ಪುಟ:ಅರಮನೆ.pdf/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೧೯ ಬಂಕಿಂಗುಹ್ಯಾಮು ಅರಮನೆಯನ್ನು ಧ್ಯಾನಿಸುತ್ತ.. ಅದರ ಮ್ಯಾಲ ಭಾರ ಹಾಕುತ್ತ ನಖಶಿಖಾಂತ ಧಾರಣ ಮಾಡಿಕೊಂಡನು. ಅಷ್ಟು ಹೊತ್ತಿಗಾಗಲೆ ಬೆಳಕಿನ ಹಳ್ಳ ವಳ ಹೊರಗೆಲ್ಲ ಜುಳುಜುಳು ಹರಿಯಲಾರಂಭಿಸಿತ್ತು. ಕವಾಯತಿನ ಸದ್ದು ಅಂಬೆಗಾಲಿಡ ಲಾರಂಭಿಸಿತ್ತು ವಳಗೆಲ್ಲ.. ನಿಲುಗನ್ನಡಿ ಬಯಲಾಟದ ಸಾರಥಿಯಂತೆ ಬಂದೆದುರು ನಿಂತು (ಯಲಮ್ ನೀನಾರು? ನಿನ್ನ ನಾಮಾಂಕಿತ ಯೇನು?” ಯಂದು ಪ್ರಶ್ನೆ ಹಾಕಿತು. ಅದರೊಳಗ ನಖಶಿಖಾಂತ ಯಿಣುಕಿದ. ತಾನೀಗ ಕಲೆಟ್ಟರು ಸಾಹೇಬನೋ ಅಥವಾ... ಅಲ್ಲ... ಅಲ್ಲ... ಅಲ್ಲವೇ ಅಲ್ಲ. ತಾನೀಗ ಬೊಬ್ಬಿಲಿ ನಾಗಿರೆಡ್ಡಿಯ ಪಡಿಯಚ್ಚು.. ಅಲ್ಲ ಅಲ್ಲ... ಅಲ್ಲವೇ ಅಲ್ಲ... ತಾನೀಗ ನಾಗಿರೆಡ್ಡಿಯ ವೇಷದಲ್ಲಿರುವ ಕೊಲೆಗಡುಕನು.. ನಯವಂಚಕನು.. ತನ್ನನ್ನೇ ತಾನು ವಧಾಸ್ಥಾನಕ್ಕೆ... ಕರೆಗಂಟೆ ಭಾರಿಸಿದ... ಯಾರಲ್ಲಿ ಯಂದು ಗುಟುರು ಹಾಕಿದ.. ಪತ್ತಿಕೊಂಡದಲ್ಲಿ ತನ್ನನ್ನು ಯಂಜಲೆಲೆಗೆ ಹೋಲಿಕೆ ಮಾಡಿದ ಯಲ್ಲಮ್ಮಾಯಿ ಯಂಬ ತಿಪ್ಪೆಗಾತುರದ ಮುಪ್ಪಾನು ಮುದುಕಿ ಯದೆಯೊಳಗಿಂದ ಮೂಡಿ ಬಂದು ಪಕ ಪಕ ನಗಾಡುತ್ತಿರುವಂತೆ ಭಾಸವಾಯಿತು.. ಹು.. ತಾನು ಯಂಜಲೆಲೆ. ಯಂಜಲೆಲೆಯೊಳಗ ಅಳಿದುಳಿದಿರುವ ಅಗುಳು.. ಯೇನೀಗ ಬಾಗಿಲು ಕಿರುಗುಟ್ಟಿ ತೆರಕಂತು.... ಸೆರೆಮನೆಯ ಅಧಿಕಾರಿ ಮೆಕೆನೋ.. ಯಿಶೇಷ ನ್ಯಾಯಾಲಯ ಶಾಬ್ಲಿಕ ನಕ್ಷೆಯನ್ನು ನಾಲಗೆ ಮ್ಯಾಲ ಯಿಟುಕೊಂಡಿದ್ದ ನ್ಯಾಯಾಧೀಶರಾದ ಹ್ಯಾಮು, ಮಾಕು, ಕ್ಯಾಂಪಬೆಲ್ಲು.. ಹೆಮೊದಲಾದವರು ಯಿಣುಕಿ ನೋಡಿ “ಅರೆ!” ಯಂದು ವುದ್ದಾರ ತೆಗೆದರು. ಮರಣದಂಡನೆಗೆ ವಳಗಾಗಲಿರುವ ಯ್ಯಕ್ತಿ 'ಮೋ ಮಮ್ ಗಾಡ್' ಯಂದು ಮೂಗಿನ ಮ್ಯಾಲ ಬೊಟ್ಟಿಟ್ಟುಕೊಂಡರು.. - ಮುಗುಳುನಗೆ ಮೂಲಕ ತಾನು ಥಾಮಸುಮನೋ ಸಾಹೇಬನೆಂದು ಗುರುತು ಮಾಡಿದ ಕಲೆಟ್ಟರನು.. ಸೆರೆಮನೆ ವಳಗೆ ಯಿಶೇಷ ನ್ಯಾಯಾಲಯ ಸ್ಥಾಪನೆಗೆ ಹುಕುಂ ಮಾಡಿದ್ದು ತಡಾ ಆಗಲಿಲ್ಲ. ಅದಕ ಗೋಲ್ಡಿಂಗ್ ಹ್ಯಾಮರವರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿದ್ದೂ ತಡ ಆಗಲಿಲ್ಲ. ತನಗ ಧಿಕ್ಕಾರ ಕೂಗಲಕ ಯಂದು ಗುಂತಕಲ್ಲು ಸೀಮೆಕಡೇಲಿಂದ ಬಂದಿದ್ದ ಮಂದಿಯನ್ನುದ್ದೇಶಿಸಿ “ನೋಡಿರಯ್ಯಾ. ನನ್ನೊಳಗ ನಿಮ್ಮ ನಾಗಿರೆಡ್ಡಿ ಜೀವಂತ ಅದಾನ.. ನನ್ನ ನೋಡಿ ಸಮಾಧಾನ