ಪುಟ:ಅರಮನೆ.pdf/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೧೫ ತಮ್ಮ ತಮ್ಮ ಪಾಲಿನ ಕೆಲಸ ಬೊಗಸೆಗಳನ್ನು ಮಾಡುತಲಿದ್ದರು. ದ್ವಾಪರಯುಗದಲ್ಲಿ ಭೀಮಸೇನನಿಂದ ಸ್ಥಾಪಿತಗೊಂಡಿರುವಂಥ ಭೀಮಲಿಂಗೇಶ್ವರಸ್ವಾಮಿಯ ರಥೋತ್ಸವ ಯಾವ ಕಾರಣಕ್ಕೂ ನಿಂತುದುದಿಲ್ಲ. ಯಂಥೆಂಥೋ ಪವಾಡ ತೋರಿಸಿರುವ ತಮ್ಮ ಸ್ವಾಮಿ ನಾಗಿರೆಡ್ಡಿ ಯಿಷಯದಲ್ಲಿ ತಾಚ್ಚಾರ ಮಾಡಲಾರನು. ತನ್ನ ಮಗನ ಯೋಗಕ್ಷೇಮ ನೋಡಿಕೊಳ್ಳುವುದು ಪಿತ್ರುಸ್ಥಾನದಲ್ಲಿರುವಾತನ ಕರವ್ಯವು..... ಅತ್ತ ಹರಪನಹಳ್ಳಿ ಪ್ರಾಂತದೊಳಗ ಕೀರಿಸೇಷ ಸೋಮಶೇಖರ ನಾಯಕ ಫವುಜು ಭರಮನ ಗವುಡನ ನೇತ್ರುತ್ವದಲ್ಲಿ ಭಲೇ ಕ್ರಿಯಾಶೀಲವಾಗಿತ್ತು. ಕಮಾಂಡರು ಸ್ಕೂವರನು ಆ ಸೊಯಂ ಘೋಷಿತ ಪವುಜಿನ ಮ್ಯಾಲ ನಿಗಾ ಯಿಟ್ಟೇ ಹರಪನಹಳ್ಳಿ ವಳಗ ಮೊಕ್ಕಾಂ ಹೂಡಿದ್ದನು. ಅವನ ಗೂಢಾಚಾರರು ವಂದಲ್ಲಾವಂದು ಸುದ್ದಿಯನ್ನು ತಂದು ಅವಯ್ಯನ ಕೆಂಗೂದಲ ಕಿವಿಯೊಳಗ ವುಸುರುತಲಿದ್ದರು. ಬಿಟ್ಟುದ ಬಿಟ್ಟು ಬಂದು ತನ್ನೆದುರು ಹಾಜರಾಗುವಂತೆ ಗವುಡಗೆ ಬುಲಾವು ಕಳಿಸಿದನು. ಮ್ಯಾಗಳಗೇರಿಯನ್ನು ಅದೇ ಯಿನ್ನು ಕಬ್ಬಾ ಮಾಡಿಕೊಂಡು ಅದರ ವುಸ್ತುವಾರಿಯನ್ನು ಹಂಪರಸಪ್ಪಯ್ಯನ ಸಲಹೆ ಮೇರೆಗೆ ದೂದಯ್ಯನಿಗೆ ವಹಿಸಿ ಗ್ರಾಮದ ಹಿರಿಯ ವತನದಾರ ಬಲವಂತಪ್ಪನ ಮನೆಯೊಳಗೆ ಮಿಶ್ರಾಂತಿ ಪಡಕೊಳ್ಳುತಲಿದ್ದ ಭರಮನಗವುಡನು ಯೀಗ ತನಗೆ ಪುರುಸೊತ್ತಿಲ್ಲ ಯಂದು ಹೇಳಿ ಕಳುವಿದ್ದನು. ಮುಂದುರುಗಿ, ಡಂಬಳ, ಕೊಂಬಳಿ, ಕುರವತ್ತಿ ಮೊದಲಾದ ಕಡೇಲೆಲ್ಲ ಕುಂಪಣಿ ಸರಕಾರದ ಯಿರುದ್ದದ ದಂಗೆಗಳನ್ನು ನಿಲ್ದಾಕ್ಷಿಣ್ಯವಾಗಿ, ಕ್ರೂರವಾಗಿ ಅಡಗಿಸಿ ಕುಖ್ಯಾತನಾಗಿದ್ದ ಸ್ಕೂವರನಾದರೋ ಯದುರಾಳಿಗಳ ಮೂಗು ಹಿಡಿದು ಬಾಯಿ ತೆರೆಯುವಂತೆ ಮಾಡಬಲ್ಲ ಚಾಣಾಕ್ಷನು.. ಗವುಡನ ಜವಾಬನ್ನು ವುದ್ದಟತನವೆಂದೇ ಭಾವಿಸಿದನು. ಪುಣೆಯ ಕಾಳಗದಲ್ಲಿ ಕುಂಪಣಿ ಸರಕಾರದ ಪರ ಸಂಚು ರೂಪಿಸಿದ್ದಂಥ, ಬೊಜ್ಞಾನೂ, ಸೂರ ಸಿಪಾಯಿಯು ಆಗಿದ್ದ ದಂಡೋಜಿ ನೇತ್ರುತ್ವದಲ್ಲಿ ಹತ್ತು ಮಂದಿ ಸಿಪಾಯಿಗಳನ್ನು ಬಂಧಿಸಿ ತರಲೆಂದು ಕಳುವಿದನು. ಅಷ್ಟು ಹೊತ್ತಿಗೆ ಮಾಗಳಗೇರಿಯಿಂದ ಕಂಚಿಕೇರಿಗೆ ಮೊಕ್ಕಾಂ ಬದಲಾಯಿಸಿದ್ದ ಗವುಡನು ದಂಡೋಜಿ ಮತ್ತವನ ಸಿಪಾಯಿಗಳನ್ನು ಪ್ರೀತಿಯಿಂದ ಬರಮಾಡಿಕೊಂಡನಲ್ಲದೆ ಹೋಳಿಗೆ ಮೊಟ ಮಾಡಿಸಿ ಮಿಶ್ರಾಂತಿಗೆ ಬಿಡದಿ ಯೇರುಪಾಟು ಮಾಡಿದನು. ಆತಿಥ್ಯದಿಂದ ಅಲ್ಲ ಬಲ ಕಳಕೊಂಡಿದ್ದ ದಂಡೋಜಿಯು ಸ್ಕೂವರ್