ಪುಟ:ಅರಮನೆ.pdf/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೦ ಅರಮನೆ ಪಟುಕೊಳ್ಳಿ.. ಆತ ಯೇನು ಮಾಡುತಲಿದ್ದನೋ.. ಅದನೇ ಕಾಯಿದೆ ಸೀರ ನಾನೇ ಮಾಡುತೇನಿ.” ಯಂದು ಮುಂತಾಗಿ ಹೇಳಿ ಪರವಸಗೊಳಿಸಿದ್ದು ತಡ ಆಗಲಿಲ್ಲ... ಅಲ್ಲಿಂದ ಆತನು ಯರಡೂ ಪಾತ್ರಗಳನ ವಟ್ಟಿಗೆ ಅಭಿನಯಿಸುತ್ತ ಮುಗುತಾಯದ ಹಂತದಲ್ಲಿದ್ದ ಕೇಂದ್ರಕಾರಾಗ್ರಹವನ್ನು ಪ್ರವೇಶ ಮಾಡಿದನು. ಯಲ್ಲಿ ನನ್ನ ಸಹೋದರ..? ಯಲ್ಲಿ ಬಡವರ ಬಂಧು..? ಯಲ್ಲಿ ರೆಡ್ಡಿ ಲೋ ರೆಡ್ಡಿ, ಬಂಗಾರದ ಕಡ್ಡಿ? ಯಂದು ಹಂಬಲಿಕೆಯನ್ನು ಅಭಿನಯಿಸುತ್ತ ಸೀದ ಮೂರು ಮೊಳ ಅಗಲ ಆರು ಮೊಳ ವುದ್ದಯಿದ್ದ ಕೋಣೆ ತಲುಪಿದನು. ತನ್ನ ಕಣ್ಣೆಳಗಿನ ನೀರ ಮೂಲಕ ರೆಡ್ಡಿಂಯ ಬದ್ದಬ್ರುಕುಟಿಯನ್ನು ಸಣ್ಣ ಮಾಡುತ “ಸಹೋದರ, ಯೇನಿದು ನಿ ಅವಸ್ಥೆಯು.. ನೀನು ಅಚಂದ್ರಾರವಾಗಿ ನಾಯಕನಾಗಿ ವುಳಿಯಬೇಕೆಂದೇ....” ಯಂದು ಹೇಳುತ್ತಾ ಹೇಳುತ್ತಾ ಹೋಗಿ ನಾಗಿರೆಡ್ಡಿಯನ್ನು ಆಲಿಂಗಿಸಿ ಕೊಂಡನಂಬಲ್ಲಿಗೆ ಸಿವಸಂಕರ ಮಾದೇವಃs.... ಅತ್ತ ಕೂಡ್ಲಿಗಿ ಪಟ್ಟಣದೊಳಗ.... ಮದ್ಯಾಣದ ಸೂರಾಮ ಮೂಡಣ ದಿಕ್ಕಿನಲ್ಲಿ ಮುಡುಮುಡನೆ ಮೂಡುತ್ತಲೇ ಸೆಕೆಯ ಬಿತ್ತಾವಣೆ ಮಾಡತೊಡಗಿದ. ಯಾವತ್ತು ಮಂದಿ ಯೇಳುಯೇಳುತ್ತಲೆ ಜಲಜಲನೆ ಬೆವೆಯಲಾರಂಭಿಸಿದರು.. ಬೀಸಣಿಕೆಗಳಿಗಾಗಿ ಹಂಬಲಿಸತೊಡಗಿದರು.. ಸುಂಟರುಗಾಳಿಗಳು ಸುಯ್ಯಂತ ಸುತ್ತಲಾರಂಭಿಸಿದ್ದೇನು? ಭರಂತ ಬಿರುಗಾಳಿಗಳು ಬೀಸಲಾರಂಭಿಸಿದ್ದೇನು? ಮಂದಿಯಂಭೋ ಮಂದಿ ಮನೆ ವಳಗ ಯಿರಲಿಕ್ಕಾಗದೆ.. ಹೊರಗ ಯಿರಲಿಕಾಗದೆ.. ಲಿಬಿಲಿಬಿ ವದ್ದಾಡಲಾರಂಭಿಸಿದ್ದೇನು? ನೀರೊಳಗ ನೀರುತನ ಯಿಲ್ಲದಂಗಾಗಿ.. ಆಹಾರದೊಳಗ ಆಹಾರತನ ಯಿಲ್ಲದಂಗಾಗಿ ಹಸಿವು ಶ್ರುಷೆಗಳಿಂದ ತತ್ತರಿಸಲಾರಂಭಿಸಿದ್ದೇನು? ಹೆಂಡತಿಯೊಳಗ ಹೆಂಡತಿತನ ಯಿಲ್ಲದಂಗಾಗಿ.. ಗಂಡನೊಳಗೆ ಗಂಡನ ತನ ಯಿಲ್ಲದಂಗಾಗಿ.. ದಾಂಪತ್ಯಗಳೊಳಗ ತರಾವರಿ ಬಿರುಕುಗಳು ನಿಚ್ಚಳವಾಗಿ ಕಾಣಿಸಿಕೊಂಡಿದ್ದೇನು? ಕೂಸು ಕಂದಮ್ಮಗಳು ಅವುಡುಗಚ್ಚಿ ತಮ್ಮ ತಮ್ಮ ಮೊಲೆಗುಂಡಿಗಳನ್ನು ಕಚ್ಚಿದ್ದಕ್ಕೆ ತಾಯಂದಿರು ಹಾ...... ಯಂದು ಮುದ್ರಿಸಿದ್ದೇನು? ಮನೆ ಮುತ್ತಲಲ್ಲಿದ್ದ ಹಿತ್ತಲಲ್ಲಿದ್ದ ಗಿಡಗಂಟೆಗಳು ಬಾಡಲಾರಂಭಿಸಿದ್ದೇನು? ಅರಳಿದೊಡನೆ ಹುಲ್ಲುಗಳು ಪಕಳೆಗಳುದುರಿ ಬೋಡಮ್ಮಗಳಾದುದೇನು? ವಟ್ಟಿನಲ್ಲಿ ಯಿಡೀ ಪಟ್ಟಣವು ನಿಂತ ನಿಲುವಿಕಲೆ, ಕುಂತ ಕುಲುವಿಕಲೆ ಸುಖ ನೆಮ್ಮದಿಯಿಲ್ಲದ ಬಿಕೋ ಅನ್ನಲಾರಂಭಿಸಿತು. ಯಾಕ ಹಿಂಗಾತು? ನಿನ್ನೆ ರಾತಿರಿ ಮಟ ಪಾಡಿತ್ತಲ್ಲ.