ಪುಟ:ಅರಮನೆ.pdf/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೮ ಅರಮನೆ ಬಲು ವನ್ಯಾಲಕೇರಿರುವುದು.. ಆರುತಲೆ ಬೆಳಕಿನೊಳಗ ಅಂತಾನವಾಗಲಿರುವುದು.. ಅಲ್ಲೊಂದು ಕಾಗೆಂರು ಯಿ೦ಪಾಗಿ ಕೂಗುತಲಿರುವುದು.. ಯಿಲ್ಲೊಂದು ಕೋಗಿಲೆ ಕಲ್ಮಶವಾಗಿ ಅರಚುತಲಿರುವುದು.. ಯಲ್ಲೋ ಎಂದು ನಾಯಿ ಗವ್ವನೆ ಮಾಡುತಲಿರುವುದು, ಅಲ್ಲೆಲ್ಲೋ ಬೆಳಕು ಕೆ೦ಪೆರಡಾಣೆ ಗಾತುರ ದ ವಡಣದ ಗುಡುಲೆಳ ಗಿ೦ದ ಯಿಣುಕುತಲಿರುವುದು..... ಬಾತರೂಮಿಗೆ ಹೋಗಿ ಮನಸೋಯಿಚ್ಚೆ ಸಾಣಾನ ಮಾಡಿಯೇ ಮಾಡಿದ.. ನೀರು ಸಂಕಟಪಡುತ್ತಲೇ ಅವಯ್ಯನ ಸರೀರದ ಮಾಲ ಹತ್ತಿ ಯಿಳಿದು ಹರಿಯಿತು.. ಅದೂ ದಣಿಯಿತು.. ತಾನು ದಣಿದನು.. ದಿರಿಸುಗಳೆದುರು ನಿಂತುಕೊಂಡ ಬೆತ್ತಲೆಯಾಗಿ.. ವಂದಲ್ಲ ಹತ್ತು ಬಗೆಯ ದಿರಿಸುಗಳು.. ಅಂಗಲಾಚುತ್ತಿರುವ ದಿರಿಸುಗಳು... ಮುಟ್ಟಿ ಮಯ್ಲಿಗಿ ಮಾಡಬೇಡ ಯಂದು ದಯನಾಸ ಪಡುತ್ತಿರುವ ದಿರಿಸುಗಳು.. ಅದನ್ನು ತೊಟ್ಟುಕೊಂಡು ಬಿಸಾಡಿದ.. ಯಿದನು ತೊಟ್ಟುಕೊಂಡು ಬಿಸಾಡಿದ. ಮನೆಲ್ಲವನ್ನು ತೊಟ್ಟುಕೊಂಡು ಬಿಸಾಡಿದ.. ನಗ್ನನಾಗಿಯೇ ರೆಡ್ಡಿ ಯದುರು ಕಾಣಿಸಿಕೊಂಡು ಬಿಡಬೇಕೆಂದೆನಿಸಿತು ವಂದು ಛಣ..ಛೇ... ಛೇ.. ಆ ಯಲ್ಲ ದಿರಿಸುಗಳ ನಡುವೆ.. ಹದಿನಾರು ಮೊಳದುದ್ದದ ದೋತರ.. ಬಾದಾಮಿ ಬಣ್ಣದ ನಿಲುವಂಗಿ.. ಆರು ಮೊಳದುದ್ದದ ಪೇಟ ಮೋಡೋಡಿ ಬಂದು ಮೂಡಿತು. ಗೋಚರವಾಯಿತು.. ನಿನ್ನೊಳಗಿನ ಕೇವಲ ಸೈಲಟನ್ನಿಗೆ ನನ್ನನ್ಯಾಕ ತೊಡಿಸಬಾರದೆಂದು ಪೀಡಿಸಲಾರಂಭಿಸಿತು. ಅರೆ! ಯಿದು ರೆಡ್ಡಿಂ ವುಡುಪಾಗಿರುವುದಲ್ಲಾ... ಯಲ್ಲೋ ಯಿದ್ದದ್ದು ಯಿಲ್ಲಿಂಗ ಬಂತು..? ಯಾರು ತಂದಿಟ್ಟರು ಯಿದನಿಲ್ಲಿ? ಮುಟ್ಟಿದರ ತಾನೆಲ್ಲಿ ಸುಟ್ಟುಕರಕಿಟ್ಟು ಹೋಗುವೆನೋ? ಅದಾವ ಸಂಚು ಅಡಗಿರಬವುದು ಯಿದರೊಳಗ..? ತನಗ್ಯಾವ ಪರೀಕ್ಷೆ ಕಾದಿರುವುದೋ..? ಅದರ ಸನೀಕ ಹೋಗುವುದು ದೂರ ಸರಿಯುವುದು ಮಾಡಿದ ಮೂರು ನಾಲಕು ಸಲ.. ಬ್ಯಾಡ ಅಂದರೂ ಅದು ಬಿಡಬೇಕಲ್ಲ! ಸೂಜಿಗಲ್ಲಿನಂತೆ ಸೆಳೆಯಿತು.. ಕುಟಿಲೋಪಾಯದಿಂದ ಹೆಡೆ ಚಾಚಿತು.. ಅದರ ನೊಸಲೊಳಗ ರತುನ ಪ್ರಾಯದ ರಾಜಕಾರಣ ಥಳಥಳ ಹೊಳೆಯಿತು.. ಯೇನೇ ಆಗಲಿ.. ಬಂದದ್ದು ಬರಲಿ.. ಬಹುರೂಪಿ ಕಲೆಯನ್ನು ಕರಗತ ಮಾಡಿಕೊಂಡಿದ್ದ ಆ ಸರವಂಟನು ಮನದೊಳಗ ಯಲ್ಲೋ ಮಸುಕು ಮಸುಕಾಗಿ ಯಿರುವ