ಪುಟ:ಅರಮನೆ.pdf/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೨೫ ಯಂದು ತನ್ನ ವಬ್ಬೊಬ್ಬ ಪ್ರಿಯತಮೆಯಂದಿರ ಹೆಸರು ಹಿಡಿದು ಕೂಗುತ ಕಾಣಿಸಿಕೊಂಡ.. ಆಕೆ ಅವನತ್ತ ಮುಖ ಮಾಡಿ ಯಲಾಯ್ ಚಂದ್ರಾಮನೇ.. ನನ್ನ ಹಸುಗಂದಮ್ಮನಾದ ಸೂರನು ಜೀವನ್ಮರಣ ಹೋರಾಟವನ್ನು ಆರಂಭಿಸಲಿರುವನು ಆದ್ದರಿಂದ ನೀನು ಯಾವ ಕಾರಣಕ್ಕೂ ದುಂಡಗಾಗದಿರು' ಯಂದು ಆಗ್ಗೆ ಮಾಡಲು ಆ ಶಶಿಕರನು ಆಯ್ತಾ ಆಯಿತು...” ಯಂದು ಸಮ್ಮತಿಯನ್ನು ಸೂಚಿಸಿ ಬೆಳದಿಂಗಳ ಪಯ್ಕೆ ಮೂರು ಪಾವಲಿ ಭಾಗವನ್ನು ವುಪಸಮ್ಮರಿಸಿಕೊಂಡುಬಿಟ್ಟನು. ಯೀ ಪ್ರಕಾರವಾಗಿ ಯಲ್ಲಂದರಲ್ಲಿ ಕತ್ತಲಾವರಿಕೆಯಾಗಲು ಪಟ್ಟಣದ ತುಂಬೆಲ್ಲ ಬೆಳಕಡಗಿತು. ಕುಂತ ನೆಲವನ್ನೇ ಸೂನ್ಯಸಿವಾಸನವನ್ನಾಗಿ ಮಾಡಿಕೊಂಡು ಯಿಡೀ ಪಟ್ಟಣವನ್ನೇ ದುರುಗಟ್ಟಿ ನೋಡಿದ ಆ ಮಾಸಾದ್ವಿಯು ಕೂದಲನ್ನು ಹಾ... ಹಾ... ಅಂತ ಚೆಲ್ಲೊಡೆದು ಪ್ರಭಾವಳಿ ರಚನೆ ಮಾಡಿಕೊಂಡಳು... “ಯಮೋ ಸೂರನೇ” ಯಂದಾಕೆ ಕೂಗಿದೊಡನೆ.... ಪಟ್ಟಣದೊಳಗಿನ ಸಮಸ್ತ ಗಂಡಸರ ಯಡಗಣ್ಣು, ಹೆಂಗಸರ ಬಲಗಣ್ಣು ಕುಣಿಯಲಾರಂಭಿಸಿದ ವೆಂದ ಮ್ಯಾಲ, ವುಂಡ ಕೂಳು ವಡಲೊಳಗಿಂದ ತೊಳಸಿ ಗಂಟಲಿಗೆ ಬಂದಾಂಗಾಗತೊಡಗಿತೆಂದ ಮ್ಯಾಲ.. ಮೂಡೋ ಕಡೇಲೊಂದು, ಮುಣುಗೋ ಕಡೇಲೊಂದು ಕಡಗೋಲಿನಂಥ ಬಾಲದ ಚುಕ್ಕಿಗಳು ಮೂಡಿ ಕಡೇಲೊಂದು, ಮುಣುಗೋ ಕಡೇಲೊಂದು ಮೂಡಿ ಮರೆಯಾದವೆಂದ ಮಾಲ, ಸಕಲಿದ ಕುರುಚಲು ಕಾಡೊಳಗಿಂದ ತೋಳನರಿಗಳು ಮುಗುಲಿಗೆ ಮುಖ ಮಾಡಿ ಹೋಮ್ ಅಂತ ಹೂಳಿಡಲಾರಂಭಿಸಿದವೆಂದ ಮ್ಯಾಲ.. ಬಗೆಬಗೆ ರುಕ್ಷರಾಜಿಗಳಿಂದಲೂ, ಹರಿವ ಹಳ್ಳತೊರೆಗಳಿಂದಲೂ ಬಲು ಸೋಭಾಯ ಮಾನವಾಗಿದ್ದ ಬಯಲೊಳಗ ಸುರಸುಂದರ ಮಣಕಗಳ ನಡುವೆ ಸುರತ ಸಂಕಥಾಯಿನೋದದಿಂದ ಸೋಭನ ಪ್ರಸ್ತದಲ್ಲಿ ನಿರತನಾಗಿದ್ದ ಸೂರನ ಕುಂಡಲಗಳಿದ್ದ ಕಲ್ಲಗಳಿಗೆ ತಾಯಿಯ ಕೂಗು ಬರಸಿಡಿಲಿನಂತೆರಗಿತು. ಕೂಡಲೆ ತನ್ನ ಮೊಳದುದ್ದದ ಸಿಸ್ಕವನ್ನು ವುಪಸಮ್ಮರಿಸಿಕೊಂಡನು. ತನ್ನ ಡುಬ್ಬದ ಮ್ಯಾಲಿಂದ ಯಿಳಿದು ಯಿರಮಿಸಿಕೊಂಡುದಲ್ಲದೆ ನಖಸಿಖಾಂತ ಜಲಜಲನೆ ಬೆಮೆತ ತನ್ನ ಪ್ರಿಯತಮನನ್ನು ನೋಡಿ ಯಾಕುಂದೇ ತುಷಾರದ ಸರಸತಿಯು “ಯಾಕೆ ಪ್ರಿಯಾ ನಿನಗಾದ ಬ್ಯಾಸರಯೇನು?” ಯಂದು ಯಿಚಾರ ಮಾಡಲು ಅದಕಿದ್ದು ಸೂರನು “ನನ್ನ ಪ್ರಾಣಪದಕಳಾದ ಸರಸಿಯೇ.. ನನ್ನ ತಾಯಿ ಜಗಲೂರೆವ್ವ