ ಯಂದುಕೊಂಡ ಅವರು ಅಲ್ಲಿಂದ.... ಮಾಬಲಿಯ ಸದರಿ ಪಟ್ಟಣದೊಳಗ ಹುಟ್ಟಿದುದು ಅಲ್ಲವೇ ಅಲ್ಲ.. ಅದು ಆಕೆಯ ತವರೂರಿಂದು.. ಪಯಿಲುವಾನ ಅಂತಾಡೆಪ್ಪನು ತನ್ನ ಮಗಳಿಗೆ ಮುಫತ್ತಾಗಿ ನೀಡಿರುವಂಥಾದ್ದು.. ಆದ್ದರಿಂದ ಅದನ್ನಾಗಲೀ.. ಆಕೆಯನ್ನಾಗಲೀ ಜಬರದುಸ್ತು ಮಾಡುವಂತಿಲ್ಲ... ದೇವರು ದೊಡ್ಡವನು.. ಆಕೆ ಸಡನ್ನ ವಪ್ಪಿಕೊಂಡಳು. ವಾದಕ್ಕೆ ಯಿಳಿಯಲಿಲ್ಲ. ದಯವವನ್ನು ಧಿಕ್ಕರಿಸಿ ಮಾತಾಡಲಿಲ್ಲ.. ವಪ್ಪದಿದ್ದಲ್ಲಿ ತಾವೇನು ಮಾಡಬೇಕಾಗಿ ಬರುತ್ತಿತ್ತೋ...? ಯನ್ನು ದಯವಸ್ತರಾದ ತಾವು ಸೂರನನ್ನು ವಪ್ಪಿಸುವುದು ಬಾಕಿ ಯಿರುವುದು.... ಸೂರ ಯಂಬ ಯರಡಕ್ಕರದ ಸಬುಧವನ್ನು ಪ್ರತಿಯೊಬ್ಬರು ತಮ್ಮ ತಮ್ಮ ನಾಲಗೆಗಳ ಮಾಲ ಕೆತ್ತಿಸಿಕೊಂಡರು ಯಂಬಲ್ಲಿಗೆ ಸಿವಸಂಕರ ಮಾದೇವ..... ಗುಂತಕಲ್ಲು ಪಟ್ಟಣದೊಳಗ ಖುದ್ದ ಮುನುಸೋಬಯ್ಯನೇ ನೂರಾರು ಮಂದಿಯ ನೇತುತ್ರ ವಹಿಸಿ ಕುಂಪಣಿ ಸರಕಾರದ ಮಾಯಾವಿ ಕುತ್ಯದ ಯಿರುದ್ಧ ಬಲಾಡ್ಯ ಮೆರವಣಿಗೆಯನ್ನು ತೆಗೆದನು. “ಮನೋ ಸಾಹೇಬನೇ ಯಿದು ನಿನ್ನ ಘನತೆಗೆ ತಕ್ಕುದಲ್ಲ” ಯಂದು ಬಹಿರಂಗ ಭಾಷಣ ಮಾಡಿದನು. ಸೊಂತ ಬಾಯಾರು ಬೊಬ್ಬಿಲಿ ನಾಗಿರೆಡ್ಡಿಗೆ ಜಯಕಾರ ಹಾಕುತ್ತ.. ಕುಂಪಣಿ ಸರಕಾರಕ ದಿಕ್ಕಾರ ಹಾಕುತ.. ಸದರಿ ಪಟ್ಟಣ ಪ್ರಾಂತದ ಆಡಳಿತಾಧಿಕಾರಿಯಾದ ಕೋವನನ್ನು ಭಟ್ಟಿಯಾಗಿ ನಾಗಿರೆಡ್ಡಿಯನ್ನು ಗುರವಪೂರುವಕವಾಗಿ ಸರಕಾರ ಬಿಡುಗಡೆ ಮಾಡಬೇಕೆಂದೂ.. ನೊಂದಿರುವ ಪ್ರಜೆಗಳ ಕ್ಷಮಾಪಣೆ ಕೇಳಬೇಕೆಂದೂ.. ಮನವಿ ಸಲ್ಲಿಸಿದನು. ಅದಕಿದ್ದು ಕೋವನು “ಬ್ರಿಟಿಷವರಾಗಿ ಮತ್ತು ಸರಕಾರದ ಪಗಾರ ತಿಂದವರಾಗಿ ನೀವೇ....” ಯಂದು ಮುಂತಾಗಿ ಕೇಳಿದಕೆ... ಅವರೀರರ ನಡುವೆ