ಪುಟ:ಅರಮನೆ.pdf/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೬ ಅರಮನೆ ಸಂಕಷ್ಟದಲ್ಲಿರುವಂತಿರುವುದು. ನಾನೀಗಲೇ ಹೊರಟು ಆ ಮಾತೆಯ ಯದುರು ಹಾಜರಿರಬೇಕಿರುವುದು. ನಿನ್ನ ಕಾಮತ್ರುಷೆಯನ್ನು ತಮಣಿ ಮಾಡಲಾಗದಿದ್ದುದಕೆ ಕ್ಷಮೆ ಯಾಚಿಸುವೆನು” ಯಂದು ಕೇಳಿಕೊಂಡನು. ಅದಕಿದ್ದು ಸರಸಿಯು “ನಿನ್ನ ಮಾತ್ರುಭಕ್ಕಿಂರು ಅಸದಳವಾದುದು. ಹೀಗಿಂದೀಗಲೇ ಹೋಗಿ ಬರುವಂತವನಾಗು.. ನೀನು ಮರಳಿ ಬರುವವರೆಗೆ ನಾವ್ಯಾರೂ ವಂದು ಹಿಡಿ ಹುಲ್ಲಾಗಲೀ, ವಂದು ಗುಟುಕು ನೀರನ್ನಾಗಲೀ ಮುಟ್ಟುವುದಿಲ್ಲ” ಯಂದು ಹೇಳಿ ಕಾಳಿ, ಮಾಳಿ, ಗಂಗಿ, ತುಂಗಿ, ರಂಗಿ, ಸಂಗಿ ಗೋಯಿಂದಿಯರೇ ಮೊದಲಾದ ಮಹಿಷಿಕಾ ಸುಂದರಿಯರು ತಮ್ಮ ಪ್ರಿಯತಮನನ್ನು ಬೀಳ್ಕೊಟ್ಟರು. ಅವರಿಂದ ಬೀಳುಕೊಂಡ ಸೂರನು ಪಂಚಕಲ್ಯಾಣಿ ಕುದುರೆಯಂತೆ ಪಟ್ಟಣ ಪ್ರವೇಶ ಮಾಡಿದನು. ಅಗೋ ಅಲ್ಲಿ ದುಕ್ಕದಿಂದ ಬಳಲಿ ಅರೆ ಮೂರೈ ಹೋಗಿರುವ ಮಾತ್ತುಮೂರಿಯು. ವಂದೊಂದು ಹೆಜ್ಜೆಯನಿಕ್ಕುತ ಬಳಿಸಾರು ಅಪ್ಯಾಯಮಾನತೆಯಿಂದ ಮುಖ ನೆಕ್ಕಿ 'ತಾಯೇ... ನನ್ನನ್ನು ಕೂಗಿ ಕರೆದ ಕಾರಣ ಯೇನು?” ಯಂದು ಗೊರಗುಟ್ಟಿದನು. ಆಕೆ ಆತನ ಕೊರಳನ್ನು ಬರಸೆಳೆದು ಅಪ್ಪಿಕೊಂಡು ಲೊಚಲೊಚ ಮುದ್ದಿಸಿದಳು. ಸೂರಾ.. ಸೂರಾss.. ನನಕಂದಾ..... ಯಂದುದ್ಧಾರ ಮಾಡಿದಳು. ಪಸು ಪಚ್ಚೆಗಳಷ್ಟೆ ಅರಮಾಡಿಕೊಳ್ಳಬವುದಾದ ಸಂಭಾಷಣೆ ಅವರೀಶ್ವರ ನಡುವೆ ನಡೆಯಿತು. ಅದು ಯಾವ ಪ್ರಕಾರ ನಡೆಯಿತೆಂದರೆ ಯೀ ಪ್ರಕಾರವಾಗಿ ನಡೆಯಿತು.... ತಾಯಿಯ ಮಾತನ್ನು ಆ ಕಂದಯ್ಯನು ಬಿಲ್‌ಕುಲ್ ವಪ್ಪಲಿಲ್ಲ. “ನಿನ್ನಂಥ ವೀರವನಿತೆ ಆಡೋ ಮಾತೇನು ತಾಯಿ..... ಹೆದರಿ ಪಲಾಯನ ಮಾಡಿದಲ್ಲಿ ಪ್ರಜೆಗಳು ಹೇಡಿಯಂದು ಆಡಿಕೊಳ್ಳುವು ದಿಲ್ಲವೇನು? ಮಿಂಚೇರಿಗೆ ಕೆಟ್ಟ ಹೆಸರು ತಗುಲುವುದಿಲ್ಲವೇನು? ಯಿಲ್ಲೇಯಿದ್ದು ಬಂದುದನ್ನು ಧಮ್ರದಿಂದ ಯದುರಿಸೋಣ.. ಸಮಯ ಬಂದಲ್ಲಿ ಪಟ್ಟಣದ ಕಲ್ಯಾಣಾರ್ಥವಾಗಿ ಮೀರ ಮರಣವನ್ನು ಅಪ್ಪಲಕ ಸಿದ್ದನಿರುವೆನು. ಬಲಿಗೊಂಡಲ್ಲಿ ಅಚಂದ್ರಾರವಾಗಿ ವುಳಿಯುವ ಯೀರಗಲ್ಲು.. ಯಿಲ್ಲದಿದ್ದಲ್ಲಿ ಮಾಮೂಲು ಲವುಕಿಕ ಜೀವನವು.. ನನ್ನಂಥ ಚತುಷ್ಪಾದಿಯ ಸಲುವಾಗಿ ನೀನೀ ಪರಿ ದುಕ್ಕಿಸುವುದು ಸರಿಯಲ್ಲ... ಧಯರದಿಂದಿರು ತಾಯೇ” ಯಂದು ಹೇಳಿದ್ದಕ್ಕೆ ಆ ತಾಯಿಯು ನಿನಗಿರುವಷ್ಟು ಗ್ರಾನ ನನಗಿಲ್ಲ ಕನಪ್ಪಾ.. ನೀನೇ ನನಗ ದಿಕ್ಕೂ ಬಂಧೂ ಬಳಗ ಯಲ್ಲಾವು... ನಿನ್ನ ಕಳಕೊಂಡು ನಾನು ಎಂದು ಛಣ ಬದುಕಿರಾಕಿಲ್ಲ... ನಿನ್ನ ಪರಾಕ್ರಮದ