ಪುಟ:ಅರಮನೆ.pdf/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೨೧ ಯಾದಾರ ಗಾಳಿ ಸವುಡೇನಾರ ತಮ್ಮ ಪಟ್ಟಣದೊಳಗ ಬಿಡಾರ ಹೂಡಯ್ಯಾ ಹೆಂಗೆ? ಹೂಡಿದ್ದರೆ ಅದನು ತಮಣಿ ಮಾಡುವ ಬಗೆ ಯೇನು? ಯಂದು ಮುಂತಾಗಿ ಯಸನ ಮಾಡುತ ಹಿರೀಕ ಮಂದಿ ಅಗ್ಗಲು ಮಗ್ಗುಲಿದ್ದ ಅಗ್ರಹಾರಗಳಿಗೆ ಹೋಗಿ ದುಪ್ಪಟ್ಟು ದಕ್ಷಿಣ ಚಾಜಯಿಟ್ಟು ಪಟ್ಟಣಕ್ಕೆ ವದಗಿರುವ ಪಜೀತಿಯನ್ನು ಹೇಳಿಕೊಂಡರು. ತಾರೆ ಕರಣ ಯೋಗಗಳಲ್ಲಿ ನಿಷ್ಣಾತರಾದ ಜೋತಿಷಿಗಳು ಹೊತ್ತಿಗೆ ತೆಗೆದು ನೋಡಲಾಗಿ, ಕವಡೆ ಚೆಲ್ಲಿ ಪರಿಸೀಲನ ಮಾಡಲಾಗಿ, ಪಟ್ಟಣದ ವಾಸ್ತುವನ್ನು ಕಣ್ಣಳತೆಗೆ ಯಳಕೊಂಡು ತತ್ತೆ ಮಾಡಲಾಗಿ ಸುಕ್ರನು ತನ್ನ ಜಾಗ ಖಾಲಿ ಮಾಡಿರುವ ಸಂಗತಿ ಬೆಳಕಿಗೆ ಬಂತು. ನವಗ್ರಹ ಪೂಜೆ ಮಾಡಿದರು. ಸಂಯವರಾದವರು ಸ೦ಬುಲಿಂಗನ ರೈತ ಮಾಡಬೇಕೆಂದೂ, ವಯಷ್ಣವರಾದವರು ಸತ್ಯನಾರಾಯಣ ರೈತ ಮಾಡಬೇಕೆಂದೂ, ಯರಡೂ ಅಲ್ಲದಿದ್ದವರು ದಾನ, ಧರುಮ ಮಾಡಬೇಕೆಂದೂ ಕರೆಕೊಟ್ಟರು.. ಯೀ ಯಲ್ಲಾ ಸಾಂತಿ ಪ್ರಕ್ರಿಯೆಗಳು ಅವರವರ ಯೋಗ್ಯತಾನುಸಾರ ಸಕ್ರಮವಾಗಿ ನಡೆಯಲಾರಂಭಿಸಿದವರಾದರೂ ತಿಕ್ಕಡಿ ಕಡಿಮೆಯಾಗಲಿಲ್ಲ.. ಯೇನಿದ್ದೀತು ಯಾತಕಿದ್ದೀತು ಯಂದು ಮುಂತಾಗಿ ಸಿವನೇ... ತಮಗೆ ಯತ್ತತ್ತಲಾಗೋ ಆದಂಗ ಆಗತಯ್ಕೆ ಯಂದು ನರಳುತಲಿದ್ದ ಯಿರಹಿಗಳ ಪಯ್ಕೆ ಮೋಲ್ಡನೂ, ವಂಕದಾರಿ ಗೋಯಿಂದಯ್ಯ ಸ್ನೇಷಿ«ಗಳ ಮೇಕಮಾತ್ರಪುತ್ರನೂ, ನಿನ್ನೆ ಮೊನ್ನೆ ಯವ್ವನದ ಸೀಮಂಯೊಳಗ ಯಡಗಾಲನ್ನಿರಿಸಿದ್ದಂಥವನೂ ಆದ ಸುಬ್ಬರಮಣ್ಯ ವುರುಫ್ ಸುಬ್ಬಣ್ಣನು ಸುಕ್ರನು ಫಲಾನ ಯಿಂಥವರೊಂದಿಗೆ ಹೋಗಿರುವನೆಂದು ಪತ್ತೆ ಮಾಡಿ ಕುತಕ್ರುತ್ಯನಾದನು. ತನ್ನ ತಲೆ ಯಂಬ ಗುಂಡಾಲೊಳಗ ಮೇದಸ್ಸು ತುಳುಕಾಡುತಲಿತ್ತಲ್ಲ ಅದಕ್ಕ.... ಆ ಜಿಡ್ಡಿನೊಳಗ ಮೆದುಳು ಪರಮ ಸುಖ ಅನುಭವಿಸುತಲಿತ್ತಲ್ಲ ಅದಕ್ಕ.. ಯಿರಹ ಗೊತಾರೂಢರಾಗಿದ್ದ ಯಿಯಿಧ ವಯೋಮಾನದ ಮಂದಿ ಹೋಗುವುದೋ? ಬ್ಯಾಡಮೋ ಯಂಬ ಅಂಜಿಕೆಯಿಂದಲೇ ಹೋದರು. ಫಲಾನ ಮನೆಯು ಸಾವುರ ಕಡೇಲಿಂದ ನಿಟ್ಟುಸುರು ಬಿಡುತಲಿತ್ತು.. ಯೇಕರಿಕೆ ದೇಕರಿಕೆ ನೋಡುತಲಿದ್ದ ಆಳು ಕಾಳು ಮಂದಿಯ ಮುಖ ಮಾರಿಗಳಂತೂ ಭಣಭಣಗುಟ್ಟುತಲಿದ್ದವು.. ಸಪ್ತ ಲೋಹದ ಪಂಜರದೊಳಗಿದ್ದ ಅರಗಿಳಿಯು ಮಾಡುತಲಿದ್ದ ಅರಣ್ಯರೋಧನ ಸದರಿ ಯರಡು ಭವಂತಿ ಮನೆಯ ಬಿಗುಮಾನಕ್ಕೆ