ಪುಟ:ಅರಮನೆ.pdf/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೨೭ ಮ್ಯಾಲ ನನಗ ನಂಬುಕೆ ಅದss.. ನೀನು ಮಾತ್ರ ಯಾರ ಕಯೂ ಸಿಕ್ಕೋದು ಬ್ಯಾಡ.. ಮಯ್ಯ ಮ್ಯಾಲ ಖಬುರಿರಲಿ. ಹುಷಾರು..” ಯಂದು ನಾಕಾರು ಬುದ್ದಿವಾದದ ಮಾತಾಡಿದಳು. ಅದಕಿದ್ದು ಸೂರನು ಆಗಲಿ ತಾಯಿ...” 0ರಂದನು. ನಾಲಗೆ ಚಾಚಿ ಆಕೆಯ ಕಣ್ಣಾಲಿಗಳ ತುದಿಯಲ್ಲಿದ್ದ ಅಸ್ತುಬಿಂದುಗಳನ್ನು ಆಸನಗೊಂಡನು. ಆಕೆ ಬ್ಯಾಡಾಂದರೂ ಕೇಳದೆ ಪಟ್ಟಣದ ರಾಜಬೀದಿಯನ್ನು ಪ್ರವೇಶ ಮಾಡಿದನು. ಗಂಡಸರಿದ್ದಲ್ಲಿ ತನ್ನನ್ನು ಹಿಡಿಯಬವುದು ಯಂದು ಅಡ್ಡ ಬರುವ ರೀತಿಯಲ್ಲಿ ಹತ್ತು ಹೆಜ್ಜೆಗೊಂದೊಂದು ಸಲ ಗರನೆ ಹಾಕುತ, ಸಿಮಾವಲೋಕನ ಮಾಡುತ ಮೋಡೋಣಿಗಳಲ್ಲೆಲ್ಲ ಸುಂಟರುಗಾಳಿಯೋ ಪಾದಿಯಲ್ಲಿ ಸುಳುಸುಳಿದಾಡಿದನು.. ತನಗೆ ಗೊತ್ತು ಬಲ್ಲಂಥ ವಂದೊಂದು ಮನೆಯದುರು ನಿಂತು ಯಲಾಂಯ್ ಜಲಜಾ.. ಯಲಾಯ್ ರುಕ್ಕೂ......... ಯಲಾಮ್ ಸುಂದರೀ.. ಯಲಾಯ್ ರಂಭಾSS.. ಯಲಾಯ್ ಯಿಲೋತ್ತಮೇ.. ಯಂದು ಕೂಗಿ ಕರೆಯದಿರಲಿಲ್ಲ ತಾನು.. ತಮ್ಮ ಮನುಮಥನ ಕರೆ ಕೇಳಿಸಿಕೊಂಡ ಆ ಮಹಿಷ ಸಾನಿಯರು ತಾವಿದ್ದ ಕೊಟ್ಟಿಗೆಗಳೆಂಬ ಅಂತಃಪುರಗಳಿಂದ ಮುಕ್ತರಾಗಿ ಮೋಡೋಡಿ ಬಂದು ಆ ಚಿರಜವ್ವನಿಗನ ಹಿಂದ ಮುಂದ ಸೇರದ ಯಿರಲಿಲ್ಲ.. ಯಿದರಿಂದಾಗಿ ಮೋಣು ಮೋಣಿಯಿಂದ ಆ ಸಯ್ಯವು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ.. ಅವುಗಳ ಮೋಡಾಟವೇನು? ಅವುಗಳ ಖುರಪುಟದ ಸದ್ದೇನು? ಸದರಿ ಪಟ್ಟಣವನ್ನಾವರಿಕೆ ಮಾಡಿದ ಧೂಳೇನು? ಅವೆಲ್ಲವುಗಳನ್ನು ಮೋಡಾಡಿಸಿಕೊಂಡು ನಡೆಯುತ್ತ ಸಾಗಿದ ಅವನು ಸೀದ ಸಿಡೇಗಲ್ಲ ಕರಗಲ್ಲ ಬಳಿಗೆ ಬರುತಾನೆ.. ಆ ಮಹಿಷಾ ಸ್ತ್ರೀ ಸಮೂಹದ ವಡೆಯನು ಪ್ರತಿಯೊಬ್ಬರ ಕಡೆಗೆ ನೀವೆಷ್ಟು ಗಡುತರದವರು' ಯಂಬಂತೆ ನೋಡುತ್ತಾನೆ. ವಸ್ತಿಂರನ್ನು ಸಮೀಪಿಸುತ್ತಾನೆ..ಮೂರು ಸಲ ಪರದಕ್ಷಿಣೆ ಹಾಕುತ್ತಾನೆ.. ಅದರ ವಂದೊಂದು ಭಾಗವನ್ನು ನೆಕ್ಕಿ ಸ್ವಾಮಿ ನಿಷ« ಮೆರೆಯುತ್ತಾನೆ.. “ನನ್ನ ಸ್ವಾಮಿಯ ಸರೀರದೊಳಗಡೆ ನೀನು ಅಡಗಿ ಕುಂತಿರುವೆ ಅಂತಲ್ಲಾ.. ಯಿದು ನಿಜವಾಗಿದ್ದ ಪಕ್ಷದಲ್ಲಿ ಹೊರಗಡೆ ಬಂದು ನನ್ನೊಡನೆ ಸೆಣಸಿ ಬಲಿ ತಗೋ..” ಯಂದು ಸಾಂಬವಿಗೇ ಸವಾಲೆಸೆಯುತ್ತಾನೆ. ತನ್ನನ್ನು ಬಲಿ ತಗೊಳ್ಳುವುದೆಂದರ ಮಹಿಷಾಸುರನನ್ನು ಸಮ್ಮಾರ ಮಾಡಿದಷ್ಟು ಸುಲಭವೆಂದು ತಿಳಿಯದಿರು ಯಂದು ತನ್ನ ಪರಾಕ್ರಮದ ಸುಳಿವು ನೀಡುತ್ತಾನೆ. ಅದಕ ವಸ್ತಿಯು ಮುಗುಳು ನಗುವುದು.