ಪುಟ:ಅರಮನೆ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಗುಡಿ ಹಿಂದಲ ಮೂಳೆ ಮೋಬಯ್ಯ ಹಂಗೇ ವಂದು ಜೋಂಪು ನಿದ್ದೆ ಹೋದನು. ನಿದ್ದೆ ಹೋದೊಡನೆ ಕಂಡ ಕಣಸಲ್ಲಿ ಹೆಂಗೆಂಗೊ ಆಗತೊಡಗಿತು. ಮೂಡ ಬಾರದ ತರಾವರಿ ಚಿತ್ರಯಿಚಿತ್ರಗಳು ಮೂಡ ತೊಡಗಿರುವಂತೆ.. ಕಾಣಬಾರದ ತರಾವರಿ ಮಂದಿ ಕಾಣತೊಡಗಿರುವಂತೆ.. ಮನಯಂಬುವ ಯಿಸ್ತಾರವಾದ ಜಗುಲಿಯ ಮ್ಯಾಲ ಗುಂಪು ಗುಂಪಾಗಿ ಕೂತು ಅನುಭಾವದ ನೆಲೆಯಲ್ಲಿ ಮಾತನಾಡಲಾರಂಭಿಸಿರುವಂತೆ.. ತನ್ನ ದೇಹ ಯಂಭೋ ದೇಹವು ಗಿರಿಗುಡ್ಡ ಗವ್ವರಗಳಲ್ಲಿ ತಾನೇ ತಾನಾಗಿ ಸುಳಿದಾಡುತ್ತಿರುವಂತೆ.. ಹೆಜ್ಜೆಗೊಂದೊಂದರಂತೆ ಯದುರಾದ ಗಂಟೆ, ಜಾಗಟೆಗಳನ ಭಾರಿಸುತ್ತಿರುವಂತ.. ಶಂಖ ಕಹಳೆ ಊದುತ್ತಿರುವಂತೆ.. ತಾನು ಬಿಡುತ್ತಿರುವ ವಂದೊಂದು ವುಸುರು ಬಿರುಗಾಳಿ ಸುಂಟರುಗಾಳಿಗಳಾಗಿ ಸಂಚರಿಸುತ್ತಿರುವಂತೆ.. ತಾನು ಯಿಡುತ್ತಿರುವ ವಂದೊಂದು ಹೆಜ್ಜೆಗೆ ಭೂಮಾಯಿ ಗಡಗಡ ನಡುಗುತ್ತಿರುವಂತ.. ಕಾಗೆ, ಗುಬ್ಬಿ ಹದ್ದು, ರಣಹದ್ದುಗಳಿವೇ ಮೊದಲಾದ ಪಕ್ಷಿಗಳು ಆಕಾಸದ ತುಂಬೆಲ್ಲ ಅಂಡಾವರನವಾಗಿರುವಂತೆ.. ಹುಲಿ, ಸಿಮ್ಮ ಕರಡಿ, ಕಿರುಬಗಳಿವೇ ಮೊದಲಾದ ಮುಗಗಳು ದಿಕ್ಕಾಪಾಲಾಗಿ ನೋಡುತ್ತಿರುವಂತ.. ತಾನು ತನ್ನ ಸರೀರದಿಂದ ಹೊರಬಿದ್ದು ಬಕ ಬೋರಲಾದಂತೆ. ದಿಗ್ಗನೆದ್ದು ತನ್ನ ಸರೀರದ ಲಗಾಮವನ್ನು ಹಿಡಿದೆಳೆಯುವ ಪ್ರಯತ್ನ ಮಾಡುತ್ತಿರುವಂತೆ ಭಾಸವಾಗತೊಡಗಿತು.... ಕೇಳಲು ನೋಡಿದ, ನೋಡಲು ನೋಡಿದ, ಮಾತಾಡಲು ನೋಡಿದ, ಆದರದು ತನ್ನ ಮಾತು ಕೇಳುತ್ತಿಲ್ಲಯಂದುಕೊಳ್ಳುತ್ತಾನೆ. ಕಣಸೊಳಗೆ ಯಿದ್ದ ಮೋಬಯ್ಯನು, ಅವನ ತೊದಲುವಿಕೆ, ಕನವರಿಕೆಗಳು ವಂದಾ... ಯರಡಾ ಸಿವನೇs.... - ತನ್ನ ಕಣ್ಣುಗಳು ತನ್ನ ಸ್ವಾಧೀನದಲ್ಲಿಲ್ಲವಲ್ಲಾಯ್.. ತನ್ನ ಕಿವಿಗಳು ತನ್ನ ಸ್ವಾಧೀನದಲ್ಲಿಲ್ಲ ವಲ್ಲಾ... ತನ್ನ ಬಾಯಿ ತನ್ನ ಸ್ವಾಧೀನದಲ್ಲಿಲ್ಲವಲ್ಲಾ... ತನ್ನ ಸರೀರ ಯಂಬುದು ತನ್ನ ಸ್ವಾಧೀನದಲ್ಲಿಲ್ಲವಲ್ಲಾಯ್.. ತಾನು ಯೇಸು ದಿನಮಾನದಿಂದ ಬದುಕುತ್ತಿದ್ದ ಬದುಕು ಗುರುತು ಸಿಗದಂಗಾಗಯ್ತಲ್ಲಾಂಯ್.. ಯಾದೋ ವಂದು ಅದ್ರುಸ್ಸ ಸಗುತಿ ತನ್ನನ್ನು ತನ್ನ ಸರೀರದಿಂದ ಹೊರದೊಬ್ಬಿದಂಗಾಗಯ್ತಲ್ಲಾಯ್... ಯಿದೆಂಥಾ ಕಣಸಿದ್ದೀತಪ್ಪಾ ಸಿವನೇs.... ತಾನು ತನ್ನ ಸರೀರವನ್ನು ಕಣ ಸೊಳಗಾದರೂ ನೋಡಿಕೊಳ್ಳುವಂಗಾಯಿತಲ್ಲಾ. ಆ ಸರೀರವು ತನ್ನದೆಂದು ನಂಬುವುದೋ,