ಪುಟ:ಅರಮನೆ.pdf/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೨೩ ಗುರುತು ಹತ್ತಿತ್ತು. ವಂದು ಛಣ ಕಣ್ಣುಗಳಿಗೆ ಮಂಪರಡರಿದಂಗಾತು.. ಬೆಮತು ವುಟ್ಟ ಬಟ್ಟೆ ವದ್ದೆ ಆದಂಗಾತು.. ವರಮಾನ ಕಾಲ ಯಂಬ ತಿಪ್ಪೆ ಅಡಿಯಿಂದ ಭೂತಕಾಲ ಮಾಲಕೆದ್ದು ಬಂತು..ಹಾ.. ಅಗೋ.. ಅದೇ ಮಂಟಪ!.. ಹಾ... ಅಗೋ ಅದೇ ಪುಷ್ಕರಣಿ!.... ಹಾ... ಅಗೋ ಅಲ್ಲಿ ಎಂದು ದೇವದಾರು ರುಕ್ಷ ಯಿತ್ತಲ್ಲಾ.. ಪ್ಲಾ.. ಯಗೋ ಯಿಲ್ಲಿ.. ಮತ್ತಾವುದೋ ಯಿತ್ತಲ್ಲಾ! - “ಹಾಯ್.. ಯೇಣುಗೋಪಾಲಸ್ವಾಮಿ ಯೇನಿದಪ್ಪಾ ನಿನ್ನೀ ಮಾಯೇ.. ನೀನು ಕಣಸೂಳಗ ಮೂಡಿ ಅಪ್ಪಣೆ ಮಾಡಿದ್ದೇನು? ನೀನು ಯಾಕ ಹಾದಿ ತಪ್ಪಿಸಿದಿಯಪ್ಪಾ? ಯಿಲ್ಲಿಗೆ ಯಾಕ ಕರಕೊಂಡು ಬಂದು ಬಿಟ್ಟಿಯಪ್ಪಾ. ನೆನಪುಗಳ ಬೆರಣಿ ವಟ್ಟಿ ನನ್ನ ಸುಡಬೇಕಂತ ಮಾಡಿಯಾ ಹೆಂಗ?” ಯಂದನಕಂತ ತಾಯಕ್ಕ ಬಾಯಿಗಡ್ಡ ಸೀರೆ ಸೆರಗನ ಯಿಟ್ಟುಕೊಂಡಳು. ಹಾಯ್.. ಭೂತ ಭುಜಂಗನಾಥನೇ...! ಅಲ್ಲೇ ವಂದು ದರುಮ ಛತ್ರಯಿತ್ತಲ್ಲ.. ಅದರ ಮೇಲ್ವಿಚಾರಕ ದಯಾನಾಥ ಯಂಬಾತ ಯಿದ್ದನಲ್ಲ. ಆತ ಅದಾವ ಪ್ರೇರಣೆಯಿಂದಲೋ ಬಂದು ಅವರನ್ನು ಕರೆಯೊಯ್ದು ಛತ್ರದೊಳಗೆ ವಸತಿ ಯಿತರೆ ಸವುಲಭ್ಯಗಳನ್ನು ಕಲ್ಪಿಸಿಕೊಟ್ಟ “ಯಿದೇನವ್ವಾ.. ಯಿದಾವುದೋ ಗೊತ್ತು ಗುರಿಯಿಲ್ಲದ ದೇಸಕ್ಕೆ ಯಾಕ ಕರಕೊಂಡು ಬಂದಿ” ಯಂದು ಕೇಳುತ ಚಿನ್ನಾಸಾಮಿ ಆಕಳಿಸಿದಳು, “ಯೇನೋ ಮಗಳೇ ಆ ಭೂತ ಭುಜಂಗನಾಥಂದೇ” ಯಿದೆಲ್ಲ ಜವಾಬು ನೀಡುತಾ ತಾನೂ ಪ್ಲಾ.. ಯಂದಾಕಳಿಸಿದಳು ತಾಯ... ರಾತಿರಿ ವಂದು ಹೊತ್ತಿನಲ್ಲಿ.. ಯಿಷ್ಟಗಲ ಅಷ್ಟುದ್ದದ ವಂದು ಕಣಸು ಬಿತ್ತು.. ಅದರೊಳಗೆ ಸನ್ಯಾಸಿಯೋಲ್ವ ಯೀಶಾನ್ಯ ದಿಕ್ಕಿನಿಂದ ನಡಕೋತ ಬಂದ, ಬಡಿದು ತಾಯಕ್ಕನನ್ನು ಯಬ್ಬಿಸಿದ.. ಯಾರಿರಬವುದಂತ ತಿಬ್ಬಳಿಸಿ ನೋಡಿದಳು... ಅರೆ! ಭೂತಭುಜಂಗನಾಥರು.. ಯಷ್ಟು ವರುಷಂಗಳ ನಂತರ ತಾನಿವರನ್ನು ನೋಡುತ್ತಿರುವುದು..“ಸ್ವಾಮಿ...” ಅಡಿಗಳಿಗೆರಗಿದಳು. ನಾಥರು ತಬ್ಬಿಕೊಂಡರು. “ಪ್ರಿಯೇ.. ನಮಗೆ ನಮ್ಮ ಪ್ರೀತಿಯ ಕುವರಿಯನ್ನು ನೋಡುವ ಆಸೆ ಆಯಿತು ಅದಕ್ಕೆ....” ಅತ್ತ ಕುದುರೆಡವು ಪಟ್ಟಣದೊಳಗ ಆ ಸುದ್ದಿ. ಅಂದರೆ ಅದು ಸುದ್ದಿ ಕಿವಿಗೆ ಬಿದಲಾಗಾಯ್ತು ಮಾತ್ರುಮೂರಿಯಾದ ಜಗಲೂರೆವ್ವ ಎಂದು ಎಂದು ಅಗುಳು ಬಾನ ಮುಟ್ಟಲಿಲ್ಲ.. ವಂದಃ ಎಂದು ಸೆರೆಮುಕ್ತ ನೀರನ್ನು ಹಾಕ್ಕೊಂಡು